ಮಡಿಕೇರಿ, ಅ. 21: ಈ ಬಾರಿಯ ತುಲಾ ಸಂಕ್ರಮಣ ಸಂದರ್ಭ ಜಿಲ್ಲಾಧಿಕಾರಿಗಳು ಹೊರಡಿಸಿದ ಆದೇಶವು ಜಾತ್ರೆಗೆ ಸಂಬಂಧಿಸಿದ ಹಿಂದಿನ ಮೂರು ಸಭೆಗಳ ನಿರ್ಣಯಕ್ಕೆ ವಿರುದ್ಧವಾಗಿದ್ದು, ಎಲ್ಲಾ ಗೊಂದಲಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ತಲಕಾವೇರಿ - ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಆರೋಪಿಸಿದ್ದಾರೆ.ಈ ಬಗ್ಗೆ ದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಾ. 12 ರಂದು ಜಿಲ್ಲಾಧಿಕಾರಿಗಳು ತುರ್ತು ಸಭೆ ಕರೆದು ವ್ಯವಸ್ಥಾಪನಾ ಸಮಿತಿಗೆ ಆದೇಶ ಪತ್ರವನ್ನು ಜಾರಿ ಮಾಡಿದ್ದರು, ಈ ಆದೇಶ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಹಿಂದೆ ನಡೆದ ಸಭೆಯ ನಿರ್ಣಯ ಮತ್ತು ಅಂಗೀಕಾರವನ್ನು ಗಾಳಿಗೆ ತೂರಿತು ಎಂದು ಹೇಳಿದ್ದಾರೆ. ಆದೇಶ ಪತ್ರದಲ್ಲಿ ತಾ. 17 ರಂದು ಪಾಲಿಸಬೇಕಾದ ನಿಯಮಗಳ ಬಗ್ಗೆ ಪ್ರಸ್ತಾಪಿಸಿದ್ದು, ಉಲ್ಲಂಘಿಸಿದರೆ, ವ್ಯವಸ್ಥಾಪನಾ ಸಮಿತಿ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಪರೋಕ್ಷ ಉಲ್ಲೇಖವಿದ್ದುದಾಗಿ ತಮ್ಮಯ್ಯ ಪ್ರಸ್ತಾಪಿಸಿದ್ದಾರೆ.ಈ ಆದೇಶವನ್ನು ಜಿಲ್ಲಾಧಿಕಾರಿ ಯವರು ಕೊನೆ ಗಳಿಗೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರನ್ನು ಮಾತ್ರ ಸಭೆಗೆ ಕರೆದು ಕೊಡುವುದರ ಒಳಗುಟ್ಟೇನು?. ಇದುವರೆಗೆ ನಡೆದ ಸಭೆಗಳಲ್ಲಿ ಆದ ಅಂಗೀಕಾರಕ್ಕೆ ಮಾನ್ಯತೆ ಇಲ್ಲವೇ. ಈ ಆದೇಶ ಪತ್ರವು ರವಾನೆ ಆಗಿರುವುದು ಜನಪ್ರತಿನಿಧಿಗಳಿಗೆ ಗೊತ್ತಿಲ್ಲವೇ? ಗೊತ್ತಿದ್ದರೂ ಜಾಣ ಮೌನ ಏಕೆ. ಸಾರ್ವಜನಿಕರ ಎದುರು ಭಾಷಣ ಬಿಗಿದು ನಿಯಮವನ್ನು ಅಂಗೀಕಾರ ಮಾಡಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವ್ಯವಸ್ಥಾಪನಾ ಸಮಿತಿಯನ್ನು ಏಕೆ ಬಲಿಪಶು ಮಾಡಿದರು ಎಂದು ಪ್ರಶ್ನಿಸಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡಂತೆ, ತೀರ್ಥೋದ್ಭವದಂದು ಬೆಳಿಗ್ಗೆ ಆರು ಗಂಟೆಯಿಂದ ವಾಹನವನ್ನು ತಲಕಾವೇರಿಗೆ ಬಿಡುವಂತೆ ಮಡಿಕೇರಿ ಡಿಎಸ್‍ಪಿ ಅವರಿಗೆ ಉಸ್ತುವಾರಿ ಮಂತ್ರಿ ಮತ್ತು ಎಂಎಲ್‍ಎ ಆದೇಶ ಮಾಡಿದ್ದರು. ನಡೆದುಕೊಂಡು ಹೋಗುವವರನ್ನು ಯಾವುದೇ ಕಾರಣಕ್ಕೂ ತಡೆಯಬಾರದೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಏಕಾಏಕಿ ಈ ಆದೇಶ ಪತ್ರವನ್ನು ವ್ಯವಸ್ಥಾಪನಾ ಸಮಿತಿಗೆ ಕಳುಹಿಸಿದ ಹಿಂದೆ ಯಾರ ಹುನ್ನಾರವಿತ್ತು. ಇದು ಕೊಡಗಿನ ಭಕ್ತರ ಬರುವಿಕೆಯನ್ನು ತಡೆಯುವ ಷಡ್ಯಂತರವಲ್ಲವೇ, ಇದಕ್ಕೆ ಜಿಲ್ಲಾಧಿಕಾರಿಗಳೇ ಉತ್ತರಿಸಬೇಕು ಎಂದಿದ್ದಾರೆ.
