ಮಹಾತ್ಮ ಗಾಂಧೀಜಿ ಎಂದರೆ ಭಾರತೀಯರ ಪಾಲಿಗೆ ಕಣ್ಣಿಗೆ ಕಾಣುವ ಆದರ್ಶ. “ನನ್ನ ಜೀವನವೇ ನನ್ನ ಸಂದೇಶ” ಎಂದು ಸಾರಿದ ಮಹಾನ್ ಚೇತನ ಭಾರತೀಯರೆಲ್ಲರ ಅಕ್ಕರೆಯ ‘ಬಾಪು’ ಜನಿಸಿ 150 ವರ್ಷಗಳೇ ಸಂದರೂ ಅವರ ಚಿಂತನೆಗಳು ಇಂದಿಗೂ ಆದರಣೀಯ ಮತ್ತು ಅನುಕರಣೀಯ. ಈಗಿನ ತಾಂತ್ರಿಕ ಯುಗದಲ್ಲಿ ಗಾಂಧೀಜಿ ಅದೆಷ್ಟು ಪ್ರಸ್ತುತವೆಂಬ ಪ್ರಶ್ನೆಗೆ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು “ನಾವು ಗಾಂಧೀಜಿಯ ವಿಚಾರ- ಧಾರೆಗಳಿಂದ ಸ್ಫೂರ್ತಿ ಪಡೆದಿದ್ದೇವೆ.” ಎಂದು ಹೇಳಿದ್ದಾರೆ. ಗಾಂಧೀಜಿ ಕಾಲಾತೀತ ವ್ಯಕ್ತಿ. ಮಾನವರೆಲ್ಲರನ್ನೂ ದೈವತ್ವಕ್ಕೊಯ್ಯುವ ಉದಾತ್ತ ಧ್ಯೇಯದ ಸವೋದಯ ಧರ್ಮವನ್ನು ಅವರು ಮಾನವತೆಗೆ ನೀಡಿದರು. ಎಲ್ಲಾ ಧರ್ಮಗಳ ಅನುಯಾಯಿಗಳೂ, ರಾಜಕೀಯ ಪಟುಗಳೂ, ದಾರ್ಶನಿಕರೂ ಹಾಗೂ ಸಮಾಜ ಸುಧಾರಕರೂ ಗಾಂಧೀಜಿಯಿಂದ ಸ್ಫೂರ್ತಿ ಪಡೆದರು. ಗಾಂಧೀಜಿಯ ದೃಷ್ಟಿಯಲ್ಲಿ ಜೀವನದ ಮೂಲ ಆಕಾಂಕ್ಷೆಗಳು ನಾಲ್ಕು. ಅನ್ನ, ಬಲ, ಪ್ರೇಮ ಮತ್ತು ಜ್ಞಾನ. ಇವುಗಳನ್ನು ಗರಿಷ್ಠ ಪ್ರಮಾಣದಲ್ಲಿ ಗಳಿಸುವ ಪ್ರಯತ್ನದಲ್ಲಿ ಪ್ರತಿ ಮಾನವನೂ ತೊಡಗಿರುತ್ತಾನೆ. ಆದರೆ ಮಾರ್ಗಗಳು ಅಸಂಖ್ಯಾತ. ಪ್ರಧಾನವಾಗಿ ಕೆಲವು ಶುದ್ಧ, ಕೆಲವು ಅಶುದ್ಧ, ಕೆಲವು ನೈತಿಕ, ಕೆಲವು ಅನೈತಿಕ. ಆದರೆ ನಮ್ಮ ಜೀವನಕಾಂಕ್ಷೆಗಳನ್ನು ಪೂರೈಸಿಕೊಳ್ಳುವಾಗ ಕಠಿಣವೆನಿಸಿದರೂ ಕೂಡಾ ಒಂದು ಸಾಪೇಕ್ಷ ಸತ್ಯದ ನೈತಿಕಾಧಾರವನ್ನು ಎಂದಿಗೂ ಸಡಿಲಗೊಳಿಸಬಾರದು ಎಂದಿದ್ದರು ಗಾಂಧೀಜಿ.

