1. ಚೇರಂಬಾಣೆಯ ಕೊಳಗದಾಳು ‘‘ವನದುರ್ಗಿ’’ ದೇವಿಯ ಭಂಡಾರ, ಆಭರಣ ಇಂದಿಗೂ ನಾಳಿಯ್ಯಮ್ಮನ (ನಾಲ್‍ಕೆಟ್ಟ್) ತೊಟ್ಟಿ ಮನೆಯಲ್ಲಿರುವುದು. ದೇವತಕ್ಕರಾಗಿ ದೇವರ ಕೆಲಸ ಮಾಡುವರು.

2. ಚೇಲಾವರದ ಪೊನ್ನೊಲ ದೇವಳದ ‘‘ಶಾಸ್ತಾವು ದೇವಳದ ಕೆಲಸ, ಹಾಗೂ ‘‘ಪುದಿಯೋದಿ’’ ಯ ಕೆಲಸವನ್ನು ನಮ್ಮ ಕುಟುಂಬದವರು (ಬಡಕಪಮ್ಮನ) ಇಂದಿಗೂ ಮಾಡುತ್ತಿರುವರು.

3. ಕುಂದದ ಹತ್ತಿರ (ಪೊನ್ನಂಪೇಟೆ) ಕಾಡ್ಲು ಅಯ್ಯಪ್ಪ ದೇವಳದಲ್ಲ್ಲಿ ಅಚ್ಚಿಯಂಡದವರು ಪೂಜಾರಿ.

4. ಕೋತೂರಿ ಮಹದೇಶ್ವರ ದೇವಳದÀಲ್ಲಿ ಹೆಮ್ಮಚಿ ಮನೆಯವರು ಪೂಜಾ ಕೈಂಕರ್ಯ ನಡೆಸುತ್ತಿರುವರು.

5. ಚೆಟ್ಟಳ್ಳಿಯಲ್ಲಿ ಚೇರಳತ್ತಮ್ಮನ ಮನೆಯವರು ದೇವಕಾರ್ಯ ನಡೆಸುತ್ತಿರುವರು.

ಕೆಲವು ವರ್ಷಗಳ ಹಿಂದೆ ಬಿಳಿಗೇರಿಯ ದೇವಾಲಯದಲ್ಲಿಯೂ, (ಅಮ್ಮ ಕೊಡಗರು) ಅಮ್ಮರು ಪೂಜಾರಿಗಳಾಗಿದ್ದವರು ಹಾಗೂ ಕಾಲೂರಿನಲ್ಲೂ ಅಮ್ಮರು ಪೂಜಾರಿಗಳಾಗಿದ್ದವರು ಎಂಬ ವಿಚಾರ ಅಲ್ಲಿಯ ದೇವಳದ ಮುಖ್ಯಸ್ಥನಿಂದ ತಿಳಿಯಿತು. (ಅ. ಭಾ. ಜಾನಪದ ಪರಿಷತ್ತು) ಅ. ಭಾ.ಜಾ. ಪರಿಷತ್ತು ಸಂಘಟನೆಯು ಏರ್ಪಡಿಸಿದ್ದ ದೇವಾಲಯದ ಐತಿಹ್ಯದ ಕುರಿತು ಮಾತನಾಡಿದಾಗ, ಅವರಿಂದ ಈ ವಿಚಾರ ತಿಳಿಯಿತು. ಈ ವಿಚಾರಗಳಿಂದ ಪೂರ್ವದ ಬ್ರಾಹ್ಮಣರು, ಅಮ್ಮಂಗಳಾಗಿರುವುದು ಸರಿ. ಇದಕ್ಕೆ ಸ್ಕಾಂದ ಪುರಾಣ, ಕಾವೇರಿ ನಾಟಕ, ನಮ್ಮ ಆಚಾರ-ವಿಚಾರ ಇತ್ಯಾದಿಗಳು ಪೂರಕವಾಗಿರುವುದು.

ಆಚಾರ-ವಿಚಾರಗಳು: 1. ಪಿತೃಪ್ರದಾನ ಕುಟುಂಬ ವ್ಯವಸ್ಥೆ. 2. ಸಸ್ಯಾಹಾರಿಗಳು 3. ಯಜ್ಞೋಪವೀತಧಾರಣೆ 4. ಮಂಗಳಕಾರ್ಯ ಗಳಿಗೆ ಪುರೋಹಿತರು ಬೇಕು. 5. ಧಾರೆಯೆರೆದು ಮಾಂಗಲ್ಯಧಾರಣೆ ಮಾಡುವಿಕೆ 6. ಮಗುವಿನ ನಾಮಕರಣಕ್ಕೆ ಪುರೋಹಿತರು ಬೇಕು. 7. ಪಿಂಡಪ್ರದಾನಕ್ಕೂ ಪುರೋಹಿತರು ಬೇಕು.

