ಮಡಿಕೇರಿ, ಸೆ. 24: ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೊರೊನಾ ವೈರಸ್‍ನಿಂದ ಜೀವ ಕಳೆದುಕೊಂಡವರು ಲಕ್ಷಾಂತರ ಮಂದಿ, ಕೆಲಸ ಕಳೆದುಕೊಂಡವರು ಕೋಟ್ಯಂತರ, ಉದ್ಯಮ - ಉದ್ದಿಮೆಗಳಿಂದ ನಷ್ಟ ಅನುಭವಿಸಿ ಕಳೆದುಕೊಂಡವರು ಅದೆಷ್ಟೋ ಮಂದಿ, ಶಿಕ್ಷಣ ವಂಚಿತರಾದ ಮಕ್ಕಳ ಲೆಕ್ಕವೆಷ್ಟೋ..? ಈ ನಡುವೆ ಯಾವ್ಯಾವುದೋ ವೃತ್ತಿ ನಂಬಿ ಬದುಕುತ್ತಿದ್ದವರು ತಮ್ಮ ವೃತ್ತಿಯನ್ನೇ ಕೈಬಿಟ್ಟು ಬೀದಿ ಬದಿ ವ್ಯಾಪಾರಕ್ಕಿಳಿದವರು ಇನ್ನೆಷ್ಟೋ ಮಂದಿ, ಈ ಪೈಕಿ ಬಹುತೇಕರು ಕಂಡುಕೊಂಡಿದ್ದು, ತರಕಾರಿ ವ್ಯಾಪಾರವನ್ನ, ಹೊಟೇಲ್ ನಡೆಸುವವರು, ಆಟೋ ಚಾಲಕರು, ಪೈಂಟರ್, ಕಾರ್ಪೆಂಟರ್ ಕೆಲಸದವರು. ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಸ್ಪೈಸಸ್ ಅಂಗಡಿಯವರು, ಹೀಗೇ ಎಲ್ಲರೂ ತರಕಾರಿ ಮಾರಾಟಕ್ಕಿಳಿದಿದ್ದಾರೆ. ಕೊರೊನಾದಿಂದಾಗಿ ಲಾಕ್‍ಡೌನ್ ಜಾರಿಯಾದ ಸಂದರ್ಭದಲ್ಲಿ ಸಾಗಾಟ ಹಾಗೂ ಮಾರಾಟಕ್ಕೆ ತರಕಾರಿ ಮತ್ತು ಹಣ್ಣು - ಹಂಪಲುಗಳಿಗೆ ಮುಕ್ತ ಅವಕಾಶವಿತ್ತು. ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತರಕಾರಿ, ಹಣ್ಣು - ಹಂಪಲು ಮಾರಾಟಕ್ಕಿಳಿದವರು ಇದೀಗ ಅದನ್ನೇ ವ್ಯಾಪಾರ ವೃತ್ತಿಯನ್ನಾಗಿ ಮುಂದುವರಿಸಿರುವದು ಕಂಡು ಬರುತ್ತಿದೆ.ಲಾಕ್‍ಡೌನ್ ಸಂದರ್ಭದಲ್ಲಿ ಪಿರಿಯಾಪಟ್ಟಣ, ಹಾಸನ, ಸಕಲೇಶಪುರ ಮುಂತಾದೆಡೆಗಳಿಂದ ತಮ್ಮ ಅಥವಾ ಬಾಡಿಗೆ ವಾಹನಗಳಲ್ಲಿ ತರಕಾರಿ, ಹಣ್ಣು- ಹಂಪಲುಗಳನ್ನು ತಂದು ಮನೆ-ಮನೆಗೆ ಮಾರಾಟ ಮಾಡುತ್ತಿದ್ದವರು ಇದೀಗ ಅದನ್ನೇ ಮುಂದುವರಿಸಿ ಈ ಹಿಂದೆ ಇದ್ದಂತಹ ಅಂಗಡಿ, ಹೊಟೇಲ್‍ಗಳನ್ನು ತರಕಾರಿ ಅಂಗಡಿಯನ್ನಾಗಿಸಿಕೊಂಡಿದ್ದಾರೆ. ಲಾಕ್‍ಡೌನ್‍ಗಳಿಗಿಂತ ಮುಂಚೆ ಎಲ್ಲೆಂದರಲ್ಲಿ ಸ್ಪೈಸಸ್ - ಚಾಕೋಲೇಟ್ ಮಳಿಗೆಗಳೇ ಕಾಣಬರುತ್ತಿದ್ದವು. ಇದೀಗ ಎಲ್ಲೆಡೆ ತರಕಾರಿ ಅಂಗಡಿಗಳು ತಲೆ ಎತ್ತಿದ್ದು, ಸಾರ್ವಜನಿಕರಿಗೂ ಇದರಿಂದ ಬಹಳಷ್ಟು ಅನುಕೂಲಗಳಾಗುತ್ತಿವೆ. ಅಂಗಡಿಗಳಲ್ಲಿ ವ್ಯಾಪಾರ - ವಹಿವಾಟು ಅಷ್ಟೇನು ಇಲ್ಲದಿದ್ದರೂ ಗ್ರಾಹಕರಿಗೆ ಮಾತ್ರ ತಮ್ಮ ಮನೆಗಳ ಸಮೀಪವೇ ತರಕಾರಿಗಳು ಲಭಿಸುತ್ತಿರುವದರಿಂದ ಖುಷಿಯಾಗಿದ್ದಾರೆ.

