ಕಡಂಗ, ಸೆ. 28: ಕೊಡಗಿನ ಮೂಲನಿವಾಸಿ ಜನಾಂಗಗಳಲ್ಲಿ ಒಂದಾದ ಕೊಡಗು ಕೋಲೆಯ ಜನಾಂಗದ ಸಮಾಜದ ಉದ್ಘಾಟನೆ ವೀರಾಜಪೇಟೆ ತಾಲೂಕಿನ ಕಡಂಗ ಮುರೂರುವಿನ ಧÀವಸ ಭಂಡಾರ ಸಭಾಭವನದಲ್ಲಿ ನಡೆಯಿತು.

ಸಮಾಜದ ಉದ್ಘಾಟನೆಯನ್ನು ಹಿರಿಯರಾದ ಕೋಲೆಯಂಡ ಸೋಮಯ್ಯ ಮಾಡಿದರು. ಕೊಡಗು ಕೋಲೆಯ ಸಮಾಜದ ಅಧ್ಯಕ್ಷರಾಗಿ ಕೋಲೆಯಂಡ ಗಿರೀಶ್ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು. ಉಪಾಧ್ಯಕ್ಷರಾಗಿ ಅಂಬಾಡಿರ ಕಾರ್ಯಪ್ಪ, ಕಾರ್ಯದರ್ಶಿಯಾಗಿ ಅಂಬಾಡಿರ ರಾಮಯ್ಯ, ಖಜಾಂಜಿಯಾಗಿ ಕೈಪಂಗಡ ವಿಠಲ ಉತ್ತಪ್ಪ, ಆಯ್ಕೆಯಾದರು. ಸಭೆಯಲ್ಲಿ ಹಿರಿಯರಾದ ಕೈಪಂಗಡ ಪೂವಮ್ಮ, ಅಂಬಾಡಿರ ಗಣಪತಿ ಉಪಸ್ಥಿತರಿದ್ದರು. ಕೋಲೆಯಂಡ ಡಿ. ಮೋಹನ್ ಅಪ್ಪಾಜಿ ಮಾತನಾಡಿ, ಸಮಾಜ ಅಭಿವೃದ್ಧಿಗೆ ನೂತನ ಆಡಳಿತ ಮಂಡಳಿ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕೆಂಬ ಸಲಹೆ ನೀಡಿದರು. ಸಭಾಧ್ಯಕ್ಷತೆ ವಹಿಸಿದ್ದ ಕೋಲೆಯಂಡ ಸೋಮಯ್ಯ ಮಾತನಾಡಿದರು.

ಕೈಪಂಗಡ ಭವಿಶ್ಯ ಪ್ರಾರ್ಥಿಸಿ, ಅಂಬಾಡಿರ ರಾಮಯ್ಯ ಸ್ವಾಗತಿಸಿದರು. ಅಂಬಾಡಿರ ಕಾರ್ಯಪ್ಪ ವಂದಿಸಿದರು. ಸಭೆಯಲ್ಲಿ ಕೊಡಗಿನ ವಿವಿಧ ಭಾಗಗಳಲ್ಲಿ ವಾಸಿಸುತ್ತಿರುವ ಎಲ್ಲ ಕೋಲೆಯ ಜನಾಂಗದ ಬಾಂಧವರು ಭಾಗವಹಿಸಿದ್ದರು.

-ನೌಫಲ್ ಕಡಂಗ