ಕಣಿವೆ, ಅ. 10: ಮೊದಲೇ ಕೊರೊನಾ ಸೃಷ್ಟಿಸಿದ ಸಂಕಷ್ಟದ ಸಂಕೋಲೆಯಲ್ಲಿ ಬೇಯುತ್ತಿರುವ ರೈತಾಪಿಗಳಿಗೆ ಈ ಬಾರಿ ಕೃಷಿ ಮಾರುಕಟ್ಟೆಗಳು ಕೂಡ ಕೈಕೊಟ್ಟಿವೆ. ಅಂದರೆ ರೈತಾಪಿ ವರ್ಗ ಸಂಕಷ್ಟದ ನಡುವೆಯೂ ತಾವು ಬೆಳೆದಂತಹ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸರಿಯಾಗಿ ದರ ನಿಗಧಿ ಮಾಡದ ಕಾರಣ ರೈತರ ಸ್ಥಿತಿ ಹೇಳ ತೀರದ್ದಾಗಿದೆ. ರೈತರು ಸಾಮಾನ್ಯವಾಗಿ ಬೆಳೆಯುವ ಸುವರ್ಣ ಗೆಡ್ಡೆ, ಮರಗೆಣಸು, ಸಿಹಿ ಗೆಣಸು, ಜೋಳದ ಬೆಳೆಗಳಿಗೆ ಈ ಬಾರಿ ಮಾರುಕಟ್ಟೆಯಲ್ಲಿ ಇರುವ ಬೆಲೆ ಯಾವುದಕ್ಕೂ ಸಾಲುತ್ತಿಲ್ಲ. ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಸುಕುಮಾರ್ ಎಂಬವರು ನಾಲ್ಕುವರೆ ಎಕರೆ ಭೂಮಿಯನ್ನು ಹೊಂದಿದ್ದು ಪ್ರತೀ ವರ್ಷ ಸುವರ್ಣ ಗೆಡ್ಡೆ, ಶುಂಠಿ ಹಾಗೂ ಜೋಳದ ಬೆಳೆಯನ್ನು ಬೆಳೆಯುತ್ತಿದ್ದಾರೆ. ರೈತ ಬೆಳೆಯುವುದನ್ನು ನಿಲ್ಲಿಸಿಲ್ಲ. ಜನ ತಿನ್ನುವುದನ್ನು ಬಿಟ್ಟಿಲ್ಲ. ಹಾಗಾದರೆ ಬೆಲೆ ಏಕೆ ಇಷ್ಟೊಂದು ಕುಸಿತ ಕಾಣುತ್ತಿದೆ ? ಎಂದು ಪ್ರಶ್ನಿಸುತ್ತಾರೆ. ಅವರ ಪ್ರಶ್ನೆ ಸರೀನೆ ಇದೆ. ಆದರೆ ರೈತ ಹಾಗೂ ಮಾರುಕಟ್ಟೆ ನಡುವೆ ಇರುವ ದಲ್ಲಾಳಿಗಳು ಬೆಲೆ ಕುಸಿತಕ್ಕೆ ಕಾರಣರೇ ? ಈ ಪ್ರಶ್ನೆಗೆ ಕೃಷಿ ಮಾರುಕಟ್ಟೆ ಅಧಿಕಾರಿಗಳು ಉತ್ತರಿಸಬೇಕಿದೆ. ಸರ್ಕಾರಿ ನೌಕರರಿಗೆ ಆಯಾಯ ಸರ್ಕಾರಗಳು ಪ್ರತೀ ವರ್ಷ ಸಂಬಳವನ್ನು ಇಂತಿಷ್ಟು ಪ್ರಮಾಣ ಎಂದು ಹೆಚ್ಚಿಸುತ್ತವೆ. ಆದರೆ ಇಡೀ ದೇಶವಾಸಿಗಳೆಲ್ಲರಿಗೂ ಅನ್ನ ನೀಡುವ ರೈತನಿಗೆ ಏಕೆ ಸರ್ಕಾರಗಳು ವರವಾಗುತ್ತಿಲ್ಲ ? ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ನಾವುಗಳು ಬೆಳೆವ ಯಾವುದೇ ತರಕಾರಿ ಕಾಯಿ ಪಲ್ಯೆಗಳಿಗೂ ಸರಿಯಾದ ದರ ದೊರಕುತ್ತಿಲ್ಲ. ಸ್ಥಳೀಯವಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹಸಿಮೆಣಸಿನಕಾಯಿ, ಬಾಳೆ, ಬದನೆ, ಟೊಮ್ಯಾಟೊ ಮೊದಲಾದ ಬೆಳೆಗಳನ್ನು ಬೆಳೆದಾಗ ಸರಿಯಾದ ಬೆಲೆ ಸಿಗದೇ ಖರ್ಚು ಮಾಡಿದ ಹಣವೂ ಆಗದೇ ಸಾಲದಲ್ಲಿ ಬೆಳೆಗಾರ ಮುಳುಗುತ್ತಾನೆ. ಆದರೆ ಪ್ರಸಕ್ತ ಸ್ಥಳೀಯ ರೈತರು ತಾವು ಬೆಳೆದ ತರಕಾರಿ ಬೆಳೆಗಳಿಗೆ ಬೆಲೆ ಸಿಗಲಿಲ್ಲವಲ್ಲ ಎಂದು ನೊಂದು ಜೋಳದ ಬೆಳೆ ಬೆಳೆದರೆ ಈಗ ಅದಕ್ಕೂ ಬೆಲೆ ಇಲ್ಲ. ನಾವೀಗ ಏನು ಮಾಡಬೇಕು ? ಕೃಷಿ ಮಾಡದೇ ಭೂಮಿಯನ್ನು ಪಾಳು ಬಿಟ್ಟರೆ ನಮ್ಮ ಹೊಟ್ಟೆ ತುಂಬಿಸುವರಾರು ? ಎಂದು ಪ್ರಶ್ನಿಸುವ ನಂಜರಾಯಪಟ್ಟಣದ ಮತ್ತೋರ್ವ ಪ್ರಗತಿಪರ ಕೃಷಿಕ ಪ್ರೇಮಾನಂದ, ಸರ್ಕಾರ ಸರ್ಕಾರಿ ನೌಕರರಿಗೆ ಪ್ರತೀ ವರ್ಷ ಹೆಚ್ಚಿಸುವ ಸಂಬಳ- ಸಾರಿಗೆ ಮಾದರಿಯಲ್ಲಿ ಕೃಷಿಕನಿಗೂ ಬಿತ್ತನೆ ಬೀಜಗಳ ದರವನ್ನು ಕಡಿಮೆ ಮಾಡಲಿ. ರಸಗೊಬ್ಬರಗಳ ಬೆಲೆಯನ್ನು ಇಳಿಸಲಿ. ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆಯನ್ನು ಒದಗಿಸಲಿ. ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಿ. ರೈತ ಬೆಳೆಯುವ ಭೂಮಿಗೆ ಮಾರಾಟಗಾರ ಬಂದು ಖರೀದಿಸುವ ವ್ಯವಸ್ಥೆ ಜಾರಿಯಾದಾಗ ರೈತರು ಕೂಡ ಒಂದಷ್ಟು ನೆಮ್ಮದಿಯನ್ನು ಕಾಣುತ್ತಾನೆ ಎನ್ನುತ್ತಾರೆ ಕೃಷಿಕ ಪ್ರೇಮಾನಂದ.

