ಕಡಿಮೆಯಾಗುತ್ತಿದೆ ಕೋವಿಡ್ ಪಾಸಿಟಿವ್ ದರ
ನವದೆಹಲಿ, ಅ. 19: ಸತತ ನಾಲ್ಕನೇ ದಿನವೂ ಕೋವಿಡ್ ಪಾಸಿಟಿವ್ ದರ ಶೇ. 8ಕ್ಕಿಂತಲೂ ಕಡಿಮೆಯಾಗಿದ್ದು, ಸೋಂಕು ಹರಡುವಿಕೆ ಪರಿಣಾಮ ಕಾರಿಯಾಗಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ. ದೇಶದಲ್ಲಿ ಸತತವಾಗಿ ಪಾಸಿಟಿವ್ ದರ ಶೇ. 7.94 ರಷ್ಟಿದ್ದು, ಕುಸಿತ ಮುಂದುವರೆದಿದೆ. ದೇಶಾದ್ಯಂತ ಉನ್ನತ ಮಟ್ಟದ ಸಮಗ್ರ ಪರೀಕ್ಷೆಯಿಂದ ಇದು ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಪಾಸಿಟಿವ್ ದರದಲ್ಲಿನ ಕುಸಿತವೂ ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣವನ್ನು ತೋರಿಸುತ್ತಿದೆ. ಸೋಂಕನ್ನು ಬೇಗನೆ ಗುರುತಿಸಿ, ಸೂಕ್ತ ಸಮಯಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಿರುವುದರಿಂದ ಮರಣ ಪ್ರಮಾಣದಲ್ಲೂ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದೆ. ಈವರೆಗೂ ಕೊರೊನಾ ವೈರಸ್ ಸೋಂಕು ಪತ್ತೆಯಾಗಿ ನಡೆಸಲಾಗಿರುವ ಒಟ್ಟಾರೇ, ಪರೀಕ್ಷೆಗಳ ಸಂಖ್ಯೆ 9.5 ಕೋಟಿಯನ್ನು ದಾಟಿದೆ. ಅಕ್ಟೋಬರ್ ಮೂರನೇ ವಾರದಲ್ಲಿ ಸರಾಸರಿ ದೈನಂದಿನ ಪಾಸಿಟಿವ್ ದರ ಪ್ರಮಾಣವು ಶೇ. 6.13 ಆಗಿದೆ ಎಂದು ಸಚಿವಾಲಯ ತಿಳಿಸಿದೆ. ಇದು ಕೇಂದ್ರ ಸರ್ಕಾರದ ಯಶಸ್ವಿ ಸೋಂಕು ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ತಾಂತ್ರಿಕ ಪರಿಣಾಮವಾಗಿದೆ. ಇದನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿಯಾಗಿ ಅನುಸರಿಸುತ್ತಿವೆ ಎಂದು ಒತ್ತಿ ಹೇಳಿದೆ.
ಚೀನಾ ಸೈನಿಕನನ್ನು ಬಂಧಿಸಿದ ಭಾರತ
ಲಡಾಖ್, ಅ. 19: ಲಡಾಖ್‍ನ ಚುಮಾರ್-ಡೆಮ್‍ಚೋಕ್ ಪ್ರದೇಶದಲ್ಲಿ ಚೀನಾದ ಸೇನೆಗೆ ಸೇರಿದ್ದ ಸೈನಿಕನೊಬ್ಬನನ್ನು ಭಾರತೀಯ ಭದ್ರತಾ ಪಡೆ ಬಂಧಿಸಿದೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‍ಎ) ಸೈನಿಕ ಅಜಾಗರೂಕತೆಯಿಂದ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿರಬಹುದು ಎನ್ನಲಾಗಿದ್ದು, ವಶಕ್ಕೆ ಪಡೆದ ಸೈನಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ತನಿಖೆ ಮುಗಿದ ನಂತರ ಪೆÇ್ರೀಟೋಕಾಲ್ ಪ್ರಕಾರ ಅವನನ್ನು ಚೀನಾಗೆ ವಾಪಾಸ್ ಕಳಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಎಎನ್‍ಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಲಡಾಖ್‍ನಲ್ಲಿ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆ ಈ ಬೆಳವಣಿಗೆ ನಡೆದಿರುವ ಕಾರಣ ತನಿಖಾ ಸಂಸ್ಥೆಗಳು ಗೂಢಚರ್ಯೆ ದೃಷ್ಟಿಕೋನದಿಂದ ತನಿಖೆ ಕೈಗೊಂಡಿವೆ. ಚೀನಾ ಸೇನೆ ಈ ಭಾಗದ ಭಾರತೀಯ ಸೈನ್ಯದ ತಾಣಗಳ ಮೇಲೆ ಬೇಹುಗಾರಿಕೆ ನಡೆಸಿರಬಹುದೆಂದು ಶಂಕಿಸಲಾಗಿದೆ.
