*ಗೋಣಿಕೊಪ್ಪಲು, ಅ. 9: ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019-20ನೇ ಸಾಲಿನಲ್ಲಿ ರೂ. 28.06 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೊಡೇಂದೆರ ಬಾಂಡ್ ಗಣಪತಿ ತಿಳಿಸಿದ್ದಾರೆ.
ಹಾತೂರು ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಸಂಘದ 43ನೇ ವಾರ್ಷಿಕ ಮಹಾಸಭೆಯಲ್ಲಿ ಮಾಹಿತಿ ನೀಡಿದರು. ಸಂಘವು ರೂ. 7066.09 ಲಕ್ಷ ವಾರ್ಷಿಕ ವಹಿವಾಟು ನಡೆಸಿದ್ದು, ದುಡಿಯುವ ಬಂಡವಾಳದಿಂದ ರೂ. 1459.14 ಲಕ್ಷ ಗಳಿಸಿದೆ. ಹಾಗೆಯೇ ಕ್ಷೇಮ ನಿಧಿಯಿಂದ ರೂ. 53.43 ಲಕ್ಷ, ಪಾಲು ಬಂಡವಾಳದಿಂದ ರೂ. 76.96 ಲಕ್ಷ ಗಳಿಸಿದೆ ಎಂದು ವಾರ್ಷಿಕ ವರದಿಯಲ್ಲಿ ಸಂಘದ ಸದಸ್ಯರಿಗೆ ಮಾಹಿತಿ ನೀಡಿದರು.
ಸಂಘದ ಸದಸ್ಯರಿಗೆ ತೋಟದ ಅಭಿವೃದ್ಧಿಗಾಗಿ, ಮಕ್ಕಳ ವಿದ್ಯಾಭ್ಯಾಸ, ತೋಟದ ಲೈನ್ ಮನೆ ನಿರ್ಮಾಣ ಹಾಗೂ ಇತರ ನಿಗದಿತ ಉದ್ದೇಶಗಳಿ ಗಾಗಿ ದೀರ್ಘಾವಧಿ ಸಾಲ ನೀಡಲು ತಿರ್ಮಾನಿಸಿರುವುದಾಗಿ ಸಭೆಗೆ ತಿಳಿಸಿದರು.
7ನೇ ತರಗತಿ, 10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪೆÇ್ರೀತ್ಸಾಹಕರ ಬಹುಮಾನವನ್ನು ನೀಡಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಎಸ್.ಕೆ. ಮಂದಣ್ಣ, ನಿರ್ದೇಶಕರುಗಳಾದ ಸಿ.ಎಸ್. ಬೋಪಣ್ಣ, ಹೆಚ್.ಡಿ. ಶ್ರೀನಿವಾಸ್, ಎಂ.ಟಿ. ಅಯ್ಯಪ್ಪ, ಕೆ.ಬಿ. ಉತ್ತಪ್ಪ, ಪಿ.ಡಿ. ದಿನೇಶ್, ಬಿ.ಎ. ದುಗ್ಗಪ್ಪ, ಕೆ.ವಿ. ಮುತ್ತಣ್ಣ, ಸಿ.ಜೆ. ರೂಪ, ಕೆ.ಎಂ. ಕಾವೇರಮ್ಮ, ಕೆ.ಡಿ.ಸಿ.ಸಿ. ಬ್ಯಾಂಕಿನ ಮೇಲ್ವಿಚಾರಕ ಸಿ. ಶಂಕರ, ಹಾತೂರು ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಂ. ಪ್ರದೀಪ್ ಹಾಗೂ ಸಿಬ್ಬಂದಿಗಳು ಮತ್ತು ಸಂಘದ ಸದಸ್ಯರು ಹಾಜರಿದ್ದರು.