ಹಾಗೆಯೇ ಚಿಕ್ಕಬೆಟ್ಟಗೇರಿ ಗ್ರಾಮದ ರೈತ ಇಬ್ರಾಹಿಂ ಎಂಬವರು ಮತ್ತೊಬ್ಬ ರೈತರಿಂದ ಮೂರು ಎಕರೆ ಕೃಷಿ ಭೂಮಿಯನ್ನು ಲೀಸ್‍ಗೆ ಪಡೆದು ಜೋಳದ ಬೆಳೆ ಬೆಳೆದಿದ್ದಾರೆ. ಎಕರೆಯೊಂದಕ್ಕೆ ಏಳು ಸಾವಿರದಂತೆ ಒಪ್ಪಂದ ಮಾಡಿಕೊಂಡು ಮೂರು ಎಕರೆಯಲ್ಲಿ ಜೋಳ ಬೆಳೆದಿದ್ದಾರೆ. ಆದರೆ ಈ ಬಾರಿ ಹಸಿ ಜೋಳಕ್ಕೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 900 ರೂ. ಇದ್ದರೆ, ಒಣಗಿದ ಜೋಳಕ್ಕೆ 1200 ರೂ ಇದೆ. ಆದರೆ ನಾನು ಮಾಡಿದ ಖರ್ಚು ಕೂಡ ಸಿಗುತ್ತಿಲ್ಲ ಏನು ಮಾಡೋದು ಹೇಳಿ ? ನನಗೀಗ 74 ವರ್ಷ ವಯಸ್ಸು. ಕಳೆದ 60 ವರ್ಷಗಳಿಂದ ಜೋಳ ಬೆಳೆಯುತ್ತಿದ್ದೇನೆ. ಆದರೆ ಇಂತಹ ದರಕುಸಿತ ಕಂಡಿರಲಿಲ್ಲ. ಕಳೆದ ವರ್ಷ ಇದೇ ಜೋಳಕ್ಕೆ 1700 ರೂ ಲಭಿಸಿತ್ತು. ಈ ಬಾರಿ ಹಾಳು ಕೊರೊನಾ ನಮ್ಮಂತಹ ನೂರಾರು ರೈತರನ್ನು ಮುಳುಗಿಸಿಬಿಟ್ಟಿತು ಎಂದು ನೋವು ಪ್ರಸಕ್ತ ಸ್ಥಳೀಯ ರೈತರು ತಾವು ಬೆಳೆದ ತರಕಾರಿ ಬೆಳೆಗಳಿಗೆ ಬೆಲೆ ಸಿಗಲಿಲ್ಲವಲ್ಲ ಎಂದು ನೊಂದು ಜೋಳದ ಬೆಳೆ ಬೆಳೆದರೆ ಈಗ ಅದಕ್ಕೂ ಬೆಲೆ ಇಲ್ಲ. ನಾವೀಗ ಏನು ಮಾಡಬೇಕು ? ಕೃಷಿ ಮಾಡದೇ ಭೂಮಿಯನ್ನು ಪಾಳು ಬಿಟ್ಟರೆ ನಮ್ಮ ಹೊಟ್ಟೆ ತುಂಬಿಸುವರಾರು ? ಎಂದು ಪ್ರಶ್ನಿಸುವ ನಂಜರಾಯಪಟ್ಟಣದ ಮತ್ತೋರ್ವ ಪ್ರಗತಿಪರ ಕೃಷಿಕ ಪ್ರೇಮಾನಂದ, ಸರ್ಕಾರ ಸರ್ಕಾರಿ ನೌಕರರಿಗೆ ಪ್ರತೀ ವರ್ಷ ಹೆಚ್ಚಿಸುವ ಸಂಬಳ- ಸಾರಿಗೆ ಮಾದರಿಯಲ್ಲಿ ಕೃಷಿಕನಿಗೂ ಬಿತ್ತನೆ ಬೀಜಗಳ ದರವನ್ನು ಕಡಿಮೆ ಮಾಡಲಿ. ರಸಗೊಬ್ಬರಗಳ ಬೆಲೆಯನ್ನು ಇಳಿಸಲಿ. ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆಯನ್ನು ಒದಗಿಸಲಿ. ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಿ. ರೈತ ಬೆಳೆಯುವ ಭೂಮಿಗೆ ಮಾರಾಟಗಾರ ಬಂದು ಖರೀದಿಸುವ ವ್ಯವಸ್ಥೆ ಜಾರಿಯಾದಾಗ ರೈತರು ಕೂಡ ಒಂದಷ್ಟು ನೆಮ್ಮದಿಯನ್ನು ಕಾಣುತ್ತಾನೆ ಎನ್ನುತ್ತಾರೆ ಕೃಷಿಕ ಪ್ರೇಮಾನಂದ.

