ಕೊಪ್ಪ ಸರಕಾರಿ ಆಸ್ಪತ್ರೆ: ಗಾಂಧಿ ಜಯಂತಿ ಅಂಗವಾಗಿ ಸಮೀಪದ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಯಿತು. ಕಾವೇರಿ ಪರಿಸರ ರಕ್ಷಣಾ ಬಳಗದ ಪ್ರಮುಖರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಈ ಸಂದರ್ಭ ಪಾಲ್ಗೊಂಡಿದ್ದರು.

ಅಯ್ಯಂಗೇರಿ: ಅಯ್ಯಂಗೇರಿಯ ಗಾಂಧಿ ಸ್ವಸಹಾಯ ಸಂಘದ ವತಿಯಿಂದ ಚಿನ್ನತಪ್ಪ ದೇವಸ್ಥಾನ ರಸ್ತೆಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಈ ಮೂಲಕ ಗಣ್ಯರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಮಡಿಕೇರಿ: ನಗರದ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಅವರ 151ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸರ್ವ ಧರ್ಮ ಪ್ರಾರ್ಥನೆಯ ಮೂಲಕ ಮಹಾತ್ಮಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರಿಗೆ ನಮನವನ್ನು ಸಲ್ಲಿಸಲಾಯಿತು.

ಗಾಂಧಿ ಜಯಂತಿ ಪ್ರಯುಕ್ತ ವಿವಿಧ ಸ್ಪ್ಪರ್ಧೆಗಳನ್ನು ಆನ್‍ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು. ವೇದಿಕೆಯಲ್ಲಿ ಪ್ರಾಂಶುಪಾಲೆ ಜೋಯಿಸಿ ವಿನಯ, ಸುಲ್ ಹತ್ ಮೊದಲಾದವರು ಉಪಸ್ಥಿತರಿದ್ದರು.ದೊಡ್ಡಪುಲಿಕೋಟು: ಮಹಾತ್ಮಾಗಾಂಧಿ ಅವರ 151ನೇ ಜನ್ಮ ದಿನವನ್ನು ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸಲಾಯಿತು. ಯುವಕ ಸಂಘಗಳು, ಸಂಘಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ದೊಡ್ಡಪುಲಿಕೋಟುವಿನ ಮಾರುತಿ ಯುವಕ ಸಂಘದ ಮೈದಾನದಲ್ಲಿ ಶ್ರಮದಾನ ನಡೆಯಿತು. ಊರಿನ ಹಿರಿಯರಾದ ಮುಕ್ಕಾಟಿರ ಜಾಲಿಚಿಂಗಪ್ಪ ಸೇರಿದಂತೆ ಯುವಕ ಸಂಘದ ಸದಸ್ಯರು ಪಾಲ್ಗೊಂಡಿದ್ದರು.

ಕುಶಾಲನಗರ ಆರ್‍ಎಂಸಿ ಮಾರುಕಟ್ಟೆ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸಂತೆ ವ್ಯಾಪಾರಿಗಳ ಸಂಘ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ಸಂತೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಡಿ.ಎಸ್. ಮಹೇಶ್, ಗೌರವಾಧ್ಯಕ್ಷ ಹೆಚ್.ಡಿ. ಚಂದ್ರು, ನಿರ್ದೇಶಕರುಗಳಾದ ಕೆ.ಆರ್. ಮಧು, ಸಯ್ಯದ್ ಅಹಮ್ಮದ್, ರಂಗಸ್ವಾಮಿ, ಸ್ವಚ್ಛತಾ ಆಂದೋಲನದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಡಿ.ಆರ್. ಸೋಮಶೇಖರ್, ಕೆ.ಜಿ. ಮನು, ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕರಾದ ಮುತ್ತ, ಅರಣ್ಯ ಇಲಾಖೆಯ ಆರ್‍ಆರ್‍ಟಿ ವಿಭಾಗದ ಕೌಶಿಕ್, ಪುಟ್ಟ, ಪ್ರದೀಪ್, ಸಿದ್ದ ಮತ್ತಿತರರು ಇದ್ದರು.

