ಆಡಿ. P S ಖಚಿmಚಿಟಿuರಿಚಿm ರವರು ಬರವಣಿಗೆಯಲ್ಲಿ ಈ ರೀತಿ ಬರೆದಿರುವರು. ಏoಜಚಿvಚಿs ಚಿಡಿe ಏshಚಿಣಡಿiಥಿಚಿs oಜಿ ಣhe ಏuಡಿu ಡಿಚಿಛಿe ಚಿಟಿಜ ತಿheಟಿ ಣheಥಿ ಛಿಚಿme ಣo ಏoಜಚಿgu ಜಿಡಿom ಣhe ಓoಡಿಣh, ಣheಥಿ mighಣ hಚಿve bಡಿoughಣ ತಿiಣh ಣhem ಛಿeಡಿಣಚಿiಟಿ ಃಡಿಚಿhmiಟಿs ತಿho ತಿeಡಿe ಣhe ಚಿಟಿಛಿesಣoಡಿs oಜಿ ಣhe ಠಿಡಿeseಟಿಣ ಂmmಚಿಞoಜಚಿvಚಿs

ಮೇಲಿನ ಆಧಾರದಂತೆ ‘‘ನಾವು ಶಾರೀರಿಕವಾಗಿಯೂ ಸೌಮ್ಯ ಸ್ವಭಾವ ಮತ್ತು ಸರಳತೆಯ ಗುಣದವರು. ಕ್ಷಾತ್ರ ತೇಜಸ್ಸು ಕಡಿಮೆಯಿದ್ದು ಸಾಧು ಸ್ವಭಾವವುಳ್ಳವರು. ಜನಸಂಖ್ಯೆಯೂ ಕಡಿಮೆಯಾದ ಕಾರಣಕ್ಕೆ ಶರೀರ ಪ್ರಕೃತಿಯಲ್ಲೂ, ಬಣ್ಣ ಮತ್ತು ಅಂಗ ಸೌಷ್ಟವದಲ್ಲಿ ಬ್ರಹ್ಮಕುಲದ ತೇಜಸ್ಸು ಉಳ್ಳವರಾಗಿದ್ದೇವೆ.’’

ರಾಜರ ಕಾಲದಲ್ಲಿ ಜಮ್ಮ-ಜೌಗೀರು ಸಿಕ್ಕಿ, ಕೊಡಗಿನ ಮೂಲ ನಿವಾಸಿಗಳಾಗಿರುವೆವು. ‘‘ಪಟ್ಟೋಲೆ ಪಳಮೆ’’ ಪುಸ್ತಕದಲ್ಲೂ (ಪುಟ ಸಂಖ್ಯೆ-11) ಪದ್ಯರೂಪ ಈ ರೀತಿ ಇದೆ.’

ಅಗಸ್ತ್ಯ ಮುನಿರಾಯ

ಕಾವೇರಮ್ಮೆ ಮಾತಾಯಿ

ಚಿತ್ತಾಲ್ ಮುದುವಡಿ

ತಕ್ಕ್ ಬಾಕ್ ತ್‍ಪಿಂಜಿ;

ಅದ್‍ಕೇಟ ಪಟ್ಟರೋ

ಅಗಸ್ತ್ಯನ ನೋಟಿತ್

ಈ ಬಾಕ್ ಪರಂದತ್

‘‘ಅಲ್ಲ ಕೇಳ್ ಮುನಿಯೆ

ಕಾವೇರಮ್ಮೆ ದೇವಿನ

ಪೊಂಗಲತ್ ಪಾತ್ರತ್

ಮುಟ್ಟಿತ್ ಮರೆ ಮಾಡಿ

ಕನಿಕೆನ ಕೊದ್‍ಚಿಯ’’

ಕಾವೇರಮ್ಮೆ ದೇವಿರ

ಪಾದಕಡ್ಡ ಬುದ್ದಿತ್

ದುಃಖತ್ ಮೊರಟತ್

ಅದ್‍ಕಂಡ ಮಾತಾಯಿ

ಈ ಬಾಕ್ ಪರಂದತ್

‘‘ಪಟ್ಟಮರೆ ಕೇಳಿರೊ

ದೇವ ಮುನಿ ನಿಂಗಕ್

ಇದೆಲ್ಲದರ ಆಧಾರದಿಂದ ನಮ್ಮ ಪೂರ್ವಿಕರು ಬ್ರಹ್ಮ ಸಂತತಿಯವರು (ಬ್ರಾಹ್ಮಣರು) ಎಂಬದು ನಿಶ್ಚಯ.

