*ಗೋಣಿಕೊಪ್ಪಲು, ಅ. 5: ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ಪೆÇನ್ನಂಪೇಟೆ ಶಾಖೆಯ ನೂತನ ಎ.ಟಿ.ಎಂ. ಯಂತ್ರಕ್ಕೆ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಕೊಡೆಂದೇರ ಬಾಂಡ್ ಗಣಪತಿ ಚಾಲನೆ ನೀಡಿದರು.

ಬ್ಯಾಂಕಿನ ಸ್ವಂತ ಕಟ್ಟಡವಿರುವ 21 ಶಾಖೆಗಳಲ್ಲಿ ಎ.ಟಿ.ಎಂ ಯಂತ್ರಗಳನ್ನು ಅಳವಡಿಸಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಬಾಂಡ್ ಗಣಪತಿ ಹೇಳಿದರು.

ಈ ಸಂದರ್ಭ ಜಿಲ್ಲಾ ಬ್ಯಾಂಕಿನ ನಿರ್ದೇಶಕರಾದ ಕೋಲತಂಡ ಸುಬ್ರಮಣಿ, ಹೊಟ್ಟೆಂಗಡ ರಮೇಶ್, ಪಟ್ರಪಂಡ ರಘು ನಾಣಯ್ಯ, ವಿ.ಎಸ್.ಎಸ್.ಎನ್ ಬ್ಯಾಂಕಿನ ಪೆÇನ್ನಂಪೇಟೆ ಬ್ಯಾಂಕಿನ ಅಧ್ಯಕ್ಷ ಚೀರಂಡ ಕಂದ, ಪೆÇನ್ನಂಪೇಟೆ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕಿ ನಗೀನ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ವರ್ಗದವರು ಹಾಗೂ ಗ್ರಾಹಕರು ಹಾಜರಿದ್ದರು.