ಪರಿಹಾರ ಒದಗಿಸುವ ಭರವಸೆ ನೀಡಿದ ಪ್ರಧಾನಿ
ಮೈಸೂರು, ಅ. 19: ನೆರೆ ಬಾಧಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ನಾಡಹಬ್ಬದ ದಸರಾದ ಪ್ರಯುಕ್ತ ನಾಡಿನ ಜನರಿಗೆ ಶುಭಾಶಯ ಕೋರಿದರು. ಕೋವಿಡ್ 19 ಕಾರಣದಿಂದ ಕೆಲವು ನಿರ್ಬಂಧ ಗಳಿದ್ದರೂ, ಹಬ್ಬ ಆಚರಣೆಗೆ ಯಾವುದೇ ಉತ್ಸಾಹ ಕುಂದಿಲ್ಲ ಎಂದರು. ಭಾರೀ ಮಳೆ ಹಬ್ಬಗಳ ಆಚರಣೆಗೆ ಸ್ವಲ್ಪ ಮಂಕಾಗಿಸಿದೆ. ಪ್ರವಾಹ ಪೀಡಿತ ಕುಟುಂಬಗಳಿಗೆ ತೀವ್ರ ಸಹಾನೂಭೂತಿಯನ್ನು ವ್ಯಕ್ತಪಡಿಸುವುದಾಗಿ ಮೋದಿ ಹೇಳಿದರು. ಈ ದಶಕವನ್ನು ಭಾರತದ ದಶಕವನ್ನಾಗಿ ಮಾಡಲು ಹಾಗೂ ಬೆಳವಣಿಗೆ ಖಚಿತತೆಗಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯ ಬದಲಾವಣೆ ಮಾಡಲಾಗುತ್ತಿದೆ. ಕಳೆದ ಆರೇಳು ತಿಂಗಳುಗಳಲ್ಲಿ ಕೃಷಿ, ಬಾಹ್ಯಾಕಾಶ, ರಕ್ಷಣೆ, ವಾಯುಯಾನ ಅಥವಾ ಕಾರ್ಮಿಕ ಕ್ಷೇತ್ರಗಳಲ್ಲಿ ವೇಗ ಮತ್ತು ಸುಧಾರಣೆಯ ವ್ಯಾಪ್ತಿ ಹೆಚ್ಚಾಗುತ್ತಿರುವುದನ್ನು ನೀವು ನೋಡಿರಬಹುದೆಂದರು.
