*ಗೋಣಿಕೊಪ್ಪಲು, ಅ. 19 : ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ವಿದೇಶದಲ್ಲಿ ಕೆಲವೇ ಉದ್ಯಮಿಗಳು ಡೈರಿ ಫಾರಂ ಮೂಲಕ ಹೆಚ್ಚು ಹಾಲು ಉತ್ಪಾದಿಸಿದರೆ, ಭಾರತದಲ್ಲಿ ಪ್ರತಿ ಯೊಬ್ಬ ರೈತನೂ ಹಾಲು ಉತ್ಪಾದನೆ ಮೂಲಕ ಉಪ ಕಸುಬು ಮಾಡಿ ಕೊಂಡಿದ್ದಾರೆ ಎಂದು ಗೋಣಿ ಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಕೆ.ಎ.ದೇವಯ್ಯ ಹೇಳಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಮತ್ತು ಕಾವೇರಿ ಹಾಲು ಉತ್ಪಾದಕರ ಸಂಘ, ಕಾಮತ್ ಗ್ರೂಪ್ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜರುಗಿದ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಗಾರ ವಿಜ್ಞಾನಿ ಕೆ.ಎ.ದೇವಯ್ಯ ಹೇಳಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಮತ್ತು ಕಾವೇರಿ ಹಾಲು ಉತ್ಪಾದಕರ ಸಂಘ, ಕಾಮತ್ ಗ್ರೂಪ್ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜರುಗಿದ ವೈಜ್ಞಾನಿಕ ಹೈನುಗಾರಿಕೆ ತರಬೇತಿ ಕಾರ್ಯಗಾರ ವಹಿವಾಟು ನಡೆಸಬಹುದಾಗಿದೆ ಎಂದರು.
ಗೋವಿನ ಸಗಣಿ ಗೊಬ್ಬರ ಮಣ್ಣಿನ ಫಲವತ್ತತೆಗೂ ಅಗತ್ಯವಿದ್ದು ವೈಜ್ಞಾನಿಕ ಹೈನುಗಾರಿಕೆಯನ್ನು ಪ್ರತಿಯೊಬ್ಬ ರೈತರೂ ಅಳವಡಿಸಿ ಕೊಳ್ಳುವಂತಾಗಬೇಕು ಎಂದು ನುಡಿದರು. ಕಾರ್ಯಕ್ರಮ ಉದ್ಘಾಟಿಸಿದ ಪೆÇನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧ ಸ್ವರೂಪಾನಂದ ಸ್ವಾಮೀಜಿ ಮಾತನಾಡಿ ಪರಿಪೂರ್ಣ ಭಾರತದ ಕೃಷಿಕರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವದು
(ಮೊದಲ ಪುಟದಿಂದ) ದುರದೃಷ್ಟಕರ. ಕೃಷಿ ಫಸಲಿನಲ್ಲಿ ಲಾಭ ಕಾಣದೆ ನಷ್ಟ ಅನುಭವಿಸಿದಾಗ ಧೃತಿಗೆಡದೆ, ಸೋಲಿಗೆ ಅಂಜದೆ ನಿಭಾಯಿಸುವ ಜಾಣತನ ಇರಬೇಕು. ಎಂಥ ಸಂದರ್ಭ ಎದುರಾದರು ಎದೆಗುಂದಬಾರದು ಎಂದು ಕಿವಿ ಮಾತು ಹೇಳಿದರು.
ದಕ್ಷಿಣ ಕೊಡಗು ಈ ಹಿಂದೆ ಹೈನುಗಾರಿಕೆಗೆ ಪ್ರಸಿದ್ಧವಾಗಿತ್ತು. ಕೊಡಗಿನ ಕೃಷಿಕರು ಸಂಕಷ್ಟದಲ್ಲಿರುವ ಇಂದಿನ ದಿನಗಳಲ್ಲಿ ಹೈನುಗಾರಿಕೆ ಲಾಭದಾಯಕವಾಗಿದೆ. ಜನಜೀವನ ಅಭಿವೃದ್ಧಿಯ ದೃಷ್ಟಿಯಲ್ಲಿ ಮನೆ ಬಾಗಿಲಿನಲ್ಲಿಯೇ ಹಾಲು ಸಂಗ್ರಹ, ವಿತರಣೆಗೆ ಅವಕಾಶ ಸಿಗಬೇಕು.
ಕೇವಲ ಕಷ್ಟದಿಂದ ದುಡಿದರೆ ಸಾಲದು. ಜ್ಞಾನದ ಮೂಲಕ ಲಾಭದಾಯಕವಾಗಿ ಉದ್ದಿಮೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು. ಉದ್ಯಮಿ ಕೇಶವ್ ಕಾಮತ್ ಮಾತನಾಡಿ ಹಿಂದೆ ದಿ.ಜೆ.ಎ. ಕರುಂಬಯ್ಯ ಜಿಲ್ಲಾ ಪರಿಷತ್ ಅಧ್ಯಕ್ಷರಾಗಿದ್ದಾಗ ಪೆÇನ್ನಂಪೇಟೆಯಲ್ಲಿ ಹಾಲು ಉತ್ಪಾದನಾ ಘಟಕ ಸ್ಥಾಪಿಸಲು ಉತ್ತೇಜನ ನೀಡಿದ್ದರು. ನಂತರ ಯೋಜನೆ ನೇಪಥ್ಯಕ್ಕೆ ಸರಿಯಿತು. ಹಾಲು ಉತ್ಪಾದಕರ ಒಕ್ಕೂಟ ಸ್ಥಾಪನೆ ಮೂಲಕ ಮತ್ತೆ ಪೆÇನ್ನಂಪೇಟೆ ಘಟಕವನ್ನು ಪುನರುಜ್ಜೀವನ ಗೊಳಿಸಬೇಕು ಎಂದರು. ಬ್ಯಾಂಕ್‍ನಿಂದ ಸಿಗುವ ಸಾಲ, ಸಬ್ಸಿಡಿಯನ್ನು ಬಳಸಿಕೊಂಡು ಲಾಭದಾಯಕ ಉದ್ಯಮ ಸ್ಥಾಪನೆಗೆ ಮುಂದಾಗಬೇಕು ಎಂದು ತಿಳಿಸಿದರು. ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಡಾ. ಸುರೇಶ್ ಮಾಹಿತಿ ನೀಡಿದರು. ಕಾವೇರಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ ಮುರು ವಂಡ ಕಸ್ತೂರಿ ಸುಬ್ಬಯ್ಯ ನಬಾರ್ಡ್ ಸಂಪನ್ಮೂಲ ವ್ಯಕ್ತಿ ತುಷಾರ್ ಕುಲಕರ್ಣಿ ಹಾಗೂ ಇತರರು ಇದ್ದರು. - ಎನ್.ಎನ್.ದಿನೇಶ್