ವಿವರಣೆ : ಪಿತೃಪ್ರದಾನ ಕುಟುಂಬ ವ್ಯವಸ್ಥೆ:- ಕೊಡಗಿನ ಜಾನಪದ ಕೃತಿ ‘‘ಪಟ್ಟೋಲೆ ಪಳಮೆ’’ -ನಡಿಕೇರಿಯಂಡ ಚಿಣ್ಣಪ್ಪ ನವರು ರಚಿಸಿದ್ದು, ಮೊದಲ ಮುದ್ರಣ 1924ರಲ್ಲಿ ಜಾನಪದ ಶಬ್ದವೇ ಬಾಯಿಂದ ಬಾಯಿಗೆ ಬಂದ ವಿಚಾರಗಳ ಸಂಗ್ರಹ. ಅದರಲ್ಲಿ (ಪುಟಸಂಖ್ಯೆ 19-20) ಮಲೆಯಾಳ ದೇಶದ ತಾಯಿಕಾಟ್ ತಂಬಿರಾನ್ ಎಂಬ ಬ್ರಾಹ್ಮಣ ಮನೆತನದಲ್ಲಿ ಒಂದಾನೊಂದು ಕನ್ಯೆಯು ಮದುವೆಯಾಗುವ ಮೊದಲು ಋತುವಾದ್ದರಿಂದ ಅವಳನ್ನು ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟುದಾಗಿಯೂ, ಅವಳು, ಈ ದೇಶಕ್ಕೆ ಬಂದು ಒಬ್ಬ ಕೊಡವ ಯುವಕನನ್ನು ಕೂಡಿ ಉಂಟಾದ ಸಂತತಿಯವರು ತಾಯಿಯಂತೆ ಮಧುಮಾಂಸ ಸೇವಿಸದೆ ‘‘ಅಮ್ಮ-ಕೊಡಗ’’ ರೆಂದೆನಿಸಿಕೊಂಡಾಗಿಯೂ ಅವರ ಮಕ್ಕಳು ಗಂಡೇ ಆಗಲೀ ಹೆಣ್ಣೇ ಆಗಲೀ ಕೊಡವರನ್ನು ಮದುವೆಯಾದರು. ಹುಟ್ಟಿದ ಮಕ್ಕಳೆಲ್ಲರೂ ಅಮ್ಮ ಕೊಡಗರಾಗುತ್ತಾ ಬಂದು, ಇವರ ವಂಶವು ಕೊಡಗು ದೇಶದಲ್ಲಿ ವೃದ್ಧಿಯಾಯಿತಾಗಿಯೂ ಹೇಳುವರು. (ಬಾಯಿಯಿಂದ ಬಾಯಿಗೆ ಬಂದ ಹೇಳಿಕೆಯು ಕಪೋಲ ಕಲ್ಪಿತವೇ ವಿನಹ ದಾಖಲೆಯಲ್ಲ)

ಅದೇ ಪುಸ್ತಕದ ಪುಟ ಸಂಖ್ಯೆ 20 ರಲ್ಲಿ ‘‘ಅಮ್ಮ ಕೊಡವರು (ಕೊಡಗ ಹೋಗಿ ಕೊಡವ) ಮತ್ತು ಕೊಡವರು ಎಂಬ ಭೇದವು ಲಿಂಗಾಯಿತ ರಾಜರ ಆಳ್ವಿಕೆಯು ಕೊನೆ ಗೊಂಡ ಮೇಲೆ ಕಣ್ಣಿಗೆ ಬೀಳ ತೊಡಗಿತು. ಅಮ್ಮ ಕೊಡಗರು ಮಧು ಮಾಂಸವನ್ನು ಸೇವಿಸುವದಿಲ್ಲವಲ್ಲದೆ, ಕರ್ಮಾಂತರಗಳಲ್ಲಿ ಲೇಶವೂ ವ್ಯತ್ಯಾಸವಿಲ್ಲದೆ ಅನ್ಯೋನ್ಯವಾಗಿ ಹೆಣ್ಣು ಕೊಡುವುದು, ತರುವುದು ಇತ್ತು ಎಂದಿದೆ ಇದು ಒಪ್ಪ ತಕ್ಕ ವಿಷಯವೇ ಅಲ್ಲ. ಇಂದಿಗೂ ಅದು ಮುಂದುವರಿ ಯಬೇಕಿತ್ತು. ಇಲ್ಲವೇ ಇಲ್ಲ.

