ಕೂಡಿಗೆ, ಅ. 4: ಕೂಡಿಗೆ ಗ್ರಾಮ ಪಂಚಾಯತಿ ಅಧಿಕಾರಿ ಇಲ್ಲದೆ ಯಾವುದೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಅರೋಪಿಸುವುದರ ಜೊತೆಗೆ ಖಾಯಂ ಅಭಿವೃದ್ಧಿ ಅಧಿಕಾರಿಯನ್ನು ನೇಮಕ ಮಾಡುವಂತೆ ಆಗ್ರಹಿಸಿದ್ದಾರೆ.
ಖಾಯಂ ಅಭಿವೃದ್ಧಿ ಅಧಿಕಾರಿ ಇಲ್ಲದೆ ಗ್ರಾಮ ವಿಕಾಸ ಯೋಜನೆಯ ಕಾಮಗಾರಿಗಳು ನಡೆಯದೆ ಪ್ರಗತಿಯಾಗಿಲ್ಲ ಸಹಕಾರ ಸಂಘ ಉಪಾಧ್ಯಕ್ಷ ಟಿ ಪಿ ಹಮೀದ್ ಮತ್ತು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಟಿ.ಕೆ. ವಿಶ್ವನಾಥ, ಜಗದೀಶ್, ಮಹೇಂದ್ರ, ಕುಮಾರ, ಕೃಷ್ಣ, ನಾಗರಾಜ ಸೇರಿದಂತೆ ಸಾರ್ವಜನಿಕರು ಟೀಕಿಸಿದ್ದಾರೆ.