ಮಡಿಕೇರಿ, ಅ. 8: ಎಂ.ಎಸ್ಸಿ ಮೈಕ್ರೋಬಯಾಲಜಿಯಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಮೂಲಕ ಜಿಲ್ಲೆಯ ಯುವಕ ಮುಕ್ಕಾಟಿರ ಪೊನ್ನಣ್ಣ ಪ್ರಥಮ ರ್ಯಾಂಕ್‍ನೊಂದಿಗೆ ಎರಡು ಚಿನ್ನದ ಪದಕಗಳಿಸಿದ್ದಾರೆ. ಇವರು ಮೂಲತಃ ಕುಂಜಿಲಗೇರಿ ಮುಕ್ಕಾಟಿರ ಪ್ರಸ್ತುತ ಚಿಕ್ಕಮಗಳೂರಿನಲ್ಲಿ ನೆಲೆಸಿರುವ ಬೋಪಣ್ಣ ಮತ್ತು ಪ್ರೀತ್ ದಂಪತಿಯ ಪುತ್ರ. ಇತ್ತೀಚೆಗೆ ನಡೆದ ದಾವಣಗೆರೆ ವಿ.ವಿ.ಯ 7ನೇಯ ಘಟಿಕೋತ್ಸವದಲ್ಲಿ ಇವರು ಪದವಿಯೊಂದಿಗೆ ಚಿನ್ನದ ಪದಕ ಪಡೆದುಕೊಂಡರು.