ಕುಶಾಲನಗರ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ದಲಿತ ಸಂಘರ್ಷ ಸಮಿತಿ, ದೇಶ್ ಪ್ರೇಮಿ ಯೂತ್ ಕ್ಲಬ್ ನೇತೃತ್ವದಲ್ಲಿ ಕುಶಾಲನಗರದÀ ಫೀಲ್ಡ್ ಮಾರ್ಷಲ್ ಕೆಎಂ.ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರಕಾರ ಮತ್ತು ಉತ್ತರಪ್ರದೇಶ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಡಿಎಸ್ಎಸ್ ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಕಾಂಗ್ರೆಸ್ ನಗರಾಧ್ಯಕ್ಷ ಶರೀಫ್ ಇಬ್ರಾಹಿಂ, ದೇಶ್ ಪ್ರೇಮಿ ಯೂತ್ ಕ್ಲಬ್ನ ರಿಜ್ವಾನ್, ನಯಾಜ್, ಅಜರುದ್ದಿನ್, ವಿನಾಯಕ, ಭೀಮ್ ಆರ್ಮಿಯ ರಾಜ್ಯ ಕಾರ್ಯದರ್ಶಿ ಅಕ್ರಮ್, ಡಿಎಸ್ಎಸ್ನ ಕೀರ್ತಿರಾಜು ಮತ್ತಿತರರು ಇದ್ದರು.ಕೊಡ್ಲಿಪೇಟೆ: ಉತ್ತರಪ್ರದೇಶದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಕೊಡ್ಲಿಪೇಟೆಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮುಖಂಡರಾದ ಜೆ.ಎಲ್. ಜನಾರ್ಧನ್, ಸೋಮಣ್ಣ, ವೀರಭದ್ರಯ್ಯ, ಕಾಳಯ್ಯ, ಡಿ.ಬಿ.ವಿಜಯ, ವಸಂತ, ಡಿ.ಎಸ್. ಇಂದ್ರೇಶ್, ಹೇಮಂತ್, ಪ್ರಸನ್ನ, ಮಂಜಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.ಸೋಮವಾರಪೇಟೆ: ಉತ್ತರ ಪ್ರದೇಶದಲ್ಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ದಲಿತ ಹಿತರಕ್ಷಣಾ ಒಕ್ಕೂಟ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಈ ಸಂದರ್ಭ ಒಕ್ಕೂಟದ ಜಿಲ್ಲಾಧ್ಯಕ್ಷ ಡಿ.ಎಸ್. ನಿರ್ವಾಣಪ್ಪ, ಜನಾಂದೋಲನ ಸಂಘಟನೆಯ ಜಿಲ್ಲಾಧ್ಯಕ್ಷ ವಿ.ಪಿ. ಶಶಿಧರ್, ಒಕ್ಕೂಟದ ತಾಲೂಕು ಅಧ್ಯಕ್ಷ ಡಿ.ಎನ್. ವಸಂತ್, ಮುಖಂಡರುಗಳಾದ ಬಿ.ಇ. ಜಯೇಂದ್ರ, ಎಂ.ಪಿ. ಹೊನ್ನಪ್ಪ, ಜಯಪ್ಪ ಹಾನಗಲ್ಲು, ವೀಣಾ, ಲತಾ, ಕೆ.ಬಿ. ರಾಜು, ಹೆಚ್.ಎ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.ಶನಿವಾರಸಂತೆ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯನ್ನು ಖಂಡಿಸಿ ಶನಿವಾರಸಂತೆ ಹೋಬಳಿ ದಲಿತ ಸಂಘರ್ಷ ಸಮಿತಿ ಹಾಗೂ ಸಾರ್ವಜನಿಕರ ವತಿಯಿಂದ ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಿತು. ಈ ಸಂದರ್ಭ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ, ಜನತಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎ. ಆದಿಲ್ ಪಾಶಾ ಅವರುಗಳು ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ದಲಿತ ಮುಖಂಡರುಗಳಾದ ಎಂ.