ವೀರಾಜಪೇಟೆ, ಅ.6 : ವೀರಾಜಪೇಟೆ ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ 15 ಮಂದಿಗೆ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸುಮಾರು ತಲಾ 500 ರಂತೆ ರೂ. 7,500 ಹಾಗೂ ಪ್ರವಾಸಿಗರ ಬಸ್‍ನಲ್ಲಿ ಮಾಸ್ಕ್ ಧರಿಸದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ರೂ. 1000 ದಂಡ ವಿಧಿಸಿ ಒಟ್ಟು ರೂ. 8,500 ದಂಡ ವಸೂಲಿ ಮಾಡಿದ್ದಾರೆ.ಇಂದು ಬೆಳಿಗ್ಗೆ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಎಲ್.ಎಂ. ನಂದೀಶ್ ಅವರ ನೇತೃತ್ವದಲ್ಲಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್. ಕಂದಾಯ ನಿರೀಕ್ಷಕ ಸೋಮೇಶ್ ಸಿಬ್ಬಂದಿಗಳು ತೆಲುಗರಬೀದಿ, ದೊಡ್ಡಟ್ಟಿ ಚೌಕಿ ಹಾಗೂ ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆಯವರೆಗೆ ತೆರಳಿ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ನಂದೀಶ್ ಅವರು ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದವರನ್ನು ಪತ್ತೆ

ಹಚ್ಚಿ ದಂಡ ವಿಧಿಸಲಾಗುತ್ತಿದೆ.

ಈ ದಂಡ ವಿಧಿಸುವ ಕಾರ್ಯಕ್ರಮ ಮುಂದುವರೆಯಲಿರುವುದಾಗಿ ಹೇಳಿದರು.