ಮಡಿಕೇರಿ, ಸೆ. 30: ಕೋವಿಡ್ -19 ನಿಯಂತ್ರಣ ಸಂಬಂಧ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ, ಪ್ರತಿಯೊಬ್ಬರು ಸ್ವ್ಯಾಬ್ ಪರೀಕ್ಷೆಗೆ ಒಳಗಾಗಬೇಕೆಂದು ಸರ್ಕಾರದ ಆದೇಶದಲ್ಲಿರುವುದರಿಂದ ತಾ.1ರಂದು (ಇಂದು) ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸ್ವ್ಯಾಬ್ ಟೆಸ್ಟ್ ಮಾಡಲು ಮರಗೋಡು, ಅರೆಕಾಡು ಗ್ರಾಮಕ್ಕೆ ಆಗಮಿಸಲಿದ್ದಾರೆ. ಸದರಿ ದಿನದಂದು ಜನತೆ ಸ್ವ್ಯಾಬ್ ಟೆಸ್ಟ್‍ಗೆ ಒಳಪಟ್ಟು ಸಹಕರಿಸಬೇಕಾಗಿ ಪಂಚಾಯಿತಿ ಪ್ರಕಟಣೆ ಕೋರಿದೆ.