ಸೋಮವಾರಪೇಟೆ, ಅ. 5: ಸಮೀಪದ ದೊಡ್ಡಮಳ್ತೆಯ ಫಾರ್ಮರ್ಸ್ ಸ್ಫೋಟ್ರ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ಗೌಡಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಅಸೋಸಿಯೇಷನ್‍ನ ವಾರ್ಷಿಕ ಮಹಾಸಭೆಯಲ್ಲಿ ಕ್ಲಬ್‍ನ ಸದಸ್ಯರೂ ಆಗಿರುವ ಸುರೇಶ್ ಅವರನ್ನು ಹೆಚ್.ಬಿ. ಕೃಷ್ಣಪ್ಪ ಸೇರಿದಂತೆ ಇತರರು ಸನ್ಮಾನಿಸಿದರು.
ಈ ಸಂದರ್ಭ ಕ್ಲಬ್‍ನ ಅಧ್ಯಕ್ಷ ಎಸ್.ಎಂ. ಲಿಂಗರಾಜು, ಕಾರ್ಯದರ್ಶಿ ಹೆಚ್.ಎಲ್. ಯತೀಶ್ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.