ಗೋಣಿಕೊಪ್ಪ ವರದಿ, ಅ. 17: ನಿಟ್ಟೂರು-ಕಾರ್ಮಾಡು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಒಂಟಿಸಲಗ ದಾಳಿಗೆ ಭತ್ತದ ಬೆಳೆ ನಾಶವಾಗಿದೆ.
ಗ್ರಾಮದ ಪೆÇನ್ನಿಮಾಡ ನಂಜಪ್ಪ ಅವರಿಗೆ ಸೇರಿದ ಗದ್ದೆಯನ್ನು ಒಂಟಿಸಲಗ ತಿಂದುಹಾಕಿದೆ. ಸ್ಥಳೀಯರು ಕೂಗಿಕೊಂಡಾಗ ಅಲ್ಲಿಂದ ಕಾಲ್ಕಿತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಪೆÇನ್ನಿಮಾಡ ಕುಶಾಲಪ್ಪ ಅವರ ಗದ್ದೆಯನ್ನು ಪೂರ್ಣ ನಷ್ಟ ಮಾಡಿತ್ತು. ಇದರಿಂದ ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ನಾಗರಹೊಳೆ ಉದ್ಯಾನವನದಿಂದ ಕಾರ್ಮಾಡು ಅರಣ್ಯ ಇಲಾಖೆ ಚೆಕ್ಪೆÇೀಸ್ಟ್ ಮೂಲಕ ಬಂದು ಬೆಳೆ ನಾಶ ಮಾಡುತ್ತಿವೆ. ಆನೆಗಳನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.