ಸಿದ್ದಾಪುರ, ಸೆ. 25: ಕಾರು ಹಾಗೂ ಬೈಕ್ ನಡುವೆ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರಿಬ್ಬರಿಗೆ ಗಾಯವಾಗಿ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸಿದ್ದಾಪುರದ ವೀರಾಜಪೇಟೆ ರಸ್ತೆಯ ಚರ್ಚ್ ಹಾಲ್ ಸಮೀಪ ಕಾರು ಹಾಗೂ ಬೈಕ್ ನಡುವೆ ರಸ್ತೆ ಅಪಘಾತವಾಗಿ ಹಳೆ ಸಿದ್ದಾಪುರ ನಿವಾಸಿ ಬೈಕ್ ಸವಾರ ಸುಮಂತ್ ಹಾಗೂ ಇನ್ನೊಬ್ಬ ಸವಾರನಿಗೂ ಗಾಯವಾಗಿ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಅಪಘಾತದಲ್ಲಿ ಬೈಕ್ ಹಾಗೂ ಕಾರು ಜಖಂಗೊಂಡಿದೆ.