ಇತರ ವೈಶಿಷ್ಟತೆಗಳು :- (1) ಜಮ್ಮ ಭೂಮಿ ಇದೆ (2) ಕೋವಿ ಹಕ್ಕು ಇದೆ. (3) ದೇವಾಲಯ ಗಳಲ್ಲಿ ದೇವತಕ್ಕಮೆ ಇದೆ. (4) ಶಾಸ್ತ್ರ ಕಲಿತವರು, ಜಾತಕ ಬರೆಯು ವವರೂ ಇದ್ದರು. (ಪೇರೂರು ಗ್ರಾಮ ದಿ. ರಾಮಕೃಷ್ಣ-ಮತ್ತೂರು ಗ್ರಾಮದ ಪುತ್ತಾಮನೆ ಶಾಸ್ತ್ರಿಗಳು) ನಾಗರಿಕತೆ ಬೆಳೆದಂತೆ ಸರಕಾರಿ ನೌಕರಿಯಲ್ಲಿ ತೊಡಗಿಸಿಕೊಂಡಿರು ವರು. ಆಚರಿಸುವ ಹಬ್ಬಗಳು :- ಕೊಡಗಿನ ಪ್ರಮುಖ ಹಬ್ಬಗಳಾದ (1) ಯುಗಾದಿ (2) ಮಹಾಲಯ ಅಮಾವಾಸ್ಯೆ (3) ಕಾವೇರಿ ಸಂಕ್ರಮಣ (ಕಣಿ ಪೂಜಿಸುವ ಪದ್ಧತಿ) (4) ಹುತ್ತರಿ ಹಬ್ಬ (5) ಬಿಸು ಸಂಕ್ರಮಣ ಕೆಲವು ಮನೆತನದವರು ಬಿಸು ಸಂಕ್ರಮಣದಲ್ಲಿ ಉಪಾಕರ್ಮ ಆಚರಣೆ ಮಾಡುವರು. (ಓಣಂ ಎನ್ನುವರು) ಹಾಗೂ ತುಲಾಸಂಕ್ರಮಣದಲ್ಲಿ ಕಣಿ ಪೂಜಿಸುವರು. ಹೀಗೆ ಹೆಚ್ಚಿನ ಹಿಂದೂ ಹಬ್ಬಗಳ ಆಚರಣೆ ಇರುವುದು. ಕೊಡಗಿನಲ್ಲಿ ಪಾಡಿಯಲ್ಲಿರುವ ಅಮ್ಮಗೇರಿ, ಅಮ್ಮತ್ತಿ, ಇವೆಲ್ಲಾ ಸ್ಥಳಗಳಲ್ಲಿ ಹಿಂದಿನ ಕಾಲದಲ್ಲಿ ಅಮ್ಮರು (ಅಮ್ಮಂಗ ಅಮ್ಮಕೊಡವರು) ಹೆಚ್ಚಾಗಿ ಇದ್ದುದಕ್ಕೆ ಆ ಹೆಸರುಗಳು ಇದ್ದವು ಎಂದು ಹಿರಿಯರು ಹೇಳಿದ್ದು ಕೇಳಿರುವೆ. ಚೇಲವಾರದ ಕಬ್ಬೆಬೆಟ್ಟದಲ್ಲಿ ‘‘ಅಮ್ಮಮಲೆ’’ ಎಂದು ಹೆಸರಿರುವ ಬೆಟ್ಟ ಪ್ರದೇಶ ಇಂದಿಗೂ ಇದೆ. ಅವೆಲ್ಲಾ ಈಗ ಸರಕಾರಕ್ಕೆ ಸೇರಿರುವುದು.

