ಕೂಡಿಗೆ, ಅ. 17: ಕೂಡಿಗೆಯ ದಂಡಿನಮ್ಮ ಮತ್ತು ಬಸವೇಶ್ವರ ಹಾಗೂ ಮುತ್ತಾತ್ರಯ ದೇವಸ್ಥಾನ ಮತ್ತು ಗ್ರಾಮಗಳ ಸೇವಾ ಸಮಿತಿಯ ವತಿಯಿಂದ ದಂಡಿನಮ್ಮ ದೇವಾಲಯದ ಸನ್ನಿಧಿಯಲ್ಲಿರುವ ಶಿವಲಿಂಗಕ್ಕೆ ಪಂಚಲೋಹದ ಕವಚ ಪುನರ್ ಸಮರ್ಪಣಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯೊಂದಿಗೆ ವಿಶೇಷ ಪೂಜಾ ಕಾರ್ಯಕ್ರಮಗಳ ನಡುವೆ ದೇವಾಲಯ ಆವರಣದಲ್ಲಿ ನೆರವೇರಿತು.
ಬೆಳಿಗ್ಗೆ ಗಣಪತಿ ಹೋಮ, ದುರ್ಗಿಹೋಮ ದೇವಿಗೆ ಅಷ್ಠಬಂಧನ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆದವು. ಮಧ್ಯಾಹ್ನ 1 ಗಂಟೆಗೆ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಕೆ.P.É ಭೀಮಣ್ಣ, ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ನಿಕಟ ಪೂರ್ವ ಅಧ್ಯಕ್ಷರುಗಳಾದ ಕೆ.ಪಿ.ಸೋಮಣ್ಣ, ಕೆ.ಟಿ.ಶ್ರೀನಿವಾಸ, ಕೂಡಿಗೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ.ಟಿ.ಗಿರೀಶ್ ಸೇರಿದಂತೆ ಸಮಿತಿಯ ಎಲ್ಲಾ ನಿರ್ದೇಶಕರು ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಕೂಡಿಗೆ ,ಕೊಪ್ಪಲು ,ಹೆಗ್ಗಡಹಳ್ಳಿ, ಮಲ್ಲೇನಹಳ್ಳಿ, ಕೋಟೆ ಮದಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದರು. ಪೂಜಾ ಕೈಂಕರ್ಯವನ್ನು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ದ ಅರ್ಚಕ ರಾಘವೇಂದ್ರ ಆಚಾರ್ ಮತ್ತು ಚಂದ್ರಮುರುಳಿ ಆರಾದ್ಯ್ ಅವರು ನೆರವೇರಿಸಿದರು.