ಮಡಿಕೇರಿ, ಅ. 5: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ವತಿಯಿಂದ ನಡೆದ ಬಿ.ಎಸ್ಸಿ ನರ್ಸಿಂಗ್ (ಪೋಸ್ಟ್ಬೇಸಿಕ್) ಪರೀಕ್ಷೆಯಲ್ಲಿ ಜಿಲ್ಲೆಯವರಾದ ಚಿಲ್ಲಜಮ್ಮಂಡ ರೂಪ ಉಮೇಶ್ (ತಾಮನೆ ಬಲ್ಯಂಡ, ತಿತಿಮತಿ) ಚಿನ್ನದ ಪದಕ ಗಳಿಸಿದ್ದಾರೆ. ಇವರು ಪ್ರಸ್ತುತ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಶುಶ್ರೂಷಕಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.