ಮಡಿಕೇರಿ, ಅ. 19: ಕರ್ನಾಟಕ ರಾಜ್ಯದೊಂದಿಗೆ ಕೊಡಗು ಜಿಲ್ಲೆಯಲ್ಲಿ ಕುಟುಂಬದ ಆಸ್ತಿಗೆ ಸಂಬಂಧಪಟ್ಟಿರುವ ಕೃಷಿ ಜಮೀನುಗಳ ಪೌತಿ ಖಾತೆಯಲ್ಲಿನ ಹೆಸರು ಬದಲಾವಣೆಗೆ, ಕಂದಾಯ ಅಧಿಕಾರಿಗಳು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕೆಂದು ಸರಕಾರ ಆದೇಶಿಸಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಗಮನ ಸೆಳೆದಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಆರ್. ಅಶೋಕ್ ಅವರ ನಿರ್ದೇಶನದಂತೆ ಇಲಾಖೆಯ ಅಧೀನ ಕಾರ್ಯದರ್ಶಿ ಕಮಲ ಜಯರಾಂ ತಾ. 17 ರಂದು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಈ ಅವಕಾಶವನ್ನು ಜಿಲ್ಲೆಯ ಜನತೆ ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.ಈ ಸುತ್ತೋಲೆಯಂತೆ ಕೃಷಿ ಜಮೀನು ಮಾಲೀಕರು ಮೃತರಾದ ಬಳಿಕ, ಸಂಬಂಧಿಸಿದ ಮಡಿಕೇರಿ, ಅ. 19: ಕರ್ನಾಟಕ ರಾಜ್ಯದೊಂದಿಗೆ ಕೊಡಗು ಜಿಲ್ಲೆಯಲ್ಲಿ ಕುಟುಂಬದ ಆಸ್ತಿಗೆ ಸಂಬಂಧಪಟ್ಟಿರುವ ಕೃಷಿ ಜಮೀನುಗಳ ಪೌತಿ ಖಾತೆಯಲ್ಲಿನ ಹೆಸರು ಬದಲಾವಣೆಗೆ, ಕಂದಾಯ ಅಧಿಕಾರಿಗಳು ತ್ವರಿತಗತಿಯಲ್ಲಿ ಕ್ರಮ ವಹಿಸಬೇಕೆಂದು ಸರಕಾರ ಆದೇಶಿಸಿದೆ. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಗಮನ ಸೆಳೆದಿದ್ದರು. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವ ಆರ್. ಅಶೋಕ್ ಅವರ ನಿರ್ದೇಶನದಂತೆ ಇಲಾಖೆಯ ಅಧೀನ ಕಾರ್ಯದರ್ಶಿ ಕಮಲ ಜಯರಾಂ ತಾ. 17 ರಂದು ಅಧಿಕೃತ ಸುತ್ತೋಲೆ ಹೊರಡಿಸಿದ್ದಾರೆ. ಈ ಅವಕಾಶವನ್ನು ಜಿಲ್ಲೆಯ ಜನತೆ ಸದುಪಯೋಗ ಮಾಡಿಕೊಳ್ಳಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.
ಈ ಸುತ್ತೋಲೆಯಂತೆ ಕೃಷಿ ಜಮೀನು ಮಾಲೀಕರು ಮೃತರಾದ ಬಳಿಕ, ಸಂಬಂಧಿಸಿದ ಮಾಹಿತಿಯೊಂದಿಗೆ ಈ ಬಗ್ಗೆ ಹೋಬಳಿ ಮಟ್ಟದಲ್ಲಿ ಅರಿವು ಮೂಡಿಸಬೇಕು.
ವಂಶವೃಕ್ಷಕ್ಕೆ ಒತ್ತು : ಪೌತಿ ಖಾತೆ ಸಂಬಂಧ ಆಯಾ ರೈತ ಕುಟುಂಬದ ವಂಶವೃಕ್ಷದೊಂದಿಗೆ, ಅರ್ಜಿ ನಮೂದಿಸಲು, ಆಯಾ ಭೂಮಿಯ ತಂತ್ರಾಂಶದಲ್ಲಿ ಗ್ರಾಮ ಲೆಕ್ಕಿಗರ ಲಾಗಿನ್ ಮೂಲಕ ಪಿ.ಕೆ.ಎ. (ಪೌತಿ ಖಾತೆ ಆಂದೋಲನ) ಅರ್ಜಿ ಸ್ವೀಕರಿಸಲು ಕ್ರಮ ವಹಿಸತಕ್ಕದ್ದು ಎಂದು ಆದೇಶಿಸಲಾಗಿದೆ.
