ಕೂಡಿಗೆ, ಅ. 20: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ತಮ್ಮ ಗ್ರಾಮಗಳ ಕಾಮಗಾರಿಯನ್ನು ಕ್ರಿಯಾ ಯೋಜನೆ ಮೂಲಕ ಕೈಗೊಳ್ಳಲು ಆಯಾ ಗ್ರಾಮದ ಗ್ರಾಮಸ್ಥರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವಂತೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂತೋಷ್ ಮನವಿ ಮಾಡಿದ್ದಾರೆ.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಉಪ ರಸ್ತೆಗಳು ಮತ್ತು ರೈತರ ಕಣಗಳ ನಿರ್ಮಾಣ ಶಾಲಾ ತಡೆಗೋಡೆ, ಅಂಗನವಾಡಿಯ ತಡೆಗೋಡೆ ಸೇರಿದಂತೆ ರೈತರ ಜಮೀನಿಗೆ ತೆರಳಲು ಅನುಕೂಲವಾ ಗುವಂತೆ ಸಂಪರ್ಕ ರಸ್ತೆ ಸೇರಿದಂತೆ ಅನೇಕ ಕಾಮಗಾರಿಯನ್ನು ನಡೆಸಲು ಅನುಕೂಲ ಇರುವುದರಿಂದ ಸ್ಥಳೀಯ ಉದ್ಯೋಗ ಖಾತರಿ ಯೋಜನೆಗೆ ತಮ್ಮ ಹೆಸರನ್ನು ಸೇರಿಸಿ ಅದರ ಮೂಲಕ ಕಾಮಗಾರಿಯನ್ನು ನಿರ್ವಹಿ ಸಿದಲ್ಲಿ ಗ್ರಾಮದ ಪ್ರಗತಿ ಸಾಧ್ಯವಿದೆ ಎಂದಿದ್ದಾರೆ. ಆ ಕಾಮಗಾರಿಯ ಹಣವು ನೇರವಾಗಿ ನೋಂದಣಿ ದಾರರ ಹೆಸರಿಗೆ ಬರುತ್ತದೆ. ಇದರಿಂದ ಗ್ರಾಮಸ್ಥರಿಗೆ ಕೆಲಸ ಮಾಡಲು ಸಹಕಾರಿ ಯಾಗುತ್ತದೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಲು ಸಂತೋಷ್ ಕೋರಿದ್ದಾರೆ.