ಹೊಟೇಲ್‍ನಲ್ಲಿ ತರಕಾರಿ

ಮಡಿಕೇರಿಯ ಕಾನ್ವೆಂಟ್ ಜಂಕ್ಷನ್‍ನಲ್ಲಿ ಈ ಹಿಂದಿನಿಂದಲೂ ‘ಕುಂಞಲಿ ಕ್ಯಾಂಟೀನ್’ ಈ ಹೆಸರು ಕೇಳದವರಿಲ್ಲ. ಆ ಹೊಟೇಲ್‍ನ ಮಾಲೀಕರು ತೀರಿಕೊಂಡ ಬಳಿಕ ಭಾಸ್ಕರ್ ಹಾಗೂ ಪ್ರಭಾಕರ್ ಸಹೋದರರು ಸೇರಿಕೊಂಡು ಪೂಜಾ ಕ್ಯಾಂಟೀನ್ ಹಾಗೂ ಭಾಸ್ಕರ್ ಅಂಡ್ ಬ್ರದರ್ಸ್ ಎಂಬ ಹೊಟೇಲ್ ತೆರೆದು ಸೇವೆಯನ್ನು ಮುಂದುವರಿಸಿದರು. ರುಚಿ ಹಾಗೂ ಗುಣಮಟ್ಟ ಕಾಯ್ದುಕೊಂಡು ಬಂದುದರಿಂದ ಉದ್ಯಮ ಚೆನ್ನಾಗಿಯೇ ಸಾಗುತಿತ್ತು. ಆದರೆ ಲಾಕ್‍ಡೌನ್ ಆರಂಭವಾದ ಬಳಿಕ ಕ್ಯಾಂಟೀನ್‍ನಲ್ಲಿ ತರಕಾರಿ ವ್ಯಾಪಾರ ಆರಂಭಿಸಿದರು. ಕ್ಯಾಂಟೀನ್ ಎದುರು ವ್ಯಾಪಾರ ನಡೆಸುತ್ತಿದ್ದವರು ಇದೀಗ ಅನ್‍ಲಾಕ್ ಆದ ಬಳಿಕ ಕ್ಯಾಂಟೀನ್ ಒಳಗಡೆಯೇ ವ್ಯಾಪಾರ ಆರಂಭಿಸಿದ್ದಾರೆ. ‘ಕೊರೊನಾ ಬಂದ ಮೇಲೆ ಹೊಟೇಲ್ ವ್ಯಾಪಾರವೇ ಇಲ್ಲದಾಗಿದೆ. ಹಾಗಾಗಿ ಕ್ಯಾಂಟೀನ್‍ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದೇವೆ. ದಿನದಿಂದ ದಿನಕ್ಕೆ ಬೆಲೆ ಕೂಡ ಏರಿಕೆಯಾಗುತ್ತಿರುವದರಿಂದ ವ್ಯಾಪಾರವೂ ಕಡಿಮೆ. ಇನ್ನೊಂದು ಹೊಟೇಲ್ ಇರುವದರಿಂದ ಹೇಗೋ ಸುಧಾರಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಭಾಸ್ಕರ್ ಹಾಗೂ ಪ್ರಭಾಕರ್ ಹೇಳುತ್ತಾರೆ.‘ (ಮೊದಲ ಪುಟದಿಂದ) ಪ್ರತಿದಿನ ಬೆಳ್ಳಂಬೆಳಗೆ ಪಿರಿಯಾಪಟ್ಟಣ - ಹುಣಸೂರಿಗೆ ತೆರಳಿ ತರಕಾರಿ ತರುತ್ತೇವೆ. ಅಲ್ಲಿ ಸಿಗದಿದ್ದಲ್ಲಿ ಒಮ್ಮೊಮ್ಮೆ ಮೈಸೂರಿಗೂ ಹೋಗಬೇಕಾಗುತ್ತದೆ. ಅಂದಿನ ದರಕ್ಕೆ ಮಾರಾಟ ಮಾಡುತ್ತೇವೆ. ಎಲ್ಲವೂ ಸರಿಯಾಗಿ ಎಂದಿನಂತಾದರೆ ಕ್ಯಾಂಟೀನ್ ತೆರೆಯಲಾಗುವುದು. ಇಲ್ಲವಾದಲ್ಲಿ ಇದನ್ನೇ ಮುಂದುವರಿಸುತ್ತೇವೆ’ ಎಂದು ಅವರುಗಳು ಹೇಳುತ್ತಾರೆ.

