ಸೋಮವಾರಪೇಟೆ, ಅ.7: ತಾಲೂಕಿನ ವಿವಿಧೆಡೆ ಅಕ್ರಮವಾಗಿ ತಯಾರಿಸಿದ್ದ / ಮಾರಾಟ ಮಾಡುತ್ತಿದ್ದ ಸಂದರ್ಭ ಧಾಳಿ ನಡೆಸಿ ವಶಪಡಿಸಿಕೊಂಡ ಕಳ್ಳಭಟ್ಟಿಯನ್ನು ಇಲ್ಲಿನ ಅಬಕಾರಿ ಇಲಾಖಾ ಆವರಣದಲ್ಲಿ ನಾಶಗೊಳಿಸಲಾಯಿತು.
ತಾಲೂಕಿನಲ್ಲಿ ಸುಮಾರು 76 ಪ್ರಕರಣಗಳಲ್ಲಿ ವಶ ಪಡಿಸಿಕೊಂಡ 123.720 ಲೀಟರ್ ಮದ್ಯ ಹಾಗೂ 10.560 ಲೀಟರ್ ಕಳ್ಳಭಟ್ಟಿ ಸಾರಾಯಿಯನ್ನು ಸೋಮವಾರಪೇಟೆ ವಲಯ ಕಚೇರಿ ಆವರಣದಲ್ಲಿ ನಾಶ ಪಡಿಸಲಾಯಿತು.
ಈ ಸಂದರ್ಭ ಅಬಕಾರಿ ಇಲಾಖೆಯ ಪ್ರಭಾರ ಉಪಅಧೀಕ್ಷಕಿ ಆರ್.ಎಂ. ಚೈತ್ರಾ, ಪಾನೀಯ ನಿಗಮದ ವ್ಯವಸ್ಥಾಪಕ ವಿಠಲ್ ಕದಂ, ಅಬಕಾರಿ ನಿರೀಕ್ಷಕ ಸಂಪತ್ ಕುಮಾರ್, ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.