ಹಾಗೆಯೇ ಚಿಕ್ಕಬೆಟ್ಟಗೇರಿ ಗ್ರಾಮದ ರೈತ ಇಬ್ರಾಹಿಂ ಎಂಬವರು ಮತ್ತೊಬ್ಬ ರೈತರಿಂದ ಮೂರು ಎಕರೆ ಕೃಷಿ ಭೂಮಿಯನ್ನು ಲೀಸ್‍ಗೆ ಪಡೆದು ಜೋಳದ ಬೆಳೆ ಬೆಳೆದಿದ್ದಾರೆ. ಎಕರೆಯೊಂದಕ್ಕೆ ಏಳು ಸಾವಿರದಂತೆ ಒಪ್ಪಂದ ಮಾಡಿಕೊಂಡು ಮೂರು ಎಕರೆಯಲ್ಲಿ ಜೋಳ ಬೆಳೆದಿದ್ದಾರೆ. ಆದರೆ ಈ ಬಾರಿ ಹಸಿ ಜೋಳಕ್ಕೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 900 ರೂ. ಇದ್ದರೆ, ಒಣಗಿದ ಜೋಳಕ್ಕೆ 1200 ರೂ ಇದೆ. ಆದರೆ ನಾನು ಮಾಡಿದ ಖರ್ಚು ಕೂಡ ಸಿಗುತ್ತಿಲ್ಲ ಏನು ಮಾಡೋದು ಹೇಳಿ ? ನನಗೀಗ 74 ವರ್ಷ ವಯಸ್ಸು. ಕಳೆದ 60 ವರ್ಷಗಳಿಂದ ಜೋಳ ಬೆಳೆಯುತ್ತಿದ್ದೇನೆ. ಆದರೆ ಇಂತಹ ದರಕುಸಿತ ಕಂಡಿರಲಿಲ್ಲ. ಕಳೆದ ವರ್ಷ ಇದೇ ಜೋಳಕ್ಕೆ 1700 ರೂ ಲಭಿಸಿತ್ತು. ಈ ಬಾರಿ ಹಾಳು ಕೊರೊನಾ ನಮ್ಮಂತಹ ನೂರಾರು ರೈತರನ್ನು ಮುಳುಗಿಸಿಬಿಟ್ಟಿತು ಎಂದು ನೋವು ತೋಡಿಕೊಳ್ಳುತ್ತಾರೆ.

ಇನ್ನು ಶುಂಠಿ ಬೆಳೆಗೆ ಬಂದರೆ ಈ ಬಾರಿ ಒಂದಕ್ಕೆ ನಾಲ್ಕು ಪ್ರಮಾಣದಷ್ಟು ಶುಂಠಿಯನ್ನು ಬೆಳೆದಿದ್ದು, ಈ ಬೆಳೆ ಕಟಾವಿಗೆ ಬಂದ ಜೂನ್ - ಜುಲೈ ತಿಂಗಳಿನಲ್ಲಿ ಶುಂಠಿಯನ್ನು ಖರೀದಿಸುವ ಮಾರುಕಟ್ಟೆಗಳು ಸಕಾಲದಲ್ಲಿ ತೆರೆಯದಿದ್ದುದು, ಹಾಗೂ ಕೊರೊನಾ ಮಹಾಮಾರಿಯಿಂದ ಸರ್ಕಾರ ಲಾಕ್ ಡೌನ್ ವಿಸ್ತರಿಸಿ ಜನಸಂಚಾರಕ್ಕೆ ತಡೆ ಬಿದ್ದದ್ದು ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಕಳೆದ ನಾಲ್ಕೈದು ವರ್ಷಗಳಿಂದಲೂ ಈ ವಾಣಿಜ್ಯ ಬೆಳೆ ಶುಂಠಿಗೆ ಮಾರುಕಟ್ಟೆಯಲ್ಲಿ ಉತ್ತಮವಾದ ದರ ದೊರಕಿತ್ತು. ಮಾತ್ರವಲ್ಲದೆ ಕಳೆದ 2019 ರಲ್ಲಂತೂ ಶುಂಠಿಗೆ ಮಾರುಕಟ್ಟೆಯಲ್ಲಿ ದೊರೆತ ಐತಿಹಾಸಿಕವಾದ 5500 - 3500 ರೂಗಳಂತೂ ಶುಂಠಿ ಬೆಳೆಗಾರರನ್ನು ಆಕಾಶದಲ್ಲಿ ತೇಲುವಂತೆ ಮಾಡಿತ್ತು. 2019 ರಲ್ಲಿ ಸಿಕ್ಕ ಜಾಗತಿಕ ಮತ್ತು ಐತಿಹಾಸಿಕವಾದ ಅಧಿಕ ದರ 2020 ಕ್ಕೂ ಮುಂದುವರೆಯಬಹುದೇನೋ ಎಂಬ ಹಗಲುಕನಸು ಕಂಡ ಹಲವಾರು ಮಂದಿ ಕೈಯಲ್ಲಿ ಒಂದಷ್ಟು ಹಣವಿದ್ದವರು ಮತ್ತು ಇಲ್ಲದಿದ್ದವರು ನಾವು ಕೂಡ ಈ ಬಾರಿ ಶುಂಠಿ ಬೆಳೆದು ಶ್ರೀಮಂತರಾಗಬೇಕು ಎಂಬ ಹಗಲುಕನಸು ಕಟ್ಟಿ ಬಿತ್ತಿ ಬೆಳೆದಿದ್ದ ಎಲ್ಲಾ ಕಡೆ ಭೂಮಿ ಲೀಸ್‍ಗೆ ಪಡೆದು ಶುಂಠಿ ಬಿತ್ತನೆ ಮಾಡಿದವರು ಈ ಬಾರಿ ಹೇಳ ಹೆಸರಿಲ್ಲದ ಹಾಗೆ ಆಗಿದ್ದಾರೆ.

ಅಂದರೆ ಶುಂಠಿ ಬೆಳೆಯಲೆಂದು ಸಾಲ ಸೋಲ ಮಾಡಿದವರಿಗೆ ಈ ಬಾರಿ ಬೆಳೆಯೂ ಕೈಕೊಟ್ಟಿದೆ. ಬೆಲೆಯಂತೂ ಯಾವುದಕ್ಕೂ ಸಾಲದಂತಾಗಿದೆ. ಒಟ್ಟಾರೆ ಈ ಬಾರಿ ಯಾವ ಬೆಳೆಗೂ ಬೆಲೆ ಸಿಗದೇ ಜೀವ ಉಳಿಸಿಕೊಳ್ಳುವ ತವಕದಲ್ಲಿ ರೈತರಿದ್ದಾರೆ. ಎಲ್ಲವುದರ ಮೇಲೂ ಕೊರೊನಾ ಎಂಬ ಮಹಾಮಾರಿಯ ಕರಿನೆರಳು ಬಿದ್ದಿರುವುದರಿಂದ ಅದರೊಳಗೆ ಒದ್ದಾಡಿ ಗುದ್ದಾಡಿ ಜೀವವನ್ನು ಉಳಿಸಿಕೊಂಡರಷ್ಟೇ ಸಾಕು.

