ಕುಶಾಲನಗರ, ಅ. 10: ರಸ್ತೆ ನಡುವೆ ನಿಂತಿದ್ದ ಹಸುವೊಂದಕ್ಕೆ ವೇಗವಾಗಿ ಬಂದ ಮೋಟಾರ್ ಬೈಕ್ ಡಿಕ್ಕಿಯಾದ ಕಾರಣ ಹಸು ಸ್ಥಳದಲ್ಲೇ ಮೃತಪಟ್ಟು ಬೈಕ್ ಸವಾರ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ. ಬುಧವಾರ ರಾತ್ರಿ ಈ ಘಟನೆ ನಡೆದಿದ್ದು ಪಟ್ಟಣದ ಕಾಳೆಘಾಟ್ ಹೊಟೇಲ್ ಮುಂಭಾಗ ರಸ್ತೆಯಲ್ಲಿದ್ದ ಹಸುವಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ತೀವ್ರ ಗಾಯಗಳೊಂದಿಗೆ ಹಸು ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.
ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಹೆದ್ದಾರಿ ರಸ್ತೆಯಲ್ಲಿ ರಾತ್ರಿ ವೇಳೆ ಬೀಡಾಡಿ ದನಗಳು ಓಡಾಟ ಮಾಡುವ ಕಾರಣ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿದೆ. ಇಂತಹ ರಾಸುಗಳನ್ನು ಪತ್ತೆಹಚ್ಚಿ ದನದ ದೊಡ್ಡಿಗೆ ಸೇರಿಸಿ ಕ್ರಮಕೈಗೊಳ್ಳುವಂತೆ ಕುಶಾಲನಗರದ ನಿವಾಸಿ ಕೆ.ಬಿ. ರಾಜು ಆಗ್ರಹಿಸಿದ್ದಾರೆ.