‘‘ಅಮ್ಮಕೊಡವರು ಅಗಸ್ತ್ಯನಿಂದ ಶಪಿಸಲ್ಪಟ್ಟ ಬ್ರಾಹ್ಮಣರಲ್ಲ’’ವೆಂದು ಹೇಳುವುದಕ್ಕೆ ಅನೇಕ ಆಧಾರಗಳಿವೆ’’ ಎಂದಿರುವ ಅವರು, ಯಾವುದೇ ಆಧಾರಗಳನ್ನು ನಮೂದಿಸಿರುವುದಿಲ್ಲ. ಆದಕಾರಣ ಮೇಲಿನ ಹೇಳಿಕೆಗಳು ನಿರಾಧಾರಗಳಾಗಿವೆ. ನಮ್ಮದು ಗುರುಪರಂಪರೆಯಾಗಿದೆ. ನಾವು ಗೋತ್ರ ಪ್ರವರ್ತಕರು ಯಜ್ಞೋಪವೀತಧಾರಣೆಯುಳ್ಳವರು.

“ಒಥಿsoಡಿe ಚಿಟಿಜ ಅooಡಿg ಉಚಿzeಣಣeಡಿ bಥಿ ಐeತಿis ಖiಛಿo-1879. ಖಿhಚಿ ಂmmಚಿ ಅooಡಿg & ಂmmಚಿ ಏoಜಚಿgಚಿs ಚಿಡಿe sಚಿiಜ ಣo hಚಿve beeಟಿ ಣhe iಟಿಜigeಟಿous ಠಿಡಿiesಣhooಜ, buಣ ತಿheಟಿ exಚಿಛಿಣಟಥಿ ಣheಥಿ ತಿeಡಿe ಠಿಡಿiesಣs ಚಿಟಿಜ hoತಿ ಣheಥಿ ಟosಣ ಣheiಡಿ ಠಿಡಿiesಣhooಜ, ಚಿಡಿe shಡಿouಜeಜ iಟಿ obsಛಿuಡಿiಣಥಿ. ಖಿhes ತಿeಚಿಡಿ ಣhe sಚಿಛಿಡಿeಜ ಣhಡಿeಚಿಜ ಚಿಟಿಜ ಚಿbsಣಚಿiಟಿ ಜಿಡಿom meಚಿಣ ಚಿಟಿಜ ಚಿಟಛಿohoಟ. ಖಿhe ಂmmಚಿ ಏoಜಚಿgಚಿs ಜoಟಿಟಿeಜ ಣhe sಚಿಛಿಡಿeಜ ಣhಡಿeಚಿಜ iಟಿ 1834 ಚಿಣ ಣhe iಟಿsಣಚಿಟಿಛಿe oಜಿ ಚಿ ಊಚಿviಞಚಿ ಃಡಿಚಿhmiಟಿ ತಿho ತಿಚಿs ಣhe ಣಡಿeಚಿsuಡಿeಡಿ oಜಿ ಣhe ಅooಡಿg ಖಚಿರಿಚಿs. ಖಿhe ಟಿಚಿme oಜಿ ಚಿಟಿ ಂmmಚಿ ಅooಡಿg mಚಿಟಿ hಚಿs ಣhe suಜಿಜಿix “ಂmmಚಿ” ಟiಞe ಂiಥಿಚಿಠಿಠಿಚಿmmಚಿ, ಒuಣhಚಿmmಚಿmmಚಿ, ಉoviಟಿಜಚಿmmಚಿಥಿಚಿ. ಖಿheಡಿe ಚಿಡಿe ಣತಿo goಣಡಿಚಿs ಚಿmoಟಿg ಣhem, ಣhe ಃhಚಿಡಿಚಿಜತಿಚಿರಿಚಿ ಉoಣಡಿಚಿ ಚಿಟಿಜ ಗಿisತಿಚಿ miಣಡಿಚಿgoಣಡಿಚಿ”.

Iಟಿ ಜಡಿess ಚಿಟಿಜ mಚಿಡಿಡಿiಚಿge ಛಿusಣoms, ಣheಥಿ ಜಿoಟಟoತಿ ಅooಡಿgs.