ಪ್ರಮಾಣ ಪತ್ರ : ಒಂದು ವೇಳೆ ವಂಶವೃಕ್ಷ ಲಭ್ಯವಿಲ್ಲದಿದ್ದಲ್ಲಿ ಅರ್ಜಿದಾರರ ಕುಟುಂಬದ ಮಾಹಿತಿಯನ್ನು ನೋಟರಿ ಸಕ್ಷಮ ಮಾಡಿಸಿ; ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಮನವಿ ದಾಖಲಿಸಿ ವಂಶವೃಕ್ಷವನ್ನು ಹೊಂದಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮರಣ ಪತ್ರ : ಭೂ ಮಾಲೀಕರು ಒಂದು ವೇಳೆ ಮರಣ ಹೊಂದಿ ವರ್ಷಗಳು ಕಳೆದಿದ್ದರೆ ಅಥವಾ ಮರಣಪತ್ರ ಇಲ್ಲದಿದ್ದರೆ ಸ್ಥಳೀಯವಾಗಿ ಜೆಎಂಎಫ್ಸಿ ನ್ಯಾಯಾಲಯಗಳಲ್ಲಿ ಮರಣ ಪತ್ರ ಆದೇಶ ಪಡೆದು, ತಹಶೀಲ್ದಾರ್ ಕಚೇರಿಗೆ ಸಲ್ಲಿಸಿ ಪೌತಿ ಖಾತೆಗಾಗಿ ಕೋರಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಮುಕ್ತ ಅವಕಾಶ : ಈ ರೀತಿ ಮ್ಯುಟೇಶನ್ ಶುಲ್ಕ ರೂ. 35ಕ್ಕೂ ವಿನಾಯಿಸಿ ಕಲ್ಪಿಸಿರುವ ಸರಕಾರ, ಅರ್ಜಿದಾರರ ಕೋರಿಕೆಗಳನ್ನು ಆಯಾ ಹೋಬಳಿಗಳಲ್ಲಿ ಸಭೆ ಆಯೋಜಿಸಿ, ಯಾರದಾದರೂ ಆಕ್ಷೇಪಣೆಗಳು ಇದ್ದಲ್ಲಿ ತಹಶೀಲ್ದಾರ್ ಹಂತದ ಅಧಿಕಾರಿಗಳು ಇತ್ಯರ್ಥಗೊಳಿಸಲು ಕಾಳಜಿ ತೋರಬೇಕು. ಇಂತಹ ಪ್ರಕ್ರಿಯೆಗಳನ್ನು ಒಂದು ತಿಂಗಳ ಕಾಲಮಿತಿಯೊಳಗೆ ಬಗೆಹರಿಸಲು ಸೂಚಿಸಲಾಗಿದೆ.
ಎಚ್ಚರಿಕೆ ಅಗತ್ಯ : ಇಂತಹ ಸಂದರ್ಭ ಕುಟುಂಬದ ಯಾವೊಬ್ಬ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸುವದರೊಂದಿಗೆ, ಆಯಾ ಕುಟುಂಬದ ಎಲ್ಲಾ ಸದಸ್ಯರಿಗೆ ನ್ಯಾಯ ಕಲ್ಪಿಸಲು ಕಾಳಜಿ ತೋರಬೇಕೆಂದು ಆದೇಶಿಸಲಾಗಿದೆ.
ಪೂರ್ವ ನಕ್ಷೆ ಅನಗತ್ಯ : ಈ ರೀತಿಯಾಗಿ ಮೃತರಾದ ಭೂಮಾಲೀಕರ ಹೆಸರನ್ನು ತೆಗೆದು ವಂಶವೃಕ್ಷದಲ್ಲಿರುವ ಎಲ್ಲಾ ವ್ಯಕ್ತಿಗಳ ಹೆಸರಿಗೆ ಮಾಲೀಕತ್ವವನ್ನು ಜಂಟಿಯಾಗಿ ಖಾತೆ ಮಾಡುವದರಿಂದ ಮ್ಯುಟೇಶನ್ ಪೂರ್ವ ನಕ್ಷೆಯ ಅವಶ್ಯಕತೆ ಇರುವದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.