ಮಡಿಕೇರಿ, ಅ. 4: ವಿಶ್ವ ಹಿಂದೂ ಪರಿಷತ್ ಬಜರಂಗದಳ ಕೊಡಗು ಘಟಕದ ವತಿಯಿಂದ ನಗರದ ಚೈನ್ ಗೇಟ್ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಶ್ರಮದಾನ ನಡೆಯಿತು. ಕೋವಿಡ್ ಪರಿಸ್ಥಿತಿಯಲ್ಲಿ ಒಂದಕ್ಕಿಂತ ಹೆಚ್ಚು ಮರಣ ಪ್ರಕರಣ ಆದಲ್ಲಿ ಈಗಿರುವ ಹಿಂದೂ ರುದ್ರಭೂಮಿಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದಿರುವ ಕಾರಣ ಮೃತ ವ್ಯಕ್ತಿಯ ದಹನ ಕಾರ್ಯಕ್ಕೆ ಸುಸಜ್ಜಿತ ಚಿತೆ ಯನ್ನು ನಿರ್ಮಾಣ ಮಾಡಲಾಯಿತು. ಹಾಗೆಯೇ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಸೌದೆಯನ್ನು ಜೋಡಿಸಿಕೊಳ್ಳಲಾಯಿತು. ಈ ಸೇವಾ ಕಾರ್ಯದಲ್ಲಿ ಚೇತನ್ ಕೆ.ಹೆಚ್, ಸುರೇಶ್ ಮುತ್ತಪ್ಪ, ರವೀಂದ್ರ ಉಡೋತ್ತ್ ಕಿಶೋರ್, ಉಡೋತ್ತ್ ಜಯ, ಉಡೋತ್ತ್ ಜೀವನ್, ಉಡೋತ್ತ್ ಪ್ರಸಾದ್, ತಿರುಮಲ, ಗಿರೀಂದ್ರ, ದುರ್ಗೇಶ್, ರಮೇಶ್, ಮಹೇಶ್ ಮೇಸ್ತ್ರಿ, ಚರಣ್, ವಿನಯ್ ಕುಮಾರ್, ಅರುಣ್ ವೆಲ್ಡರ್, ಪಾಲ್ಗೊಂಡಿದ್ದರು.