ಶನಿವಾರಸಂತೆ, ಅ. 10: ಶನಿವಾರಸಂತೆ ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವನೆ ಮಾಡಿ ಕಾರನ್ನು (ಕೆಎ 12 ಪಿ 6504) ಚಾಲನೆ ಮಾಡುತ್ತಿದ್ದ ಮಾಲೀಕರಿಗೆ ಸೋಮವಾರಪೇಟೆ ನ್ಯಾಯಾಲಯ ರೂ. 10 ಸಾವಿರ ದಂಡ ವಿಧಿಸಿದೆ. ಹಂಡ್ಲಿ ಗ್ರಾಮದ ನಿವಾಸಿ ಹೆಚ್.ಎಂ. ಮಹೇಶ್ ತಾ. 8 ರಂದು ಶನಿವಾರಸಂತೆಯಲ್ಲಿ ಮದ್ಯ ಸೇವಿಸಿ ತನ್ನ ಕಾರನ್ನು ಚಾಲನೆ ಮಾಡಿದ್ದು, ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಸಿಬ್ಬಂದಿಗಳು ವಾಹನಗಳ ದಾಖಲಾತಿ ಗಳನು ಪರಿಶೀಲಿಸುತ್ತಿದ್ದಾಗ, ಈ ಕಾರಿನ ಚಾಲಕನನ್ನು ಅಲ್ಕೋ ಮೀಟರ್‍ಗೆ ಒಳಪಡಿಸಲಾಗಿ ಮದ್ಯ ಸೇವನೆ ದೃಢಪಟ್ಟಿತ್ತು. ಕಾರಿನ ಮಾಲೀಕ ದಿನಾಂಕ 9 ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದು, ರೂ. 10 ಸಾವಿರ ದಂಡ ವಿಧಿಸಿದ್ದು, ನ್ಯಾಯಾಲಯಕ್ಕೆ ದಂಡ ಪಾವತಿಸಿ, ಠಾಣಾ ಸರಹದ್ದಿನಲ್ಲಿದ್ದ ಕಾರನ್ನು ಬಿಡಿಸಿಕೊಂಡಿದ್ದಾರೆ.