ಮಡಿಕೇರಿ, ಅ. 7: ಐಪಿಎಸ್ ಅಧಿಕಾರಿಯಾಗಿರುವ ಕೊಡಗಿನವರಾದ ಮನೆಯಪಂಡ ಎ. ಗಣಪತಿ ಅವರು ಇದೀಗ ಡೈರೆಕ್ಟರ್ ಜನರಲ್ ಬ್ಯುರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿಯಾಗಿ (ಃಅಂS) ನೇಮಕಗೊಂಡಿದ್ದಾರೆ. ಮೂಲತಃ ಪೊನ್ನಂಪೇಟೆ ಕುಂದದ ನಿವಾಸಿಯಾಗಿರುವ ಗಣಪತಿ ಅವರು ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾ. 6 ರಂದು ಇವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಈ ತನಕ ಅವರು ದೆಹಲಿಯಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಅISಈ) ನಲ್ಲಿ ವಿಶೇಷ ಡೈರೆಕ್ಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು,

ಸಿವಿಲ್ ಏವಿಯೇಷನ್ ಡಿ.ಜಿ. ಯಾಗಿ ಗಣಪತಿ ಆಯ್ಕೆ(ಮೊದಲ ಪುಟದಿಂದ) ಇದೀಗ ಸಿವಿಲ್ ಏವಿಯೇಷನ್ ಡಿ.ಜಿ. ಹುದ್ದೆಗೆ ನಿಯೋಜಿತರಾಗಿದ್ದಾರೆ. ಪೊನ್ನಂಪೇಟೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ವ್ಯಾಸಂಗ ಮಾಡಿದ್ದ ಗಣಪತಿ ಅವರು ಮನೆಯಪಂಡ ಅಪ್ಪಯ್ಯ ಹಾಗೂ ಪ್ರೇಮಲತಾ ದಂಪತಿಯ ಪುತ್ರರಾಗಿದ್ದಾರೆ. 1986ರ ಉತ್ತರಖಾಂಡ್ ಬ್ಯಾಚ್‍ನ ಹಿರಿಯ ಐಪಿಎಸ್ ಶ್ರೇಣಿಯ ಅಧಿಕಾರಿ ಇವರಾಗಿದ್ದಾರೆ. ತಾ. 6 ರಂದು ಇವರ ನೇಮಕಾತಿಗೆ ಕ್ಯಾಬಿನೆಟ್‍ನ ಒಪ್ಪಿಗೆ ದೊರೆತಿದ್ದು, ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಹಿಂದೆ ಉತ್ತರಖಾಂಡ್‍ನ ಡಿಜಿಪಿ ಆಗಿಯೂ ಇವರು ಕರ್ತವ್ಯ ನಿರ್ವಹಿಸಿದ್ದರು.