ನಾಪೋಕ್ಲು ಠಾಣಾಧಿಕಾರಿಗಳ ಸಮ್ಮುಖದ ಸಭೆಯಲ್ಲಿ ತೀರ್ಮಾನ
ನಾಪೆÇೀಕ್ಲು, ಅ. 9: ಪಟ್ಟಣದಲ್ಲಿನ ಆಟೋ ನಿಲ್ದಾಣವನ್ನು ವಿಸ್ತರಿಸಿ ಕೊಡುವಂತೆ ವಾಹನ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಮತ್ತು ಪೊಲೀಸ್ ಠಾಣಾಧಿಕಾರಿಗಳು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಭೆಯನ್ನು ಕರೆದು ಆಟೋ ನಿಲ್ದಾಣದ ನಿಲುಗಡೆ ಜಾಗವನ್ನು ಪರಿಶೀಲಿಸಿ ಈಗಿರುವ 100 ಮೀಟರ್ ವಿಸ್ತೀರ್ಣ ನಿಲ್ದಾಣವನ್ನು 120 ಮೀಟರ್‍ಗೆ ವಿಸ್ತರಿಸಿದ್ದಾರೆ.
ನಾಪೆÉÇೀಕ್ಲುವಿನಲ್ಲಿ ವಾಹನಗಳ ಸಂಖ್ಯೆ ಜಾಸ್ತಿಯಾಗಿದ್ದು, ವ್ಯಾಪಾರಸ್ಥರು ತಮ್ಮ ವಾಹನಗಳನ್ನು ದಿನವಿಡೀ ಪಟ್ಟಣದಲ್ಲಿ ನಿಲ್ಲಿಸುವುದರಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದು, ಇದನ್ನು ಪರಿಹರಿಸಲು ನಾಪೆÉÇೀಕು ಠಾಣಾಧಿಕಾರಿ ಆರ್. ಕಿರಣ್ ಅವರು ನಗರದ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡಿ ಅಂಗಡಿ ಮಾಲೀಕರು ನಗರದ ರಸ್ತೆಯಲ್ಲಿ ವಾಹನ ನಿಲ್ಲಿಸದಂತೆ ನೋಟೀಸ್ ನೀಡಿದ್ದಾರೆ. ಅದರಂತೆ ಬೇತು ರಸ್ತೆಯ ಆಟೋ ನಿಲ್ದಾಣದಲ್ಲಿ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಆಟೋ ನಿಲ್ದಾಣದಲ್ಲಿ ಖಾಸಗಿ ವಾಹನ ನಿಲ್ಲಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭ ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರುಳೀಧರ್ ಕರುಂಬಮ್ಮಯ್ಯ, ಆಡಳಿತಾಧಿಕಾರಿ ಬಿಂಧು ಶ್ರೀ, ಠಾಣಾಧಿಕಾರಿ ಆರ್, ಕಿರಣ್, ಪಿ.ಡಿ.ಓ. ಚೊಂದಕ್ಕಿ, ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಇ. ಅಬ್ದುಲ್ ರಜಾಕ್, ಮತ್ತಿತರರು ಇದ್ದರು.