ಪಾಲಿಬೆಟ್ಟ, ಅ. 10 : ಕೊಡಗು ಜಿಲ್ಲೆಯ ಛಾಯಾಚಿತ್ರಗಾರರ ಸಂಘದ ಮಹಾಸಭೆಯು ಕುಶಾಲನಗರ ಸಮೀಪದ ಗುಡ್ಡೆಹೊಸೂರು ಸಹಕಾರ ಸಂಘದ ಕಟ್ಟಡದಲ್ಲಿ ನಿಕಟ ಪೂರ್ವ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಆಡಳಿತ ಮಂಡಳಿಯ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಸುರೇಶ್ ಮಾವಟ್ಕರ್, ಉಪಾಧ್ಯಕ್ಷರಾಗಿ ವೀರಾಜಪೇಟೆ ತಾಲೂಕಿನ ಎಂ.ಕೆ. ರವಿಕುಮಾರ್ ಹಾಗೂ ಜನಾರ್ದನ, ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ ದೀಪಕ್ ಕುಮಾರ್, ಸಂಘಟನ ಕಾರ್ಯದರ್ಶಿಯಾಗಿ ಪ್ರಮೋದ್, ಸಹ ಕಾರ್ಯದರ್ಶಿಯಾಗಿ ರಂಜಿತ್, ಜಿಲ್ಲಾ ಖಜಾಂಚಿಯಾಗಿ ಮೋಹನ್ ಹಾಗೂ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಜುಬೇರ್, ಮೈಕಲ್, ರೋಶನ್, ಮುನೀರ್, ಪ್ರಕಾಶ್, ಲವಕುಮಾರ್, ವಸಂತ್, ಯತಿರಾಜ್ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭ ವೀರಾಜಪೇಟೆ ತಾಲೂಕು ಅಧ್ಯಕ್ಷ ಡಿ. ರವೀಂದ್ರ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರದೀಪ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಶಾಂತಪ್ಪ, ಮಾಜಿ ಅಧ್ಯಕ್ಷರಾದ ನಾಗೇಶ್, ಡಾಡು ಜೋಸೆಪ್ ಹಾಗೂ ಸುಬ್ರಮಣ್ಯ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಸಂಘಗಳ ಪ್ರಮುಖರು ಹಾಜರಿದ್ದರು