ಮಡಿಕೇರಿ, ಅ. 3 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 3 ಸಾವು ವರದಿಯಾಗಿದ್ದು, ವಿವರ ಕೆಳಕಂಡಂತಿದೆ.ಮಡಿಕೇರಿ ನಗರದ ಪ್ರಧಾನ ಅಂಚೆ ಕಚೇರಿ ವಸತಿ ಗೃಹ ನಿವಾಸಿ 53 ವರ್ಷದ ಪುರುಷ, ಮಂಗಳಾದೇವಿ ನಗರ ನಿವಾಸಿ 58 ವರ್ಷದ ಪುರುಷ ಮತ್ತು ಹಾಸನ ಜಿಲ್ಲೆಯ ಕೊಣನೂರು ನಿವಾಸಿ, ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ಪುರುಷರೊಬ್ಬರು ಮೃತರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 48 ಕ್ಕೇರಿದೆ. ಜಿಲ್ಲೆಯಲ್ಲಿ ಹೊಸದಾಗಿ 121 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3000 ಪ್ರಕರಣಗಳು ವರದಿಯಾಗಿದ್ದು, 2446 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 48 ಮಂದಿ ಸಾವನ್ನಪ್ಪಿದ್ದು 506 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 99 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 68 ಮಂದಿ ಕೋವಿಡ್ ಕೇರ್ ಸೆಂಟರ್ ನಲ್ಲಿ, 339 ಮಂದಿ ಹೋಮ್ ಐಸೋಲೇಷನ್ ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 455 ನಿಯಂತ್ರಿತ ವಲಯಗಳಿವೆ.