ಗಾಂಧೀಜಿಯ ಜೀವನ ಸಂತನೋರ್ವನ ಕಾವ್ಯ ಕಥನ. ಅವರು ಭಾರತದ ಆಧ್ಯಾತ್ಮಿಕ ಪರಂಪರೆಯ ನೈಜ ಪ್ರತಿನಿಧಿ. ಪ್ರಾಚೀನ ಋಷಿಗಳಂತೆ ಸರಳ ಜೀವನ ಹಾಗೂ ಗಹನ ಚಿಂತನೆಗಳಿಗೆ ನಿದರ್ಶನವಾಗಿದ್ದ ಅವರು ನೀತಿ-ಧರ್ಮ, ಬಾಳು-ಬೆಳಕುಗಳ ಮೂಲ ಭಗವಂತ ಎಂದು ನಂಬಿದ್ದವರು. ಹುಟ್ಟಿನಿಂದ ಹಿಂದೂ ಧರ್ಮೀಯರಾಗಿದ್ದ ಗಾಂಧೀಜಿ ಧರ್ಮ ಗ್ರಂಥಗಳನ್ನು ಮೂಲ ಸಂಸ್ಕøತದಲ್ಲ್ಲಿಯೇ ಅಧ್ಯಯನ ಮಾಡಿದ್ದರು. ಭಗವದ್ಗೀತೆಯನ್ನು ಓದಿ ಅರಗಿಸಿಕೊಂಡಿದ್ದ ಅವರು ಹಿಂದೂ ಸಂಸ್ಕøತಿಯನ್ನು ತಮ್ಮ ಬಾಳಲ್ಲಿ ಅಳವಡಿಸಿಕೊಂಡಿದ್ದರು. ಗೀತೆಯನ್ನು ತಮ್ಮ “Sಠಿiಡಿuಣuಚಿಟ ಜiಛಿಣioಟಿಚಿಡಿಥಿ ಎನ್ನುತ್ತಿದ್ದರು. ಗೀತೆಯಲ್ಲಿ ಸಿಕ್ಕ ಅಸಂಗ್ರಹ ಮತ್ತು ಸಮಭಾವ ಎಂಬೆರೆಡು ಪದಗಳು ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿದವು. ಗೀತೆಯ ನಿಷ್ಕಾಮ ಕರ್ಮವನ್ನು ಅರ್ಥೈಸುವ ಗಾಂಧೀಜಿ ಆತ್ಮ ಸಾಕ್ಷಾತ್ಕಾರದ ಹಾದಿ ಹಿಡಿದರು. ಪ್ರಾರ್ಥನೆ ಮತ್ತು ಉಪವಾಸಗಳು ಬಹು ಮುಖ್ಯವಾದ ಧಾರ್ಮಿಕ ಸಾಧನೆಗಳೆಂದು ತಿಳಿದು ಆಚರಿಸುತ್ತಿದ್ದ ಅವರು “ “ಪ್ರಾರ್ಥನೆಯು ನಾನು ಹೆಚ್ಚು ಪರಿಶುದ್ಧನಾಗಬೇಕೆಂಬ ಆತ್ಮದ ತೀಕ್ಷ್ಣ ಹಂಬಲ. ಉಪವಾಸವು ದೇಹ, ಬುದ್ಧಿ, ಆತ್ಮಗಳನ್ನು ತೊಳೆಯುವ ಸಾಧನ” ಎನ್ನುತ್ತಿದ್ದರು. ತಂದೆ ಕರಮ ಚಂದರ ಸ್ನೇಹಿತರ ಬಳಗದಲ್ಲಿದ್ದ ಜೈನ ಗುರುಗಳು, ಮುಸಲ್ಮಾನರು, ಪಾರ್ಸಿಗಳೂ ಸೇರಿದಂತೆ ಸರ್ವರೂ ಕುಳಿತು ಚರ್ಚಿಸುತ್ತಿದ್ದ ವಿವಿಧ ಧರ್ಮಗಳ ತತ್ವಗಳು ಸಹಜವಾಗಿಯೇ ಬಾಲಕ ಗಾಂಧಿಯ ಮೇಲೆ ಪ್ರಭಾವ ಬೀರಿದವು. ಮುಂದೆ ಇದೇ ಅವರಿಗೆ ಇತರ ಧರ್ಮಗಳ ಕುರಿತು ವಿಭಿನ್ನ ಧರ್ಮೀಯರ ಕುರಿತು ಗೌರವವನ್ನೂ, ಸಹನೆಯನ್ನೂ ಕಲಿಸಿತು. ಗಾಂಧೀಜಿಯ ಪ್ರಕಾರ ಸಪ್ತ ಸಾಮಾಜಿಕ ಪಾತಕಗಳೆಂದರೆ ತತ್ವರಹಿತ ರಾಜಕೀಯ, ನೀತಿ ರಹಿತ ವ್ಯಾಪಾರ, ಆತ್ಮ ರಹಿತ ಭೋಗ, ಶೀಲವಿಲ್ಲದ ಶಿಕ್ಷಣ, ದುಡಿಮೆಯಿಲ್ಲದ ಸಂಪತ್ತು, ಮಾನವಿಯತೆಯಿಲ್ಲದ ವಿಜ್ಞಾನ ಮತ್ತು ತ್ಯಾಗರಹಿತ ಪೂಜೆ. ಭಗವಂತನೆಂದರೆ ಕ್ರೌರ್ಯವರಿಯದ ಕರುಣೆ, ದ್ವೇಷವಿಲ್ಲದ ಪ್ರೇಮ ಎಂದು ನಂಬಿದ್ದ ಗಾಂಧೀಜಿ ‘ನಮ್ಮ ದೇಹ ಆತನ ಆಧೀನ’ ಅವನ ಸಂಕಲ್ಪವಿದ್ದರೆ ಮಾತ್ರ ಅದು ಬೆಳೆಯುತ್ತದೆ, ಇಲ್ಲವೇ ಅಳಿಯುತ್ತದೆ. ಅವನ ಕ್ಲೇಶವನ್ನೂ ಭಗವಂತನಿಗೇ ಬಿಡು. ಇದು ಸರ್ವಧರ್ಮಗಳ ಆಣತಿ.’ ಎಂದ ಮಾತುಗಳು ಅವರ ಪೂರ್ಣಾರ್ಪಣ ಪ್ರತಿಧ್ವನಿ ಎಂದೆ ಹೇಳಬಹುದು. ಗಾಂಧೀ ಚರಕದ ಮೂಲಕ ಬಂದಂತಹ ಖಾದಿ ಮತ್ತು ಉಪ್ಪು ಇವೆರಡೂ ಇಂದಿಗೂ ಪರಮಾದ್ಭುತ ಸತ್ಯಗಳಾಗಿಯೇ ಉಳಿದಿವೆ. ಶಾಂತಿಯ ಹರಿಕಾರ ಗಾಂಧೀಜಿ ನಿಜಕ್ಕೂ ಒಬ್ಬ ಕರ್ಮಯೋಗಿ. ದರಿದ್ರ ನಾರಾಯಣ ಸೇವೆ ಹಾಗೂ ಜಗತ್ತಿನ ಕಲ್ಯಾಣ ಇವುಗಳ ಮೂಲಕವೇ ಅವರ ದೃಷ್ಟಿಯಲ್ಲಿ ಆತ್ಮೋನ್ನತಿ ಮತ್ತು ಭಗವಂತನ ಸಾಕ್ಷಾತ್ಕಾರ. ಗಾಂಧೀಜಿ ಮಹಿಳೆಯರ ಬಗ್ಗೆ ಅತೀವ ಗೌರವವನ್ನು ಹೊಂದಿದ್ದರು. ಭಾರತೀಯ ಸ್ತ್ರೀಯರಲ್ಲಿ ಸಂಪ್ತವಾಗಿದ್ದ ಆತ್ಮ ಬಲವನ್ನು ಉದ್ದೀಪಿಸಿದರು. ಮಹಿಳೆಯಲ್ಲಿ ಆತ್ಮ ವಿಶ್ವಾಸ ಹುಟ್ಟುವಂತೆ ಅವರ ವ್ಯಕ್ತಿತ್ವ ವಿಕಾಸಗೊಳ್ಳುವಂತೆ ಅವಕಾಶಗಳನ್ನು ಕಲ್ಪಿಸಿ ಅವರನ್ನು ಸ್ವಾತಂತ್ರ್ಯ ಸಂಗ್ರಾಮದ ಯೋಧರನ್ನಾಗಿ ಮಾಡಿದರು. ಭಾರತೀಯ ಮಹಿಳೆ ಎಂದರೆ ಪುರುಷನ ಸಹಚರಿ, ಬಾಳೆ ಗೆಳತಿ, ಸಹಯೋಗಿನಿ ಎಂಬುದನ್ನು ಪುರುಷರಿಗೆ ಮನವರಿಕೆ ಮಾಡಿಕೊಟ್ಟರು. ಮಾನವ ಕುಲಕ್ಕೆ ಮಹಾತ್ಮ ಗಾಂಧೀಜಿಯವರ ಅತ್ಯಮೂಲ್ಯ ಕೊಡುಗೆಯೆ ಸರ್ವೋದಯ, ಅಂದರೆ ಸರ್ವರ ಅಭ್ಯುದಯ. ಸಕಲ ವ್ಯಕ್ತಿಗಳ ಆಧ್ಯಾತ್ಮಿಕ, ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕøತಿಕ ಮುನ್ನಡೆಯೇ ಸರ್ವೋದಯದ ಗುರಿ. “ಜನತೆಯ ಸೇವೆಯೇ ಜನಾರ್ಧನನ ಸೇವೆ’’ ಎಂದು ನಂಬಿದ್ದ ಗಾಂಧೀಜಿ ದೇವರನ್ನು ಮೂಕ ಮಾನವ ಕೋಟಿಯಲ್ಲಿ ಕಂಡವರು. “ ಚಾರಿತ್ರ್ಯ ಹೀನರು ಸಮಾಜದ ಮುಳ್ಳುಗಳು. ಅವರನ್ನು ಹೊರಹಾಕುವ ಹೊರತು ಸಮಾಜದ ಸುಧಾರಣೆಯಾಗದು’ ಎಂದು ಖಂಡಿತವಾಗಿ ನುಡಿದ್ದರು. ಹೀಗಾಗಿಯೇ ಶ್ರೀ ಸಾಮಾನ್ಯರೊಂದಿಗೆ ಬೆರೆತು ಅವರೊಂದಿಗೆ ತನ್ನನ್ನು ಗುರುತಿಸಿಕೊಂಡು, ಅವರ ಸಮಸ್ಯೆಯನ್ನು ಅರಿಯುವುದರೊಂದಿಗೆ ಅವನ್ನು ಪರಿಹರಿಸುವ ಸಾಮಥ್ರ್ಯದ ಸ್ಪಷ್ಟತೆಯನ್ನು ಹೊಂದಿದ್ದರು. ಗಾಂಧೀಜಿ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಬ್ರಹ್ಮಚರ್ಯ, ಅನುಗ್ರಹ, ಶರೀರ ಕ್ರಮ, ಶ್ರಮ, ಭಯವರ್ಜನ, ಸರ್ವಧರ್ಮ ಸಮಾನತ್ವ, ಸ್ವದೇಶಿ ತತ್ವಗಳಿಂದಾಗಿ ಅವರು ಅಮರರಾಗುತ್ತಾರೆ ಸದಾ ವಿಶ್ವ ಮಾನ್ಯರಾಗುತ್ತಾರೆ.

?ಕೊಟ್ಟಕೇರಿಯರ ಲೀಲಾ ದಯಾನಂದ

ಮಡಿಕೇರಿ.