ಸಂಪಾಜೆ, ಅ. 8: ಕರ್ನಾಟಕ ರಾಜ್ಯ ಹಿಂದಿ ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ 2020ನೇ ಸಾಲಿನ ರಾಜ್ಯ "ಹಿಂದಿ ಶಿಕ್ಷಕ ರತ್ನ " ಪ್ರಶಸ್ತಿ ಪಡೆದ ಚೆಂಬು ಗ್ರಾಮದ ಶಿಕ್ಷಕಿ ಪಿ.ಎಸ್. ಕಾಮಾಕ್ಷಿ ಅವರನ್ನು ಊರುಬೈಲು ಶ್ರೀ ಭಗವಾನ್ ಸಂಘದ ವತಿಯಿಂದ ಅಭಿನಂದಿಸ ಲಾಯಿತು.
ಸಂಘದ ಗೌರವಾಧ್ಯಕ್ಷ ಅನಂತ್ ಊರುಬೈಲು, ಸುಬ್ರಮಣ್ಯ ಉಪಾಧ್ಯಾಯ, ಪಾಲ್ಗುಣ, ಭಗವಾನ್ ಸಂಘದ ಅಧ್ಯಕ್ಷ ರವಿರಾಜ್, ಕಾರ್ಯದರ್ಶಿ ಶಶಿಧರ ಮತ್ತು ಸದಸ್ಯರು ಉಪಸ್ಥಿತರಿದ್ದರು.