ಉಪನಯನವನ್ನು ಹಿಂದಿನ ಕಾಲದಲ್ಲಿ ಹತ್ತು ವರ್ಷಗಳ ಒಳಗೆ ಮಾಡಿ, ಸಂಧ್ಯಾವಂದನೆ ಮಾಡುವಿಕೆ ಹಿಂದೆ ಇತ್ತು. ಆದರೆ ಬಡತನದಿಂದಾಗಿ (ಋಷಿ ಶಾಪ) ಈಗ ಮದುವೆಯ ಒಂದು ಯಾ ಎರಡು ದಿನದ ಮೊದಲು ಉಪನಯನ ಮಾಡುವರು. ನಮ್ಮವರ ಮನೆÉ ಹೆಸರುಗಳು ‘‘ಅಮ್ಮನ’’ ಕೊನೆಗೊಳ್ಳು ವಿಕೆ ಉದಾಃ (1) ಬಡಕಡಂಮ್ಮನ. ನಾಳಿಯಮ್ಮನ, ಪಾಡಿಯಮ್ಮನ ಬೆಲ್ಲಚ್ಚಮ್ಮನ ಇತ್ಯಾದಿಯಾಗಿ.

(2) ಹೆಸರುಗಳು : ಗೋವಿಂದಮ್ಮಯ್ಯ, ಚಂಗುವಮ್ಮಯ್ಯ, ನಾಣಮ್ಮಯ್ಯ, ಮುದ್ದಮ್ಮಯ್ಯ-ಇತ್ಯಾದಿಯಾಗಿ (ಆದರೆ ಈಗ ಬರಬರುತ್ತ ಕಮ್ಮಿಯಾಗಿರುವುದು)

ದಕ್ಷಿಣ ಕೊಡಗಿನಲ್ಲಿ ಮನೆ ಹೆಸರುಗಳಲ್ಲಿ ‘‘ಅಮ್ಮನ ಎನ್ನುವುದು ಇಲ್ಲ, ಹೆಮ್ಮಟ್ಟಿ ಮನೆ, ಬಾನಂಡ, ಅಚ್ಚಿಯಂಡ, ಕರ್ತಂಗಡ - ಈ ರೀತಿಯಲ್ಲಿರುವುದು ವಿಶೇಷತೆಯೆಂದರೆ: ಕೆಲವು ಗೌಡ ಜನಾಂಗದವರಿಗೂ-ಕಾಳೇರಮ್ಮನ, ಕೇಕಡಮ್ಮನ, ಬೈಮನ, ಇತ್ಯಾದಿ ಮನೆ ಹೆಸರುಗಳಿರುವಂತೆ ಕೊಡವರಿಗೂ ಬಾನಂಡ, ಅಣ್ಣಿರ, ಕೇಕಡ, ಬಡಕಡ ಮನೆ ಹೆಸರುಗಳು ಇವೆ.

ಕೆಲವು ಗೌಡ ಜನಾಂಗದ ಮಂದಿಯನ್ನು, ಕೊಡವರನ್ನು ಹಿರಿಯರು ವಿಚಾರಿಸಿದಾಗ ಸಮರ್ಪಕ ಉತ್ತರ ಸಿಕ್ಕಿರುವುದಿಲ್ಲ. ಒಂದು ವಿಚಾರ ತಿಳಿದಿದ್ದು, ಏನೆಂದರೆ ಕೆಲವು ಮನೆತನದವರು ಹಿರಿಯರಿಗೆ ಎಡೆಹಾಕುವಾಗ, ಮೊದಲು ಸಸ್ಯಾಹಾರದ ಎಡೆಹಾಕಿ, ನಂತರ ಮಾಂಸಾಹಾರದ ಎಡೆ ಹಾಕುವ ಪದ್ಧತಿ ಇದೆಯೆಂದು ಹೇಳಿರುವುದು ನನಗೂ ತಿಳಿದಿದೆ. ಮಂಗಳ ಕಾರ್ಯಕ್ಕೆ ಪುರೋಹಿತರು ಬರಲೇಬೇಕು. ಮಗುವಿಗೆ ನಾಮಕರಣ ಮಾಡುವುದಕ್ಕೆ, ಗೃಹಪ್ರವೇಶದಲ್ಲಿ, ಮದುವೆ ನಿಶ್ಚಿತಕಾರ್ಯಕ್ಕೆ, ಕನ್ಯಾದಾನ ಮಾಡುವಾಗ, ಧಾರೆಯೆರೆದು ಮಾಂಗಲ್ಯಧಾರಣೆಗೆ ಇತ್ಯಾದಿಗಳಿಗೆ ಪುರೋಹಿತರು ಬಂದು ಮಾಡುವರು. ಹಾಗೆಯೇ ಅಮಂಗಳ ಕಾರ್ಯಕ್ಕೆ, ತಿಥಿ ಕರ್ಮಾಂತರಕ್ಕೆ ಊರಿನ ಪುರೋಹಿತರು ಬಂದು ಮನೆ ಶುದ್ಧಮಾಡಿ (ತುಳಿಸಿಕಟ್ಟೆಯ ಎದುರು ಮೊದಲು ನಂತರ ಮನೆಯನ್ನು ತೀರ್ಥ ಪ್ರೋಕ್ಷಣೆ ಮಾಡಿ ಹನ್ನೊಂದನೆ ದಿನ, 12ನೇ ದಿನ ತಿಥಿ ಹಾಗೂ ಪಿಂಡ ಪ್ರದಾನ 13ನೇ ದಿನ ಮೈಕುಂಟಸಮಾರಾಧನೆ ಇತ್ಯಾದಿಗಳು ಪುರೋಹಿತರಿಂದಲೇ ಆಗÀಬೇಕು. (ಆ ಸಮಯದಲ್ಲಿ ಗಂಡಸರು ಯಜ್ಞೋಪವೀತ. ಬದಲಾಯಿಸುವರು.

