ಮಡಿಕೇರಿ, ಸೆ. 25: 2020ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಕೊಡಗಿನ ಗೌರಮ್ಮದತ್ತಿ ನಿಧಿ ಹಾಗೂ ಹವ್ಯಕ ಮಹಾಮಂಡಲ ಮಹಿಳಾ ವಿಭಾಗ ಇವುಗಳ ಸಹಯೋಗದಿಂದ ನಡೆದ 25ನೇ ವರ್ಷದ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ಮೈಸೂರಿನ ಹೇಮಮಾಲಾ ಬಿ. ಅವರ ‘ಬೆಳಕು’ ಕಥೆಗೆ ಪ್ರಥಮ ಸ್ಥಾನ ಲಭಿಸಿದೆ.
ದ್ವಿತೀಯ ಸ್ಥಾನವನ್ನು ಚೆಂಬು ಗ್ರಾಮದ ನಿವಾಸಿ, ಸಹನಾ ಕಾಂತಬೈಲು ಅವರ ‘ಹೊಸಬ್ಬ’ ಕಥೆಗೆ ಲಭಿಸಿದೆ. ತೃತೀಯ ಸ್ಥಾನವನ್ನು ಶಿರಸಿ ಸಮೀಪದ ಅಳ್ಳಿಹದ್ದ ಎಂಬಲ್ಲಿರುವ ಕೀರ್ತನಾ ಲಕ್ಷ್ಮೀನಾರಾಯಣ ಬರೆದ ‘ಪರಿವರ್ತನೆ’ ಕಥೆಗೆ ದೊರೆತಿದೆ.