ಕೂಡಿಗೆ, ಅ. 9 : ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಚೇರಿಯ ಸಭಾಂಗಣದ ಮುಂಭಾಗದಲ್ಲಿ ಸರ್ಕಾರದ ಹೊಸ ಯೋಜನೆ ಅನ್ವಯ ರೈತರ ಕಾಮಗಾರಿ ಬೇಡಿಕೆ ಸಲ್ಲಿಕೆಗೆ ಪೆಟ್ಟಿಗೆ ಇಡಲಾಗಿದೆ. ಇದರಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2021-22 ನೇ ಸಾಲಿನ ರೈತರ ಕಾಮಗಾರಿಗಳನ್ನು ಕೈಗೊಳ್ಳಲು, ಮತ್ತು ತಮ್ಮ ತಮ್ಮ ಜಮೀನಿನಲ್ಲಿ ಕಾಮಗಾರಿಗಳು ಆಗಬೇಕಾದರೆ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ರೈತರು ಬೇಡಿಕೆ ಅರ್ಜಿಯನ್ನು ಹಾಕಬಹುದಾಗಿದೆ.

ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 2021-22ನೇ ವರ್ಷದ ಬೇಡಿಕೆ ಕಾಮಗಾರಿಗಳನ್ನು ನಡೆಸಲು ವಿವರವಾದ ಮಾಹಿತಿಯನ್ನು ಮತ್ತು ಕಾಮಗಾರಿಗಳು ನಡೆಯಬೇಕಾಗಿರುವ ಸ್ಥಳಗಳನ್ನು ನಮೂದಿಸುವ ಅರ್ಜಿಯನ್ನು ಗ್ರಾಮ ಪಂಚಾಯತಿಯಲ್ಲಿ ನೀಡಲಾಗುವುದು ಅದನ್ನು ಭರ್ತಿ ಮಾಡಿ ರೈತರು ಕಾಮಗಾರಿಯ ಬೇಡಿಕೆಯನ್ನು ಬರೆದು ಈ ಪೆಟ್ಟಗೆಯಲ್ಲಿ ಹಾಕಬಹುದಾಗಿದೆ

ಒಂದು ತಿಂಗಳ ನಂತರ ಈ ಪೆಟ್ಟಿಗೆಯನ್ನು ತೆಗೆದು ರೈತರ ಬೇಡಿಕೆ ಅನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ ಮತ್ತು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಣಿ ಮಾಡಿಕೊಂಡಿರುವ ರೈತರು ತಮ್ಮ ಜಮೀನಿನ ಕೆಲಸವನ್ನು ಅವರುಗಳೇ ಮಾಡಿಕೊಳ್ಳಲು ಸಹಕಾರವಾಗುತ್ತದೆ ಎಂದು ಅಭಿವೃದ್ಧಿ ಅಧಿಕಾರಿ ಅಯಿಷಾ ತಿಳಿಸಿದ್ದಾರೆ.