ವರ್ಷಕ್ಕೊಮ್ಮೆ ಉಪಾಕರ್ಮಹಬ್ಬದಂದು ಜನಿವಾರ ಬದಲಾಯಿಸುವುದು ಪದ್ಧತಿ.

(ಎ. ಪಿ. ಕಾರ್ಯಪ್ಪ)-ಬರೆದಿರುವ “ಅooಡಿges ಚಿಟಿಜ ಣheiಡಿ oಡಿigiಟಿ’’

“ಂmmಚಿಞoಜಚಿvಚಿs ತಿeಡಿe ಣhe oಡಿigiಟಿಚಿಟ ಃಡಿಚಿhmiಟಿ ಚಿಡಿಛಿhಚಿಞಚಿs ಚಿಣ ಖಿಚಿಟಚಿಞಚಿveಡಿi, ಜಿoಡಿ ಡಿeಚಿsoಟಿs sಣಚಿಣeಜ iಟಿ ಣhe ಛಿhಚಿಠಿಣeಡಿ ಚಿಟಿಜ ಣhe ಛಿhಚಿಠಿಣeಡಿ III ಣhe ಚಿuಣhoಡಿs ಚಿಡಿe oಜಿ ಣhe vieತಿ ಣhಚಿಣ ಂmmಚಿಞoಜಚಿvಚಿs ಛಿಚಿme ಜಿಡಿom ಏಚಿshmiಡಿ ಣo ಏoಜಚಿgu.

ಂಛಿಛಿoಡಿಜiಟಿg ಣo ಖiಣeheಡಿ’ ಂmmಚಿಞoಜಚಿvಚಿs ಛಿಚಿme ಜಿಡಿom Wಥಿಟಿಚಿಜ iಟಿ ಏeಡಿಚಿಟಚಿ. heತಿis ಖiಛಿe sಚಿಥಿs ಣhಚಿಣ ಣheಥಿ ಛಿಚಿme ಜಿಡಿom mಚಿಟಚಿbಚಿಡಿ iಟಿ ಞeಡಿಚಿಟಚಿ. ಆದರೆ, ಇವರೆಲ್ಲರ ಹೇಳಿಕೆಗೆ ಇತಿಹಾಸ ಆಧಾರವಾಗಿರಲೂ ಸಾಕು. ನಾವು ಅಗಸ್ತ್ಯನಿಂದ ಶಪಿಸಲ್ಪಟ್ಟ ಅರ್ಚಕರು. ತಲಕಾವೇರಿ-ಭಾಗಮಂಡಲದಲ್ಲಿ ದೇವಳ ಪೂಜೆಗೆ ದಕ್ಷಿಣ-ಕನ್ನಡ ಜಿಲ್ಲೆಯಿಂದ ಅರ್ಚಕರು ಬರುವವರೆಗೂ ಪೂಜಾ ಕೈಂಕರ್ಯ ಮಾಡುತ್ತಿದ್ದವರೆಂಬುದಕ್ಕೆ ಸ್ಕಾಂದ ಪುರಾಣವೇ ಆಧಾರ.

(ಮುಂದುವರಿಯುವುದು.)

- ಕಸ್ತೂರಿ ಗೋವಿಂದಮ್ಮಯ್ಯ, ಮಡಿಕೇರಿ.