ಮಡಿಕೇರಿ, ಅ. 9: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ 3 ಸಾವು ವರದಿಯಾಗಿದ್ದು, ವಿವರ ಕೆಳಕಂಡಂತಿದೆ.
ಸೋಮವಾರಪೇಟೆಯ ಎಂ.ಡಿ ಬ್ಲಾಕ್ ನ ನಿವಾಸಿ, 76 ವರ್ಷದ ಪುರುಷ, ಕೊಡ್ಲಿಪೇಟೆಯ ವಿನಾಯಕ ಸರ್ಕಲ್ ನ ನಿವಾಸಿ, 56 ವರ್ಷದ ಮಹಿಳೆ ಮತ್ತು ವೀರಾಜಪೇಟೆಯ ತೆಲುಗರಬೀದಿ ನಿವಾಸಿ, 51 ವರ್ಷದ ಪುರುಷರೊಬ್ಬರು ಮೃತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಪ್ರಕರಣಗಳ ಸಂಖ್ಯೆ 53 ಕ್ಕೇರಿದ.
ಜಿಲ್ಲೆಯಲ್ಲಿ ಹೊಸದಾಗಿ 81 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3539 ಪ್ರಕರಣಗಳು ವರದಿಯಾಗಿದ್ದು, 2886 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 53 ಮಂದಿ ಸಾವನ್ನಪ್ಪಿದ್ದು 600 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 116 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 80 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ, 404 ಮಂದಿ ಹೋಮ್ ಐಸೋಲೇಷನ್ ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 564 ನಿಯಂತ್ರಿತ ವಲಯಗಳಿವೆ.