ಕಣಿವೆ, ಅ. 5: ಕುಶಾಲನಗರದ ರಥಬೀದಿಯಲ್ಲಿ 2015 ರಲ್ಲಿ ಆರಂಭವಾದ ಶಾರದಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಶಾಂತಾ ಮುಂದಿನ ಐದು ವಷರ್Àಗಳ ಅವಧಿಗೆ ಪುನರಾಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಎಲ್.ಕವಿತಾ, ನಿರ್ದೇಶಕರಾಗಿ ಬಿ.ಎಸ್.ಆಶಾ, ಉಮಾರಾಜ್, ಇಂದಿರಾ ತಿಮ್ಮಪ್ಪ, ಛಾಯಾ ಗೋಪಿ, ಮೋಕ್ಷ ಲಕ್ಷ್ಮಿ, ಸುಶೀಲಾ ಸ್ವಾಮಿ, ಸುನಿತಾ ವಿಮಲ್, ರೇಖಾ ಕಮಲೇಶ್, ಅಂಕಮ್ಮ, ಮಂಜುಳಾ ಗುಪ್ತ ಆಯ್ಕೆಯಾದರು. ಸೋಮವಾರಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಮೋಹನ್ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು. ಸಂಘದ ಕಾರ್ಯದರ್ಶಿ ಅರ್ಪಿತಾ, ಸಿಬ್ಬಂದಿಗಳಾದ ತೇಜಸ್ವಿನಿ, ಸವಿತಾ ಇದ್ದರು.