ಜ್ಞಾನಿಗಳು ಎಲ್ಲರನ್ನು ಒಂದೇ ಸಮನಾಗಿ ಕಾಣುತ್ತಾರೆ ಅಪಕಾರ ಮಾಡಿದವರಿಗೂ ಸಂತೋಷದಿಂದ ಉಪಕಾರ ಮಾಡುತ್ತಾರೆ. ಇದು ಮಹಾತ್ಮಾಗಾಂಧೀಜಿಗೆ ಜೀವನದ ಆದರ್ಶವಾಯಿತು. ಸೇಡಿಗೆ ಸೇಡು ನಿಜಧರ್ಮವಲ್ಲ. ಎಂಬದನ್ನು ತೋರಿಸಿತ್ತು. ಮಾನವ ಧರ್ಮ ಯಾವುದೆಂಬುದು ಅವರಿಗೆ ಅರಿವಾಯಿತು. 1869ರ ಅಕ್ಟೋಬರ್ 2 ರಂದು ಗುಜರಾತ್ ರಾಜ್ಯದ ಪೋರ್ಬಂದರ್ನಲ್ಲಿ ಗಾಂಧಿ ಜನಿಸಿದರು. ಇವರು ಚಿಕ್ಕಂದಿನಲ್ಲಿ ತಾಯಿ ಹೇಳುತ್ತಿದ್ದ ಪುರಾಣ ಪುಣ್ಯಕಥೆಗಳು ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿತ್ತು. ತಮ್ಮ 13ನೇ ವಯಸ್ಸಿನಲ್ಲಿ ಕಸ್ತೂರ್ಬಾ ಎಂಬವರನ್ನು ಮದುವೆ ಆದರು. ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಡಿಗೆ ತೆರಳಿ ಪದವಿ ಪಡೆದು ಮರಳಿ ತಾಯ್ನಾಡಿಗೆ ಬಂದರು. ಭಾರತೀಯರು ಅನುಭವಿಸುತ್ತಿದ್ದ ಕಷ್ಟ ಹಿಂಸೆಗಳನ್ನು ಕಂಡು ಮಮ್ಮಲ ಮರುಗಿದರು. ಇದನ್ನು ಕಣ್ಣಾರೆ ಕಂಡು ಮನನೊಂದ ಗಾಂಧೀಜಿ ‘‘ನೇಪಾಲ ಇಂಡಿಯನ್ ಕಾಂಗ್ರೆಸ್ ಎಂಬ ಸಂಸ್ಥೆಯನ್ನೇ ಸ್ಥಾಪಿಸಿ ಭಾರತೀಯರ ಸ್ಥಿತಿಗತಿ ಸುಧಾರಿಸಲು ಹೋರಾಡಿದರು.
ಅಹಮದಾಬಾದಿನ ಬಳಿ ಸತ್ಯಾಗ್ರಹ ಆಶ್ರಮವೊಂದನ್ನು ಕಟ್ಟಿ ವಾಸಿಸ ತೊಡಗಿದ್ದರು. ಮನುಷ್ಯ ಪ್ರಾಮಾಣಿಕನಾಗಿ ಬಾಳಬೇಕು ಸತ್ಯ. ಅಹಿಂಸೆಗಳನ್ನು ಪಾಲಿಸಬೇಕು. ಯಾರನ್ನೂ ದ್ವೇಷಿಸಬಾರದು. ಸರ್ವರೂ ಸಮಾನರು ಎಂದೆಲ್ಲಾ ಜನರಿಗೆ ಬೋಧಿಸಿದ್ದರು. ಬ್ರಿಟಿಷರ ವಿರುದ್ಧ ಹಲವಾರು ಚಳುವಳಿಯನ್ನು ಮಾಡಿದ್ದರು. ಎಷ್ಟೋ ಬಾರಿ ಉಪವಾಸ ಸತ್ಯಗ್ರಹ ನಡೆಸಿದ್ದರು. ಬ್ರಿಟಿಷರು ಯಾವುದಕ್ಕೂ ಮಣಿಯದಿದ್ದಾಗ 1942ರಲ್ಲಿ ‘‘ಮಾಡು, ಇಲ್ಲವೆ ಮಡಿ’’ ಎಂಬ ದಿವ್ಯ ಮಂತ್ರವನ್ನು ಜನತೆಗೆ ಬೋಧಿಸಿದ್ದರು. ಗಾಂಧೀಜಿ ಅವರ ‘‘ಭಾರತ ಬಿಟ್ಟು ತೊಲಗಿ’’ ಎಂಬ ಚಳುವಳಿಗೆ ಬ್ರಿಟಿಷರು ಮಣಿದರು. ‘‘ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ’’ ಇದು ಗಾಂಧೀಜಿಯವರ ಮಂತ್ರವಾಗಿತ್ತು. ಗಾಂಧೀಜಿ ನಾಥೂರಾಂ ಗೋಡ್ಸೆಯ ಗುಂಡಿನ ದಾಳಿಗೆ ಬಲಿಯಾಗಬೇಕಾಯಿತು. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧೀಜಿ 1948ರ ಜನವರಿ 30 ರಂದು ಹುತಾತ್ಮರಾದರು.
?ಮೇರ್ಕಜೆ ಲೋಹಿತ್ಸೋಮಯ್ಯ,
ಮೂರ್ನಾಡು.