ವೀರಾಜಪೇಟೆ, ಸೆ. 28: ಸಮಾಜ ಸೇವಾ ಸಂಸ್ಥೆಗಳು ಎಂದ ಮೇಲೆ ಸಾಧಕ ಬಾಧÀಕಗಳ ಕುರಿತು ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಲೇ ಇರುತ್ತದೆ.

ಸಮಾಜಕ್ಕೆ ತಾವು ಸಲ್ಲಿಸುತ್ತಿರುವ ಸೇವೆಯನ್ನು ಆಧÀರಿಸಿ ಮುನ್ನಡೆದರೆ ಮಾತ್ರ ಸೇವೆಗಳ ಸೌಲಭ್ಯಗಳು ಜನರ ಬಳಿ ತಲುಪಲಿದೆ ಎಂದು ಎ.ಕೆ ಸುಬ್ಬಯ್ಯ ಟ್ರಸ್ಟ್‍ನ ವ್ಯವಸ್ಥಾಪಕ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ವತಿಯಿಂದ ಬಸ್ ಕಾರ್ಮಿಕರಿಗೆ ಪಡಿತರ ಆಹಾರ ಕಿಟ್ ವಿತರಣೆ ಪ್ರಯುಕ್ತ ಇಲ್ಲಿನ ಪುರಭವನದಲ್ಲಿ ಆಯೋಜಿಸಲಾಗಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಖಾಸಗಿ ಬಸ್ ಕಾರ್ಮಿಕರಲ್ಲಿ ಸಂಘಟಿತ ಶಕ್ತಿ ಇಲ್ಲ. ಅಸಂಘಟಿತರಾದ ಕಾರಣ ನಿಮ್ಮನ್ನು ಸರಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಣನೆಗೆ ತೆಗದು ಕೊಳ್ಳುತ್ತಿಲ್ಲ. ಬಸ್ ಕಾರ್ಮಿಕರುಗಳು ಸಂಘಟಿತರಾಗಿದ್ದಲ್ಲಿ ಸರಕಾರ ಖಾಸಗಿ ಬಸ್ ಸಂಚಾರಕ್ಕೆ ತೆರಿಗೆ ವಿನಾಯಿತಿ ಯೊಂದಿಗೆ ಎಲ್ಲ ಸೌಲಭ್ಯಗಳನ್ನು ನೀಡುತ್ತದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ದಿನೇಶ್ ನಾಯರ್ ಮಾತನಾಡಿ ಕೊರೊನಾದಿಂದ ಬಸ್ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಖಾಸಗಿ ಬಸ್ಸು ಸಂಚಾರ ಇಲ್ಲದೆ, ಕೆಲಸ ಇಲ್ಲದೆ ಕಾರ್ಮಿಕ ವರ್ಗದ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ದಾನಿಗಳಾದ ‘ಶಕ್ತಿ’ ಪ್ರತಿಷ್ಠಾನ ಹಾಗೂ ಎ.ಕೆ ಸುಬ್ಬಯ್ಯ ಟ್ರಸ್ಟ್‍ನ ನೆರವಿಗೆ ನಾವೆಲ್ಲರೂ ಅಭಾರಿಯಾಗಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭ ಬಸ್ ಕಾರ್ಮಿಕರ ಸಂಘದ ಎಲ್ಲ ಸದ್ಯರುಗಳಿಗೆ ಕಿಟ್ ವಿತರಿಸಲಾಯಿತು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ ರಾಜೇಶ್, ಸಂಘದ ಗೌರವ ಅಧ್ಯಕ್ಷ ಬಿ.ಆರ್ ಗಣೇಶ್, ಕಾನೂನು ಸಲಹೆಗಾರ ಟಿ.ಪಿ ಕೃಷ್ಣ, ಹಿರಿಯ ಪತ್ರಕರ್ತ ಡಿ.ಎಂ. ರಾಜ್‍ಕುಮಾರ್ ಉಪಸ್ಥಿತರಿದ್ದರು.