ನಾಪೆÉÇೀಕ್ಲು, ಸೆ. 25: ಬಿಟ್ಟಂಗಾಲ ಗ್ರಾಮದ ಆರ್.ಕೆ.ಎಫ್ ಹತ್ತಿರ ಕಳ್ಳಂಗಡ ರಮೇಶ್ ಎಂಬವರ ಕಾರ್ಮಿಕರ ಮನೆಯ ಬಳಿಯಲ್ಲಿ ಇದ್ದ ಸುಮಾರು 15 ಅಡಿಗಳಷ್ಟು ಉದ್ದ ಮತ್ತು 15 ಕೆ.ಜಿ.ಯಷ್ಟು ಭಾರದ ಭಾರಿ ಗಾತ್ರದ (ಕಿಂಗ್ ಕೋಬ್ರಾ) ಕಾಳಿಂಗ ಸರ್ಪವನ್ನು ಬಿಟ್ಟಂಗಾಲದ ಪೊನ್ನೀರ ಗಗನ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪೊನ್ನೀರ ಗಗನ್ ಇದುವರೆಗೆ ಸುಮಾರು 6 ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿದ್ದಾರೆ. ಹಾವುಗಳು ಕಂಡರೆ ಅದನ್ನು ಕೊಲ್ಲ ಬೇಡಿ ಎನ್ನುವ ಗಗನ್ ಹಾವುಗಳು ಅದಾಗಿಯೇ ಕಚ್ಚಿದ ಉದಾಹರಣೆ ಕಡಿಮೆ ನಾವು ಅದಕ್ಕೆ ನೋವು ಮಾಡಿದರೆ ಮಾತ್ರ ಹಾವುಗಳು ತಿರುಗಿ ಬೀಳುತ್ತವೆ ಎಂದರು. ನಂತರ ಹಾವನ್ನು ಮಾಕುಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು. ಹಾವುಗಳು ಕಂಡು ಬಂದರೆ ಮೊ. 8277445589, 9945102695 ಸಂಖ್ಯೆಯನ್ನು ಸಂಪರ್ಕಿಸಲು ಸೂಚಿಸಿದೆ.