ಮಡಿಕೇರಿ, ಅ. 16: ಗುರುಕುಲ ಕಲಾಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ಇದರ ನೇತೃತ್ವದಲ್ಲಿ ಗುರುಕುಲ ಕೊಡಗು ಜಿಲ್ಲಾ ಘಟಕದ ವತಿಯಿಂದ ಕಾವೇರಿ ಸಂಕ್ರಮಣದ ಪ್ರಯುಕ್ತ ರಾಜ್ಯಮಟ್ಟದ ಕವನ ಸ್ಪರ್ಧೆ ಏರ್ಪಡಿಸಲಾಗಿತ್ತು.

ದತ್ತಪದ ಕೊಡಗಿನ ಕಾವೇರಿಗಾಗಿ 73 ಕವನಗಳು ರಾಜ್ಯದ ಹಲವೆಡೆಗಳಿಂದ ಬಂದಿದ್ದವು. ಈ ಸ್ಪರ್ಧೆಗೆ ಗುರುಕುಲ ಕೊಡಗು ಘಟಕದ ಗೌರವಾಧ್ಯಕ್ಷೆ ಕೊಡಗಿನ ಚತುರ್ಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿರುವುದಾಗಿ ಗುರುಕುಲ ಕಲಾ ಪ್ರತಿಪ್ಠಾನ ಕೊಡಗು ಘಟಕದ ಅಧ್ಯಕ್ಷೆ ಕೆಂಚೆಟ್ಟಿ ಶೋಭಾ ರಕ್ಷಿತ್ ಅವರು ತಿಳಿಸಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಾಟ್ಸ್ ಆಪ್ ಮುಖಾಂತರ ನೀಡಿ ಗೌರವಿಸಲಾಗಿದೆ. ಅಲ್ಲದೆ ಬಂದಿದ್ದ 73 ಕವನಗಳಿಗೂ ಪ್ರತ್ಯೇಕವಾಗಿ ವಿಮರ್ಶೆ ನೀಡುವುದರ ಮೂಲಕ ಬರಹಗಾರರನ್ನು ಪೆÇೀತ್ಸಾಹಿಸಲಾಗಿದೆ.

ವಿಜೇತರಾದವರ ಪಟ್ಟಿ: ಗುರುಕುಲ ಕೊಡಗು ಘಟಕದ ವಾರದ ಪ್ರಶಸ್ತಿಯನ್ನು ಸುಮ ಗಾಜರೆ (ವಿಜಯಪುರ) ಇವರು ಗಳಿಸಿಕೊಂಡಿರುತ್ತಾರೆ.

ಅತ್ಯುತ್ತಮ ಸ್ಥಾನಗಳನ್ನು ರಮ್ಯ ಹರಿ (ಮುಂಬೈ), ಬಾದುವಂಡ ಬೀನ ಕಾಳಯ್ಯ (ಕೊಡಗು), ಪೆÇಡನೋಳನ ಈಶ್ವರ ತಿಮ್ಮಯ್ಯ (ಕೊಡಗು), ಉತ್ತಮ ಸ್ಥಾನಗಳನ್ನು ಪ್ರಶಾಂತ್ (ಮನೋಸುತ ) ಹಾಸನ, ಶಂಕರರಾವ್ (ಬೆಂಗಳೂರು), ಪ್ರೇಮ ಪ್ರಶಾಂತ್(ಶ್ರವಣ ಬೆಳಗೂಳ), ಬಿಟ್ಟೀರ ಚೊಂದಮ್ಮ (ಕೊಡಗು) ಹತ್ತಿ ಬೆಳಗಲ್ ನಾಗರಾಜ್ ರಾವ್ (ಬಳ್ಳಾರಿ), ಪವಿತ ಚಂಗಪ್ಪ (ಕೊಡಗು) ಗಳಿಸಿದ್ದಾರೆ.

ಮೆಚ್ಚುಗೆ ಸ್ಥಾನಗಳನ್ನು ಅಭಿಜ್ಞಾ ಪಿ.ಎಂ. ಗೌಡ (ಮಂಡ್ಯ), ದಿವ್ಯ ಎಲ್.ಎನ್. ಸ್ವಾಮಿ (ಬೆಂಗಳೂರು), ಕಲಾವತಿ ಕೋಂಬಾಳಾ (ಕಲಬುರ್ಗಿ), ದೀಪಾಲಿ ಸಾಮಂತ (ದಾಂಡೇಲಿ), ಚೋನಿರ ಪಾವನಿ ಸುಬ್ರಮಣಿ (ಕೊಡಗು), ದಿನಕರ ನಂದಿ ಚಂದನ್ (ಮುಂಬೈ), ಪ್ರಸನ್ನ ಮರಾಠಿಧೂಳಳ್ಳಿ (ಶಿರಸಿ), ಮೌನಿ ಕಾವೇರಮ್ಮ (ಕೊಡಗು), ಮಯೂರ ಸಜ್ಜನ (ವಿಜಯಪುರ), ಡಿ.ಬಿ. ರಾಘವೇಂದ್ರರಾವ್ (ಹೈದರಾಬಾದ್), ಪೂರ್ಣಿಮಾ ರಮೇಶ್ (ಚಿಕ್ಕಮಗಳೂರು), ಗೀತ ಎಸ್. ಚಿಕ್ಕಮಠ (ಹುಬ್ಬಳ್ಳಿ) ಪಡೆದಿದ್ದಾರೆ.

ಸಮಾಧಾನಕರ ಸ್ಥಾನವನ್ನು ವೆಂಕಮ್ಮ ಡಿ. ಗಾವಂಕರ (ಜೊಯಿಡಾ), ಅನ್ನಪೂರ್ಣ ಹಿರೇಮಠ (ಬೆಳಗಾವಿ), ಕಾಡಜ್ಜಿ ಮಂಜುನಾಥ (ಬಳ್ಳಾರಿ), ಶೃತಿ ಬಿದ್ದಪ್ಪ (ಕೊಡಗು), ಮಂಜುಳಾ ಗೌಡ (ಕಾರವಾರ) ಗಳಿಸಿಕೊಂಡಿದ್ದಾರೆ.

ಪದಾಧಿಕಾರಿಗಳಿಗಾಗಿ ಇರಿಸಿದ್ದ ಪ್ರತ್ಯೇಕ ಸ್ಪರ್ಧೆಯಲ್ಲಿ ಕೊಡಗಿನವರಾದ ಲತಾ ಜೈಶಂಕರ್ (ಮಡಿಕೇರಿ), ಹೆಚ್.ಜಿ. ಸಾವಿತ್ರಿ (ಬಿಳುಗುಂದ) ಇವರುಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದಿರುವುದಾಗಿ ಜಿಲ್ಲಾಧ್ಯಕ್ಷೆ ಕೆಂಚೆಟ್ಟಿ ಶೋಭಾ ರಕ್ಷಿತ್ ತಿಳಿಸಿದ್ದಾರೆ.