ಮೂಲ ನಿವಾಸಿಗಳ ನಾಮಾಂಕಿತದಲ್ಲಿ ‘‘ಕೊಡಗ್ ಹೆಗ್ಗಡೆ, ಕೊಡವ ನಾಯರ್, ಕೊಡವ ಐರಿ, ಇತ್ಯಾದಿ ಎಂದಿ ದೆಯೇ ಹೊರತು ‘‘ಕೊಡವ ಅಮ್ಮ’’ ಎಂಬುದಿಲ್ಲ. ಬದಲಾಗಿ ‘‘ಅಮ್ಮ ಕೊಡವ’’ ಇರುವುದು.

ಅಲ್ಲದೆ ಹುತ್ತರಿ ಹಾಡಿನಲ್ಲೂ ‘‘ಅಮ್ಮಂಡೋ-ಕೊಡವಂಡೊ’’ ಪಂಡಿಯ ಮರಿಯಾದಿ ‘‘ಅಮ್ಮಂಡಪ-ಕೊಡವಂಡೊ, ಒಣತ್ತ್‍ರ ಮುಂಬಾಡ್’’ ಅಮ್ಮಂಡೊ-

ಕೊಡವಂಡೊ ಪುತ್ತರಿ ನಮ್ಮೆ’’ ‘‘ಪಟ್ಟೋಲೆ ಪಳಮೆ’’ ಜಾನಪದ ಗ್ರಂಥದಲ್ಲಿರುವುದೇ ಆಧಾರವಾಗಿರುವುದು. ನಾಗರಿಕತೆಯ ಬೆಳವಣಿಗೆ ಯೊಂದಿಗೆ, ಒಡನಾಟದ ಹೆಚ್ಚುವಿಕೆಯೂ ಕೂಡಿ, ಎಲ್ಲದರಲ್ಲಿಯೂ ಪಾಶ್ಚಿಮಾತ್ಯರ ಪ್ರಭಾವ ಹೆಚ್ಚಾದ ಕಾರಣ, ನಮ್ಮತನವನ್ನು ಆಚಾರ-ವಿಚಾರವನ್ನು ಹಿಂದಿಕ್ಕಿ ನಡೆದುದರ ಫಲಿತಾಂಶವೇ ಇಂದಿನ ಎಲ್ಲಾ ವಿಚಾರಗಳಲ್ಲಿ ಮಬ್ಬುಕವಿಯಲು ಕಾರಣವಾಗಿರುವುದು.

ಕೊನೆಯದಾಗಿ: ಇತಿಹಾಸಕಾರರ ಬರವಣಿಗೆ, ಜಾನಪದ ಕವಿಗಳ ಬರವಣಿಗೆ, ಪಾಶ್ಚಿಮಾತ್ಯರ ಪ್ರಭಾವದ ಫಲ’’-ಇವೆಲ್ಲಕ್ಕೂ ಮುಂಚೂಣಿಯಂತಿರುವ ‘‘ಸ್ಕಾಂದ ಪುರಾಣದ ಕತೆಯೇ ‘‘ಅಮ್ಮಂಗ ಜನಾಂಗದ ಕುರಿತು ಬೆಳಕು ಚೆಲ್ಲಿರುವುದು.