ನಾಗರಹೊಳೆ ರಸ್ತೆಯಲ್ಲಿ ಸ್ಯಾಂಪ್ ಟಿಕೆಟ್ ವ್ಯವಸ್ಥೆ
ಬೆಂಗಳೂರು, ಅ. 19: ಲಾಕ್‍ಡೌನ್ ಸಡಿಲಿಕೆಯಾಗುತ್ತಾ ಬಂದಂತೆ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶಗಳಲ್ಲಿ ಅಪಘಾತಗಳು ಸಂಭವಿ ಸುತ್ತಿವೆ. ಅಭಯಾರಣ್ಯಗಳ ಸುತ್ತಮುತ್ತ ಜನರ, ವಾಹನಗಳ ಓಡಾಟವನ್ನು ನಿಯಂತ್ರಿಸಲು, ಕಾಡು ಪ್ರಾಣಿಗಳು ಅಜಾಗರೂಕತೆಯಿಂದ ವಾಹನ ಓಡಿಸುವ ಚಾಲಕರಿಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ಕರ್ನಾಟಕ ಅರಣ್ಯ ಇಲಾಖೆ ನಾಗರಹೊಳೆ ಹುಲಿ ಅಭಯಾರಣ್ಯದ ಮೂಲಕ ಹಾದುಹೋಗುವ ವಾಹನಗಳ ಬಗ್ಗೆ ಕಣ್ಣಿಟ್ಟಿದೆ. ಅರಣ್ಯ ರಸ್ತೆಗಳಲ್ಲಿ ಹಾದುಹೋಗುವ ವಾಹನಗಳ ವೇಗವನ್ನು ತಪಾಸಣೆ ಮಾಡಲು ಸಮಯಾಧಾರಿತ ಸ್ಯಾಂಪ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮೊದಲ ಲಾಕ್‍ಡೌನ್ ಹೇರಿಕೆಯಾದ ನಂತರ ನಾಗರಹೊಳೆ ಅಭಯಾರಣ್ಯ ಸಿಬ್ಬಂದಿ ವಾಹನಗಳ ಓಡಾಟವನ್ನು ಪರಿಶೀಲಿಸುತ್ತಿದ್ದಾರೆ. ನಂತರ 11 ಪ್ರಾಣಿಗಳು ಆನೆಚೌಕ ಮತ್ತು 8 ಪ್ರಾಣಿಗಳು ಹುಣಸೂರಿನಲ್ಲಿ ಮೃತಪಟ್ಟಿವೆ. ಹೀಗಾಗಿ ಹುಣಸೂರು-ಗೋಣಿಕೊಪ್ಪ ಹೆದ್ದಾರಿಯಲ್ಲಿ ವಾಹನಗಳ ಓಡಾಟದ ಬಗ್ಗೆ ಸಿಬ್ಬಂದಿಗಳು ತಪಾಸಣೆ ಮಾಡುತ್ತಿದ್ದಾರೆ. ಇಲ್ಲಿ ಅಲ್ಲೂರು ಗೇಟ್, ಪಿರಿಯಾಟ್ಟಣ-ಗೋಣಿಕೊಪ್ಪ ಮೂಲಕ ಬೂದಿತಿಟ್ಟು ಗೇಟ್ ಆಗಿ ವಾಹನಗಳು ಚಲಿಸುತ್ತವೆ.
ಹೆಲ್ಮೆಟ್ ಹಾಕದಿದ್ದರೆ ಲೈಸೆನ್ಸ್ ರದ್ದು
ಬೆಂಗಳೂರು, ಅ. 19: ರಾಜ್ಯ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದ್ದು, ಹೆಲ್ಮೆಟ್ ಹಾಕದಿದ್ದರೆ ದಂಡದ ಜೊತೆ ಮೂರು ತಿಂಗಳು ಚಾಲನಾ ಪರವಾನಿಗೆ (ಡಿಎಲ್) ರದ್ದಾಗಲಿದೆ. ಮೋಟಾರು ಕಾಯ್ದೆ 1988ರ ಕಲಂ 194ರ ಅನ್ವಯ ಸರ್ಕಾರ ಆದೇಶಿಸಿದೆ. 4 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಜೊತೆಗೆ ಹಿಂಬದಿ ಸವಾರರು ಸಹ ಕಡ್ಡಾಯವಾಗಿ ಹೆಲ್ಮೆಟ್ ಹಾಕಬೇಕು. ರಾಜ್ಯದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 230 ಉಪ ನಿಯಮ (1)ರ ಪ್ರಕಾರ ಎಲ್ಲ ದಿಚಕ್ರ ವಾಹನ ಸವಾರರು, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸದೇ ಸಂಚರಿಸುವ ಪರಿಣಾಮವಾಗಿ ರಸ್ತೆ ಅಪಘಾತಗಳಲ್ಲಿ ಸವಾರರು ಸಾವನ್ನಪ್ಪುತ್ತಿದ್ದಾರೆ. ಇಂತಹ ಮರಣ-ತೀವ್ರತರವಾದ ಗಾಯಗಳನ್ನ ತಡೆಗಟ್ಟಲು ಮೋಟಾರು ವಾಹನಗಳ ಕಾಯ್ದೆಯಡಿ ದಂಡ ಮತ್ತು ಡಿಎಲ್ ಅಮಾನತುಗೊಳಿಸಲು ಸರ್ಕಾರ ಮುಂದಾಗಿದೆ.
