ಮೂರ್ನಾಡು, ಅ. 9: ಮೂರ್ನಾಡು ಹೋಬಳಿ ಬಂಟರ ಸಂಘದ ಮಹಾಸಭೆಯನ್ನು ಅಧ್ಯಕ್ಷರಾದ ಗಿರೀಶ ರೈ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡು ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭ ನೂತನ ಆಡಳಿತ ಮಂಡಳಿ ರಚಿಸಲಾಯಿತು. ಅಧ್ಯಕ್ಷರಾಗಿ ಬಿ.ಕೆ. ಚಂದ್ರಶೇಖರ ರೈ, ಮಹಿಳಾ ಅಧ್ಯಕ್ಷರಾಗಿ ಜಯಂತಿ ಲವ ರೈ, ಕಾರ್ಯದರ್ಶಿಯಾಗಿ ಅಶ್ವತ್ಥ ರೈ, ಮಹಿಳಾ ಕಾರ್ಯದರ್ಶಿಯಾಗಿ ಹೇಮಾವತಿ ರೈ, ಸಹಕಾರ್ಯ ದರ್ಶಿಯಾಗಿ ಸತೀಶ ರೈ, ಖಜಾಂಚಿ ಯಾಗಿ ರವೀಂದ್ರ ರೈ, ಗೌರವ ಅಧ್ಯಕ್ಷ ರಾಗಿ ಅಶೋಕ ಶೆಟ್ಟಿ ನೇಮಕಗೊಂಡರು. ವಿಶೇಷ ಆಹ್ವಾನಿತರಾಗಿ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾದ ಬಿ.ಡಿ. ನಾರಾಯಣ ರೈ, ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷ ರಮೇಶ ರೈ, ಮಹಿಳಾ ಅಧಕ್ಷೆ ವಾಣಿಶಬರಿಶ ರೈ, ತಾಲೂಕು ಮಹಿಳಾ ಪ್ರಧಾನ ಕಾರ್ಯದರ್ಶಿ ರುಕ್ಮಿಣಿ ರೈ ಆಗಮಿಸಿದ್ದರು. ಮಾಜಿ ಅಧ್ಯಕ್ಷ ಬಾಬಾ ಅರುಣ ರೈ ಹಾಜರಿದ್ದರು.
ಪ್ರತಿಕ್ಷ ಹಾಗೂ ಲತಾಕ್ಸ ಪ್ರಾರ್ಥಿಸಿದರು. ಚಂದ್ರಶೇಖರ ರೈ ಸ್ವಾಗತಿಸಿದರೆ, ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಜಯಂತಿ ಲವ ರೈ ಮಂಡಿಸಿದರು. ಅಶ್ವತ್ಥ ರೈ ನಿರೂಪಿಸಿ, ಜಯರಾಂ ರೈ ವಂದಿಸಿದರು.