ಕೂಡಿಗೆ, ಅ. 20: ಕೂಡಿಗೆ ಗ್ರಾಮ ವ್ಯಾಪ್ತಿಯ ಹೆಗ್ಗಡಹಳ್ಳಿ - ಕೋಟೆ ಗ್ರಾಮದಲ್ಲಿರುವ ದಂಡಿನಮ್ಮ ಕೆರೆಯು ಸುಮಾರು 409 ಎಕರೆಗಳಷ್ಟು ಪ್ರದೇಶಗಳಿಗೆ ಬೇಸಾಯ ಮಾಡಲು ನೀರು ಒದಗಿಸುವ ಕೆರೆಯಾಗಿದ್ದು, ಇದೀಗ ಒತ್ತುವರಿಯಾಗಿರುವ ಹಿನ್ನೆಲೆಯಲ್ಲಿ ಈ ಕೆರೆಯ ಒತ್ತುವರಿಯನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ ಮತ್ತು ತಾಲೂಕು ಕಂದಾಯ ಅಧಿಕಾರಿಗಳಿಗೆ ಕೂಡಿಗೆ ಗ್ರಾಮದ ಬಸವೇಶ್ವರ ಮತ್ತು ದಂಡಿನಮ್ಮ ದೇವಾಲಯ ಸಮಿತಿ ವತಿಯಿಂದ ಮನವಿ ಸಲ್ಲಿಸಿ ಆರು ತಿಂಗಳುಗಳು ಕಳೆದಿವೆ. ಇನ್ನಾದರೂ ಈ ಬಗ್ಗೆ ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.