ಪೆರಾಜೆ: ಮಹಾತ್ಮಾ ಗಾಂಧೀಜಿಯವರ 151ನೇ ಜಯಂತಿಯ ಅಂಗವಾಗಿ ಪೆರಾಜೆ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ವಿಶೇಷ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಪಂಚಾಯಿತಿ ಕಾರ್ಯದರ್ಶಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ, ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಉಪಾಧ್ಯಕ್ಷ ನಂಜಪ್ಪ, ಪಂಚಾಯಿತಿ ಮಾಜಿ ಸದಸ್ಯರಾದ ಹೊನ್ನಪ್ಪ, ಚಿನ್ನಪ್ಪ, ಶಿವಕುಮಾರ್, ಪ್ರಕಾಶ್, ಶೀಲಾ ಚಿದಾನಂದ, ಪಂಚಾಯಿತಿ ಸಿಬ್ಬಂದಿ ಶ್ರೀನಾಥ್, ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.ಪೆರಾಜೆ ಬಿಜೆಪಿ: ಮಹಾತ್ಮ ಗಾಂಧಿ ಜಯಂತಿ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ್ ನಮ್ಮ ಸಂಕಲ್ಪ ಕಾರ್ಯಕ್ರಮವು ಗ್ರಾಮ ಪಂಚಾಯತ್ ಪೆರಾಜೆ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಕೃಷಿ ಮೋರ್ಚಾ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಕೊಡಗು ಭಾ.ಜ.ಪಾ ಉಪಾಧ್ಯಕ್ಷ ಅರುಣ್ ಕುಮಾರ್, ಕಾಂಗೀರ ಸತೀಶ್, ಮನು ಮಹೇಶ್ ಮತ್ತು ಪ್ರಸನ್ನ ನೆಕ್ಕಿಲ, ಧನಂಜಯ, ಮಾಜಿ ಅಧ್ಯಕ್ಷ ಹೊನ್ನಪ್ಪ ಮೊದಲಾದವರು ಹಾಜರಿದ್ದರು.

ಯುವಕ ಮಂಡಲ

ಪೆರಾಜೆ: ಚಿಗುರು ಯುವಕಮಂಡಲ ಪೆರಾಜೆ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಯುವಕ ಮಂಡಲ ವತಿಯಿಂದ ಗಿಡಗಳಿಗೆ ಗೊಬ್ಬರ ಹಾಕುವುದು ಮತ್ತು ಗಿಡ ಗಂಟಿಗಳನ್ನು ಕಿತ್ತು ಸ್ವಚ್ಛಗೊಳಿಸುವುದರ ಮೂಲಕ ಶ್ರಮದಾನಗೊಳಿಸಲಾಯಿತು. ಚಿಗುರು ಯುವಕ ಮಂಡಲದ ಅಧ್ಯಕ್ಷ ಕಿರಣ್, ಕಾರ್ಯದರ್ಶಿ ದಿವಾಕರ, ಸಾಂಸ್ಕøತಿಕ ಕಾರ್ಯದರ್ಶಿ ಭವಿತ್, ಸಂಘದ ಮಾಜಿ ಅಧ್ಯಕ್ಷ ಶೀತಲ್ ಸೇರಿದಂತೆ ಪದಾಧಿಕಾರಿಗಳು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ನರಿಯಂದಡ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೇಲಾವರ ಗ್ರಾಮದಲ್ಲಿ ನರಿಯಂದಡ ಬಿಜೆಪಿ ಶಕ್ತಿ ಕೇಂದ್ರದ ಮೋರ್ಚಾದ ವತಿಯಿಂದ ಕಾರ್ಯಕ್ರಮ ನಡೆಯಿತು.

ನರಿಯಂದಡ ಶಕ್ತಿ ಕೇಂದ್ರದ ಉಪಾಧ್ಯಕ್ಷ ಬಾಚಮಂಡ ಲೋಕೇಶ್, ಬೂತ್ ಸಮಿತಿಯ ಅಧ್ಯಕ್ಷ ಕುಟ್ಟನ ರಾಧಾಕೃಷ್ಣ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಂತರ ಮಟ್ಟದ ಯುವ ಮೋರ್ಚಾದ ಅಧ್ಯಕ್ಷ ಕುಟ್ಟನ ಶಶಿ ಕುಮಾರ್, ಕಾರ್ಯದರ್ಶಿಯಾಗಿರುವ ಕೋಳಿಮಾಡು ಬಿಪಿನ್ ಹಾಗೂ ಸದಸ್ಯ ಕುಟ್ಟನ ಸುನಿಲ್, ಯುವ ಕಾರ್ಯಕರ್ತರು ಹಾಜರಿದ್ದರು. ಸಭೆಯ ನಂತರ ಸ್ವಚ್ಛ ಭಾರತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.