ಮಡಿಕೇರಿ, ಅ. 5: ಮೈಸೂರು ಯೂನಿವರ್ಸಿಟಿ ಸಿಂಡಿಕೇಟ್ ಸದಸ್ಯರನ್ನಾಗಿ ಮುಂದಿನ ಮೂರು ಅವಧಿಗೆ ಅಥವಾ ಮುಂದಿನ ಆದೇಶ ಬರುವವರೆಗೆ ಅಮ್ಮತ್ತಿ ಕಾವಾಡಿ ಗ್ರಾಮದ ಎಂ.ಬಿ. ಗಪ್ಪಣ್ಣ ಅವರು ನೇಮಕಗೊಂಡಿದ್ದಾರೆ. ಕೊಡಗು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇನ್ನಿತರ ಹಲವಾರು ಸಂಘಟನೆಗಳಲ್ಲಿ ಗಪ್ಪಣ್ಣ ಗುರುತಿಸಿಕೊಂಡಿದ್ದಾರೆ.