ಮಹಾತ್ಮ ಗಾಂಧೀಜಿ, ಅವರು ಶಾಂತಿಯ ಹರಿಕಾರರು. ಶಾಂತ ಹೋರಾಟದಿಂದಲೇ ಅವರು ಭಾರತಕ್ಕೆ ಸ್ವಾತಂತ್ರ ದೊರಕಿಸಿದವರು. ಭಾರತಕ್ಕಷ್ಟೇ ನೆರವಾಗಲಿಲ್ಲ, ದಕ್ಷಿಣ ಆಫ್ರಿಕಾ ಸೇರಿದಂತೆ ಅನೇಕ ದೇಶಗಳು ಗಾಂಧೀಜಿ ಅವರ ಶಾಂತಿ ಹೋರಾಟದ ನೆರವಿನಿಂದ ಸ್ವಾತಂತ್ರ್ಯ ಸಂಪಾದಿಸಿದವು. ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರಾಗಿದ್ದ ಗಾಂಧೀಜಿಗೆ ಮಹಾತ್ಮಾ ಎಂಬ ಬಿರುದು ನೀಡಲಾಗಿದೆ. ಗಾಂಧೀಜಿ ಪಾಲಿಸಿ ಸತ್ಯ, ಅಹಿಂಸೆ, ರಾಮರಾಜ್ಯ, ಗ್ರಾಮೀಣ ಉದ್ಯೋಗ ಶ್ರಮ ಸಂಸ್ಕøತಿಗಳೆಲ್ಲ ಇಂದಿನ ಯುವಜನತೆಗೆ ಮಾರ್ಗದರ್ಶನವಾಗಬೇಕು. ಗಾಂಧೀಜಿಯವರು ಅಧಿಕಾರಕ್ಕಾಗಿ ಹಂಬಲಿಸಲಿಲ್ಲ. ಅಧಿಕಾರ ಕಾಲ ಬುಡದಲ್ಲಿ ಬಿದ್ದರೂ ಕೂಡ ಬೇರೆಯವರಿಗೆ ಕೊಟ್ಟು ಬದಿಗೆ ನಿಂತರು. ಗಾಂಧೀಜಿಯವರ ಜೀವನ ಅವರ ಚಿಂತನೆ ಸದಾಕಾಲ ಪ್ರಸ್ತುತ.

‘‘ಸರ್ವೇ ಜನಾಃ ಸುಖಿನೋ ಭವಂತು’’ ಎಂಬ ಭಾವನೆಯನ್ನು ಇಟ್ಟುಕೊಂಡವರು ಗಾಂಧೀಜಿ. ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿಗಳ ಪಾತ್ರ ತುಂಬಾ ಮಹತ್ವದ್ದು ಚಂದ್ರಶೇಖರ ಅಜಾದ್, ಭಗತ್‍ಸಿಂಗ್, ಸುಭಾಷ್‍ಚಂದ್ರ ಬೋಸ್‍ರವರು ಎಲ್ಲಾ ಹೋರಾಟಗಾರರಿಗೆ ಸ್ಪೂರ್ತಿದಾಯಕ ನಾಯಕರು, ದೇಶಕ್ಕಾಗಿ ಹೋರಾಟ ಮಾಡಿದ, ಪ್ರಾಣತ್ಯಾಗ ಮಾಡಿದ ದೇಶಪ್ರೇಮಿಗಳನ್ನು ನಾವು ಸ್ಮರಿಸಬೇಕು. ಸ್ವಾತಂತ್ರ ಗಳಿಸುವಲ್ಲಿ ಕೆಲವು ಪ್ರಮುಖ ನಾಯಕರುಗಳ ಅವಿರತ ಶ್ರಮ ಶ್ಲಾಘನೀಯ. ದೇಶ ಅಭಿವೃದ್ಧಿಯತ್ತ ಚಿಂತನೆ ಹರಿಸಿ ದಾಸ್ಯ ಮುಕ್ತಿಗೊಳಿಸಬೇಕು. ಎನ್ನುವ ಅವರ ಅದಮ್ಯ ಹಂಬಲದಿಂದ ಅವರು ಹೋರಾಡಿದರು. ಇದೀಗ ಎಲ್ಲಾ ದೇಶಗಳು ನಮ್ಮತ್ತ ತಿರುಗಿ ನೋಡುವ ಹಾಗೆ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಗಾಂಧೀಜಿಯವರ ತತ್ವ, ಆದರ್ಶ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಈ ದೇಶ ರಾಮರಾಜ್ಯವಾಗಲು ಸಾಧ್ಯ ಎಂದು ಹೇಳಬಹುದು. ಗಾಂಧೀಜಿ ಕಂಡ ಸರ್ವಕಾಲಿಕ ಸತ್ಯದ ಅರಿವು ಮುಂದಿನ ದಿನಗಳಲ್ಲಿ ಉಳಿಸಿಬೆಳೆಸಬೇಕಾದರೆ ಇಂದಿನ ವಿದ್ಯಾವಂತ ಯುವ ಜನಾಂಗದಿಂದ ಮಾತ್ರ ಸಾಧ್ಯ,

?ವಸಂತಿರವೀಂದ್ರ, ಸೋಮವಾರಪೇಟೆ.