ತೀರ್ಥೋದ್ಭವದ ಸಂದರ್ಭದಲ್ಲಿ ಅಧ್ಯಕ್ಷರು ಹೊರ ನಡೆದರು ಎಂದು ಪ್ರಕಟಗೊಂಡಿದ್ದು, ಅದು ಸತ್ಯಕ್ಕೆ ದೂರವಾಗಿದೆ. ತಾನು ತೀರ್ಥ ಕುಂಡಿಕೆ ಬಳಿ ಕೋವಿಡ್ ನಿಯಮ
(ಮೊದಲ ಪುಟದಿಂದ) ಮೀರಿ ಭಕ್ತರು ಹಾಗೂ ಜನಪ್ರತಿನಿಧಿಗಳು ನೆರೆದಾಗ, ನಿಯಮ ಪಾಲಿಸಲು ಅಲ್ಲಿಂದ ತೆರಳಿ ತಲಕಾವೇರಿಯಲ್ಲಿ ಹಾಗೂ ಭಾಗಮಂಡಲದಲ್ಲಿ ಉಪಸ್ಥಿತನಾಗಿದ್ದೆ ಎಂದು ಬಿ.ಎಸ್. ತಮ್ಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಎಂ.ಬಿ. ದೇವಯ್ಯನವರ ದುಡಿ ಕೊಟ್ಟ್‍ಪಾಟ್ ಅನ್ನು ಕೋವಿಡ್ ನಿಯಮ ಪಾಲಿಸಲು ಕುಂಡಿಕೆಯ ಹತ್ತಿರ ಮಾತ್ರ ಹಾಡಲು ನಿಬರ್ಂಧಿಸಲಾಗಿತ್ತು. ಅಕ್ಟೋಬರ್ ಒಂದನೇ ತಾರೀಕಿನಂದು ಎಂ.ಬಿ. ದೇವಯ್ಯನವರು ಮತ್ತು ಸಂಗಡಿಗರು ಪೂರ್ವಭಾವಿ ಸಭೆಗಿಂತ ಮುಂಚಿತವಾಗಿ ಮಡಿಕೇರಿ ಶಾಸÀಕರ ಕಚೇರಿಯಲ್ಲಿ ಉಸ್ತುವಾರಿ ಮಂತ್ರಿಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಮತ್ತು ಪೂರ್ವಭಾವಿ ಸಭೆಯಲ್ಲಿ ಯಾವುದೇ ಪ್ರಸ್ತಾಪ ಮಾಡದೆ ಈಗ ವ್ಯವಸ್ಥಾಪನಾ ಸಮಿತಿಯನ್ನು ದೂರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಎಲ್ಲಾ ನಿಯಮಗಳನ್ನು ಪಾಲಿಸುತ್ತ ಬಂದ ವ್ಯವಸ್ಥಾಪನಾ ಸಮಿತಿ ಮತ್ತು ಕಾರ್ಯಕಾರಿ ಅಧಿಕಾರಿಯವರು ಕೊನೆಗಳಿಗೆಯಲ್ಲಿ ಬಂದು ಕಾನೂನನ್ನು ಉಲ್ಲಂಘನೆ ಮಾಡಿ ಗುಂಪುಕೂಡಿಕೊಂಡು, ಕೋವಿಡ್ ಮಾರ್ಗ ಸೂಚಿಯನ್ನು ಉಲ್ಲಂಘಿಸಿ ಮಾನ್ಯ ಉಸ್ತುವಾರಿ ಸಚಿವರನ್ನು ದಿಕ್ಕು ತಪ್ಪಿಸಿ ತೀರ್ಥ ಕುಂಡಿಕೆ ಹತ್ತಿರ ಜನಪ್ರತಿನಿಧಿಗಳು ಗುಂಪು ಕೂಡಿಕೊಂಡು, ತೀರ್ಥೋದ್ಭವವನ್ನು ವೀಕ್ಷಿಸಿದ್ದು, ಯಾರ ತಪ್ಪು. ಇದಕ್ಕೆ ಜಿಲ್ಲಾಧಿಕಾರಿಯವರು ಯಾವ ರೀತಿ ಹಾಗೂ ಯಾರ ಮೇಲೆ ಕಾನೂನು ಕ್ರಮಕೈಗೊಳ್ಳುತ್ತಾರೆ, ಇದಕ್ಕೆ ವ್ಯವಸ್ಥಾಪನಾ ಸಮಿತಿ ಅಥವಾ ಕಾರ್ಯಕಾರಿ ಅಧಿಕಾರಿ ಕಾರಣವೆ? ಎಂದು ತಮ್ಮಯ್ಯ ಕೇಳಿದ್ದಾರೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ದೇವಸ್ಥಾನದ ಧಾರ್ಮಿಕ ಕೈಂಕರ್ಯಗಳಿಗೆ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಮಾತ್ರ ಸೀಮಿತವಲ್ಲದೆ, ಈ ರೀತಿಯ ಕಾನೂನು ಸುವ್ಯವಸ್ಥೆ ಪಾಲಿಸಲು ವ್ಯವಸ್ಥಾಪನಾ ಸಮಿತಿಗೆ ಅಧಿಕಾರವಿದೆಯೇ? ಇದಕ್ಕೆ ಸಂಬಂಧಪಟ್ಟ ಪೆÇಲೀಸ್ ಇಲಾಖೆ ಮತ್ತು ಬೇರೆ ಇಲಾಖೆ ಇರಲಿಲ್ಲವೇ. ಅದನ್ನು ಬಿಟ್ಟು ವ್ಯವಸ್ಥಾಪನಾ ಸಮಿತಿ ಮತ್ತು ಕಾರ್ಯಕಾರಿ ಅಧಿಕಾರಿಯನ್ನು ಹೊಣೆಮಾಡುವ ಅವಶ್ಯಕತೆ ಏನಿತ್ತು; ಇದರ ಬಗ್ಗೆ ಕಾನೂನು ತಜ್ಞರನ್ನು ಸಂಪರ್ಕಿಸಿ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.