ಮಡಿಕೇರಿ, ಸೆ. 25: ದೂರ ಶಿಕ್ಷಣ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ (ಡಿ.ಸಿ.ಎಂ) ಕೋರ್ಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
2020-2021 ದೂರ ಶಿಕ್ಷಣ ಡಿಸಿಎಂ ಕೋರ್ಸ್ ಸಹಕಾರ ಸಂಘ/ಸಂಸ್ಥೆಗಳ ಸಿಬ್ಬಂದಿಗಳಿಗೆ ಮಾತ್ರ ಮಡಿಕೇರಿ - ಹಾಸನ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೋರ್ಸ್ ಅವದಿ 6 ತಿಂಗಳು. ಅಧ್ಯಯನ ಸಾಹಿತ್ಯ ನೀಡಲಾಗುವುದು. ತರಬೇತಿ ಕೇಂದ್ರದಲ್ಲಿ ಪ್ರವೇಶ ಪ್ರಾರಂಭವಾಗಿದ್ದು, ಆನ್ಲೈನ್ ಮೂಲಕವೂ ಸಹ ಪ್ರವೇಶ ಪ್ರಾರಂಭವಾಗಿದೆ. 10 ದಿನಗಳ ಸಂಪರ್ಕ ತರಗತಿಗಳನ್ನು ನಡೆಸಲಾಗುವುದು. ಪದೋನ್ನತಿ ಹಾಗೂ ವಾರ್ಷಿಕ ಬಡ್ತಿಗೆ ಈ ಕೋರ್ಸ್ ಕಡ್ಡಾಯವಾಗಿದೆ. ಅವಶ್ಯಕತೆ ಇದ್ದಾಗ ಆನ್ಲೈನ್ ತರಗತಿಗಳನ್ನು ನಡೆಸಲಾಗುವುದು. ಅರ್ಜಿ ಪಡೆದು ಪ್ರವೇಶ ಪಡೆಯಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. ಆನ್ಲೈನ್ ಪ್ರವೇಶಾತಿಯ ಲಿಂಕ್ ತಿತಿತಿ. ಞsಛಿಜಿಜಛಿm.ಛಿo.iಟಿ ಹೈಬ್ರಿಡ್ ಮಾದರಿಯಲ್ಲಿ ಆಫ್ಲೈನ್ ಮತ್ತು ಆಲ್ಲೈನ್ ತರಗತಿಗಳು. ಹೆಚ್ಚಿನ ಮಾಹಿತಿಗೆ 08272-228437, 9845318364, 8762110952, 9535250704, 9449245024, 8762925862ನ್ನು ಸಂಪರ್ಕಿ ಸಬಹುದು ಎಂದು ಪ್ರಾಂಶುಪಾಲ ಡಾ. ಆರ್.ಎಸ್. ರೇಣುಕಾ ತಿಳಿಸಿದ್ದಾರೆ.