ಬೆಣ್ಣೆದೋಸೆ ಹೊಟೇಲ್ ಅಗ್ನಿಗಾಹುತಿ
ಬೆಂಗಳೂರು, ಅ. 19: ಬೆಂಗಳೂರು ನಗರ ಬಸವನಗುಡಿ ಸಮೀಪದ ನೆಟ್ಕಲ್ಲಪ್ಪ ಸರ್ಕಲ್‍ನಲ್ಲಿರುವ ದಾವಣಗೆರೆ ಬೆಣ್ಣೆದೋಸೆ ಹೊಟೇಲ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಹೊಟೇಲ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಈ ವೇಳೆ ಹೊಟೇಲ್‍ನಲ್ಲಿದ್ದವರು ಹೊರಗೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಷಯ ಅರಿತು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸಿತು. ಶಾರ್ಟ್ ಸಕ್ರ್ಯೂಟ್ ಅಥವಾ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಬಸವನಗುಡಿ ಪೆÇಲೀಸರು ಪರಿಶೀಲನೆ ನಡೆಸಿದರು.
ಮುಖ್ಯಮಂತ್ರಿ ಚಂದ್ರುಗೆ ಮುರುಘಾಶ್ರೀ ಪ್ರಶಸ್ತಿ
ಚಿತ್ರದುರ್ಗ, ಅ. 19: ರಂಗಭೂಮಿ, ಸಿನಿಮಾ ಕ್ಷೇತ್ರದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸೇರಿ ಐವರನ್ನು ಈ ಸಾಲಿನ "ಮುರುಘಾಶ್ರೀ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದೆ. ತಾ. 24 ರಂದು ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಟ್ ಮುಖ್ಯಮಂತ್ರಿ ಚಂದ್ರು ಸೇರಿ ಐವರಿಗೆ ಈ ಸಾಲಿನ ಮುರುಘಾಶ್ರೀ ಪ್ರಶಸ್ತಿ ಪ್ರದಾನ ಮಾಡಲು ತೀರ್ಮಾನಿಸಿದ್ದೇವೆ ಎಂದರು. ಮುಖ್ಯಮಂತ್ರಿ ಚಂದ್ರು ಅವರೊಂದಿಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್. ಬಿಲ್ಲಪ್ಪ, ಹುಲುಸೂರು ಗುರುಬಸವೇಶ್ವರ ಮಠದ ಶಿವಾನಂದ ಸ್ವಾಮೀಜಿ, ಮದ್ಯಪಾನ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿರುವ ಸ್ವರ್ಣ ಭಟ್ ಹಾಗೂ ಧರ್ಮದರ್ಶಿ ಎಸ್. ಷಣ್ಮುಖಪ್ಪ ಅವರುಗಳು ಈ ಗೌರವಕ್ಕೆ ಪಾತ್ರವಾಗಿದ್ದಾರೆ.
ಇಬ್ಬರು ಯುವಕರು ಸಮುದ್ರ ಪಾಲು
ಕಾಪು, ಅ. 19: ಬೆಂಗಳೂರಿನಿಂದ ಕಾಪು ಕಡಲತೀರಕ್ಕೆ ಬಂದಿದ್ದ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಕಾರ್ತಿಕ್ (22) ಮತ್ತು ರೂಪೇಶ್ (21) ಎಂದು ಗುರುತಿಸಲಾಗಿದೆ. ಇತರ ಮೂವರು ಯುವಕರಾದ ದಿಲೀಪ್, ಲಿಖಿತ್ ಮತ್ತು ಜಯಂತ್‍ರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.