ಜಿ. ಶಿವಶಂಕರ್, ವಿರೂಪಾಕ್ಷ ಸಂದೀಪ್, ವೀರೇಂದ್ರ, ಎಸ್.ಎಸ್. ಶಿವಲಿಂಗ, ಎಸ್.ಜೆ. ರಾಜಪ್ಪ, ಕೆ.ಎಸ್. ರಾಮು, ಸದಸ್ಯರುಗಳಾದ ನವೀನ್, ಸುರೇಶ್, ಗೋವಿಂದ್, ಮಲ್ಲೇಶ್ ಮತ್ತಿತರರು ಇದ್ದರು.ಕುಶಾಲನಗರ: ಉತ್ತರಪ್ರದೇಶದಲ್ಲಿ ನಡೆದ ದಲಿತ ಮಹಿಳೆಯ ಮೇಲೆ ಅತ್ಯಾಚಾರವನ್ನು ಖಂಡಿಸಿ ಮತ್ತು ದಲಿತರ ರೈತರ ಕಾರ್ಮಿಕರ ಎಪಿಎಂಸಿ ಮಸೂದೆ 8 ಮಸೂದೆಗಳನ್ನು ವಿರೋಧಿಸಿ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆಯನ್ನು ಮಾಡಲಾಯಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಮತ್ತು ಭಾರತೀಯ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಘಟನೆಯನ್ನು ಖಂಡಿಸಲಾಯಿತು.ಸೋಮವಾರಪೇಟೆ: ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿರುವ ಜೆಡಿಎಸ್ ಅಲ್ಪಸಂಖ್ಯಾತ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎ. ರುಬೀನಾ ಅವರು, ಅತ್ಯಾಚಾರಿಗಳನ್ನು ನಿರ್ಭಯಾ ಕೇಸ್ ಮಾದರಿಯಲ್ಲೇ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಭಯಾನಕ ಅತ್ಯಾಚಾರ ಮತ್ತು ಕೊಲೆಗೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಟೀಕಿಸಿದ್ದಾರೆ.
ವೀರಾಜಪೇಟೆ: ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಐಕ್ಯ ಹೋರಾಟ ಸಮಿತಿ ಇಲ್ಲಿನ ದೊಡ್ಡಟ್ಟಿ ಚೌಕಿ ಬಳಿ ಒಮ್ಮತವಾಗಿ ಸೇರಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಂಚಾಲಕ ಕೆ.ವಿ. ಸುನಿಲ್, ಜಿಲ್ಲಾ ಎಸ್.ಸಿ. - ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ವಿ.ಕೆ. ಸತೀಶ್ಕುಮಾರ್, ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಹೆಚ್. ಮತೀನ್, ಕಾಂಗ್ರೆಸ್ ಬ್ಲಾಕ್ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಮತ್ತಿತರರು ಮಾತನಾಡಿದರು.
ಪ್ರತಿಭಟನೆಯಲ್ಲಿ ಜನತಾದಳದ ತಾಲೂಕು ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಮಹಮ್ಮದ್ ರಾಫಿ, ಸಿ.ಕೆ. ಪೃಥ್ವಿನಾಥ್, ಡಿ.ಪಿ. ರಾಜೇಶ್, ಆಗಸ್ಟಿನ್ ಬೆನ್ನಿ, ರಜನಿಕಾಂತ್, ಕಾಂಗ್ರೆಸ್ನ ನಗರ ಸಮಿತಿಯ ಜಿ.ಜಿ. ಮೋಹನ್, ಮಹಿಳಾ ಕಾಂಗ್ರೆಸ್ನ ಪೊನ್ನಕ್ಕಿ, ಗಾಯಿತ್ರಿ ನರಸಿಂಹ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರುಗಳು ಹಾಜರಿದ್ದರು.