ಕುಶಾಲನಗರ ವ್ಯಾಪ್ತಿಯ ರಂಗಸಮುದ್ರ, ನಂಜರಾಯಪಟ್ಟಣ, ವಾಲ್ನೂರು ತ್ಯಾಗತ್ತೂರು, ಬಸವನಹಳ್ಳಿ, ಅತ್ತೂರು, ಯಡವನಾಡು, ಭುವನಗಿರಿ, ಸೀಗೆಹೊಸೂರು, ಸಿದ್ದಲಿಂಗಪುರ, ಹಾರಂಗಿ, ಚಿಕ್ಕತ್ತೂರು ಮೊದಲಾದ ಗ್ರಾಮಗಳ ರೈತರು ಸುತ್ತಲೂ ಅರಣ್ಯಗಳ ನಡುವೆ ಬದುಕು ಕಟ್ಟಿಕೊಂಡಿರುವುದರಿಂದ ದಶಕಗಳಿಂದಲೂ ಈ ರೈತರು ಬೆಳೆಯುವ ಯಾವುದೇ ಬೆಳೆ ಕಾಡಾನೆಗಳು ಹಾಗೂ ಕಾಡು ಹಂದಿಗಳ ಪಾಲಾಗುತ್ತಿವೆ. ಅಳಿದುಳಿದ ಫಸಲಿಗೂ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುತ್ತಿಲ್ಲ. ಕಾಡಾನೆಗಳ ನಿಗ್ರಹ ಮಾಡುತ್ತೇವೆ ಎಂದು ಪ್ರತೀ ವರ್ಷವು ಹೇಳುವ ಅರಣ್ಯ ಇಲಾಖೆ ತಮಗೆ ಲಾಭವಾಗುವಂತಹ ಕಂದಕಗಳನ್ನು ಕಾಟಾಚಾರಕ್ಕೆ ತೆಗೆದು ಕೋಟಿ ಕೋಟಿ ಹಣದ ಲೆಕ್ಕವನ್ನು ಸರ್ಕಾರಕ್ಕೆ ತೋರಿಸುತ್ತಾರೆ. ಆದರೆ ಕಾಡಿನೊಳಗೆ ಕಾಡು ಪ್ರಾಣಿಗಳಿಗೆ ಬೇಕಾದ ಆಹಾರವಿಲ್ಲದೇ ನಾಡಿಗೆ ಲಗ್ಗೆ ಇಡುವ ಕಾಡಾನೆಗಳಿಂದ ಹಾನಿಗೀಡಾಗುವ ಬೆಳೆಗಳಿಗೆ ಅರಣ್ಯ ಇಲಾಖೆ ಶೇ. 2 ರಿಂದ 3 ರಷ್ಟು ಪ್ರಮಾಣದ ಪರಿಹಾರದ ಚೆಕ್ ನೀಡಿ ಕೈತೊಳೆದುಕೊಳ್ಳುತ್ತದೆ. ಅಂದರೆ ಕಾಡಾನೆ ಹಾವಳಿಯಿಂದ ಒಂದು ಎಕರೆ ಭೂಮಿಯಲ್ಲಿ ಜೋಳದ ಫಸಲು ನಷ್ಟವಾದರೆ ಕೇವಲ ಎರಡರಿಂದ ಮೂರು ಸಾವಿರ ರೂ. ಮಾತ್ರ ಪರಿಹಾರ ಅಂತಾ ಇಲಾಖೆ ಕೊಡುತ್ತದೆ. ಇದು ತಪ್ಪಬೇಕು. ರೈತ ಬೆಳೆಗೆ ಖರ್ಚು ಮಾಡಿದ ಖರ್ಚಿನ ಪರಿಶೀಲನೆ ನಡೆಸಿ ಕನಿಷ್ಟ ಅರ್ಧದಷ್ಟಾದರೂ ಪರಿಹಾರ ನೀಡಿದರೆ ಮಾತ್ರ ನೊಂದ ರೈತ ನಿಟ್ಟುಸಿರು ಬಿಡುತ್ತಾನೆ. ಸರಕಾರದ ಇಂತಹ ಅವೈಜ್ಞಾನಿಕ ಕ್ರಮಗಳು ದೂರವಾಗಬೇಕು. ರೈತ ಸ್ವಾಭಿಮಾನದಿಂದ ಬೆಳೆಯುವಂತಹ ಉತ್ತಮ ವಾತಾವರಣವನ್ನು ಸರ್ಕಾರ ಹಾಗೂ ಇಲಾಖೆಗಳು ನಿರ್ಮಾಣ ಮಾಡಬೇಕು.ಜೀವ ಉಳಿದರೆ ಮುಂದಿನ ವರ್ಷಗಳಲ್ಲಿ ಮತ್ತದೇ ಬೆಳೆ ಅದೇ ಯಾತನೀಯ ಬದುಕು ಸಾಗಿಸಬಹುದು. ಜೀವವೇ ಹೋಗಿಬಿಟ್ಟರೆ ಜೀವನ ಇನ್ನೆಲ್ಲಿ ಎಂಬ ದಯನೀಯ ಸ್ಥಿತಿ ರೈತಾಪಿ ಸಂಕುಲವನ್ನು ಆವರಿಸಿದೆ.

- ಕೆ.ಎಸ್. ಮೂರ್ತಿ