(ಕಡಿಯತ್ತ್‍ನಾಡಿನಲ್ಲಿ ಹಿಂದಿನ ಕಾಲದಲ್ಲಿ ಅಮ್ಮರೇ ಇದ್ದರಂತೆ. ಬಡತನ, ಜನಸಂಖ್ಯೆಯ ಹೆಚ್ಚಳ, ಜಗಳದಿಂದಾಗಿ ಆಳುವ ಅರಸರಿಗೆ ಪುಕಾರು ಹೋಯಿತಂತೆ. ಆತನ ಅಧಿಕಾರಿ ಜಗಳ ಪರಿಹರಿಸಲು ಬಂದು, ಎಷ್ಟೇ ಪ್ರಯತ್ನಿಸಿದರೂ ಆಗದೆ, ಕೊನೆಗೆ ಈ ರೀತಿ ತೀರ್ಮಾನ ಮಾಡಿದನಂತೆ. ನಾಲ್ಕು ದಿಕ್ಕುಗಳು ಕೇಕ್ ದಿಕ್ಕಿನಲ್ಲಿರು ವವರು-ಕೇಕಂಡಮ್ಮನ, ತೆಕ್ಕ್ ದಿಕ್ಕಿನಲ್ಲಿರುವವರು-ತೆಕ್ಕಡಂಮ್ಮನ, ಬಡಕ್ ದಿಕ್ಕಿನಲ್ಲಿರುವವರು-ಬಡಕಡಂಮ್ಮನ, ಪಡ್‍ಜ್ಞಾರ್ ದಿಕ್ಕಿನಲ್ಲಿರು ವವರು-ಪಡ್‍ಜ್ಞಾರಮ್ಮನ ಎಂದು ವಿಂಗಡಿಸಿ ಜಗಳ ಬಗೆಹರಿಸಿ ಕೊಟ್ಟು ಹೋದರಂತೆ. ಹಾಗೆಯೇ ‘‘ಪಾಡಿ’’ಯಲ್ಲಿದ್ದ ಅಮ್ಮಾರು, ನಾಪೋಕ್ಲಿನಲ್ಲಿ ಬಂದು ನೆಲಸಿ, ಪಾಡಿಯಮ್ಮನ ಮನೆತನದವರು ಎಂದು ಹಿರಿಯರು ಹೇಳುತ್ತಿದ್ದ ಮಾತು. ಅಮ್ಮತ್ತಿಯಲ್ಲಿದ್ದವರು ‘‘ಅಮ್ಮತ್ತೀರ’’ ಮನೆಯವರು, ಚೇರಳ ಗ್ರಾಮದಲ್ಲಿದ್ದವರು ಚೇರಳತಮ್ಮನ ಮನೆತನ ದವರು ಎಂದು ಹೆಸರು. ಹೀಗೆ ಶಾಪಗ್ರಸ್ತರಾದ ಬ್ರಾಹ್ಮಣರು (ಅಮ್ಮಂಗ-ಅಮ್ಮಕೊಡವರು) ಇತಿಹಾಸಕಾರರು ಬರೆದಿರುವ ಹಾಗೆ ನಂಬೂದರಿ (ಕೇರಳದ ಬ್ರಾಹ್ಮಣರು) ಬ್ರಾಹ್ಮಣ ಕುಟುಂಬದವರು ಅಮ್ಮಂಗರಾಗಿರುವುದಕ್ಕೆ ಸಾಧ್ಯತೆ ಇದೆ.)

ಮೇಲಿನ ಸಮಜಾಯಿಷಿಕೆಯೊಂದಿಗೆ, ಗೋತ್ರ ಪ್ರವರ್ತಕರೂ, ಗುರು ಪರಂಪರೆಯುಳ್ಳವರೂ, ಸಸ್ಯಾಹಾರಿಗಳೂ, ಊರಿನ ದೇವಳಗಳಲ್ಲಿ ದೇವತಕ್ಕರೂ ಆಗಿರುವವರು, ಬ್ರಹ್ಮಕುಲಕ್ಕೆ ಸೇರಿರುವ ಕೊಡಗಿನ ಕಾವೇರಿ ಬ್ರಾಹ್ಮಣರೆಂದು ಈಗಿನ ಅಮ್ಮಕೊಡವರು ನಾವಾಗಿರುವೆವು.(ಮುಗಿಯಿತು)

?ಕಸ್ತೂರಿ ಗೋವಿಂದಮ್ಮಯ್ಯ,

ಮಡಿಕೇರಿ.