ಮಡಿಕೇರಿ, ಅ. 7: ಯೇಸುಕ್ರಿಸ್ತನ ಪ್ರಾರ್ಥನೆ ಮಾಡಿದರೆ ಕೊರೊನಾ ಕ್ಷಣಮಾತ್ರದಲ್ಲಿ ವಾಸಿಯಾಗುತ್ತದೆ ಎಂದು ಕೊರೊನಾ ಸೋಂಕಿತರ ವ್ಯಕ್ತಿಯನ್ನು ಮತಾಂತರಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ಅಮ್ಮತ್ತಿಯಲ್ಲಿ ನಡೆದಿದೆ.

ನಿಕೋಲ್ಸ್ ಎಂಬ ವ್ಯಕ್ತಿ ಅಮ್ಮತ್ತಿಯಲ್ಲಿ ಕೊರೊನಾ ಸೋಂಕುವಿನಿಂದ ಗೃಹಸಂಪರ್ಕ ತಡೆಯಲ್ಲಿರುವ ವ್ಯಕ್ತಿಗೆ ಕರೆ ಮಾಡಿ ‘ನೀವು ಏಸುಕ್ರಿಸ್ತನನ್ನು ಪ್ರಾರ್ಥನೆ ಮಾಡಬೇಕು, ನಾನು ಹೇಳಿದ ಹಾಗೆ ಪ್ರಾರ್ಥಿಸಿದರೆ, ನಾಳೆ ಬೆಳಿಗ್ಗೆ ಒಳಗಡೆ ಕೊರೊನಾ ಸಂಪೂರ್ಣ ಗುಣಮುಖವಾಗಲಿದೆ’ ಎಂದು ಮನಪರಿವರ್ತನೆ ಮಾಡಲು ಪ್ರಯತ್ನಿಸಿದ್ದಾರೆ. ಆ ವ್ಯಕ್ತಿ ಈ ವಿಚಾರವನ್ನು ಅಲ್ಲಿನ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕಾರ್ಯಕರ್ತರು ನಿಕೋಲ್ಸ್‍ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಈ ಸಂಬಂಧ ವೀರಾಜಪೇಟೆ ಗ್ರಾಮಾಂತರ ಪೊಲೀಸರು ನಿಕೋಲ್ಸ್‍ನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.