ತರಕಾರಿ ವ್ಯಾಪಾರಕ್ಕಿಳಿದ ಅಕ್ಷರ ದಾಸೋಹ ಉದ್ಯೋಗಿ

ಮಡಿಕೇರಿ: ಸರಕಾರದ ಅಕ್ಷರ ದಾಸೋಹ ಕಚೇರಿಯಲ್ಲಿ ಕೆಲಸಮಾಡುತ್ತಿದ್ದ ಮಹಿಳೆ ಇದೀಗ ಕೆಲಸ ಕಳೆದುಕೊಂಡು ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ. 6 ವರ್ಷಗಳ ಹಿಂದೆ ಮಡಿಕೇರಿಯ ನಿವಾಸಿ ಭಾನುಮತಿ ಅವರಿಗೆ ನಗರದ ಅಕ್ಷರ ದಾಸೋಹ ಯೋಜನೆ ಸಂಬಂಧ ಕಚೇರಿ ಕೆಲಸ ಲಭಿಸಿದ್ದು ಮಾಸಿಕ ಸುಮಾರು ರೂ.11,000 ದುಡಿಯುತ್ತಿದ್ದರು. ಕೊರೊನಾ ಸಂಬಂಧ ಲಾಕ್‍ಡೌನ್ ಘೋಷಣೆಯಾದ ಬಳಿಕ ಮಾರ್ಚ್ ಅಂತ್ಯದಲ್ಲಿ ಕೆಲಸ ಕಳೆದುಕೊಂಡರು. ರಾಜ್ಯಾದ್ಯಂತ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 400 ಮಂದಿ ಕೆಲಸವನ್ನು ಕಳಡದುಕೊಂಡಿರುವುದಾಗಿ ಭಾನುಮತಿ ಹೇಳುತ್ತಾರೆ. ಭಾನುಮತಿಯ ಪತಿ ಈ ಹಿಂದೆ ಚಾಲಕ ವೃತ್ತಿ ನಂಬಿಕೊಂಡಿದ್ದರು, ನಂತರ ಏಡಿ ಮಾರುವ ಕೆಲಸದಲ್ಲಿ ತೊಡಗಿಸಿಕೊಂಡರು. ಮಳೆಗಾಲದಲ್ಲಿ ಏಡಿ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಇಬ್ಬರಿಗೂ ಕೆಲಸವಿಲ್ಲದ ಕಾರಣ ತರಕಾರಿ ವ್ಯಾಪಾರ ವೃತ್ತಿಗೆ ಕಾಲಿಟ್ಟು ಖರ್ಚಿಗೆ ಆಗುವಷ್ಟು ಹಣ ಸಂಪಾದಿಸುತ್ತಿರುವುದಾಗಿ ಭಾನುಮತಿ ಹೇಳುತ್ತಾರೆ. ತನ್ನ 17 ವರ್ಷದ ಮಗಳು 10ನೇ ತರಗತಿಯಲ್ಲಿ ಒಳ್ಳೆಯ ಫಲಿತಾಂಶ ಗಳಿಸಿದ್ದು ಪಿ.ಯು ವಿದ್ಯಾಭ್ಯಾಸಕ್ಕೆ ಖಾಸಗಿ ಕಾಲೇಜಿಗೆ ಸೇರಿಸಲು ಶುಲ್ಕದ ಮೊತ್ತ ಜಾಸ್ತಿ ಇರುವ ಕಾರಣ ಸರಕಾರಿ ಕಾಲೇಜಿಗೆ ಸೇರಿಸಿದ್ದಾರೆ. ಮಂದುವರೆದು ನಿತ್ಯ ಖರ್ಚಿಗೆ ಆಗುವಷ್ಟು ಪರಿಚಿತ ಹಲವು ಮಂದಿಗಳಿಂದ ಸಾಲ ಮಾಡಿ ನಗರದ ಕಾನ್ವೆಂಟ್ ಜಂಕ್ಷನ್ ಬಳಿ ನೂತನ ತರಕಾರಿ ಅಂಗಡಿ ತೆರೆದಿದ್ದಾರೆ.

ಸಮಯದಲ್ಲಿ ಐಸ್ ಕ್ಯಾಂಡಿ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಆದರೆ ಕೊರೊನಾ ವೈರಸ್‍ನ ಆತಂಕ ಶುರುವಾದಾಗಿನಿಂದ ಇವರ ಉದ್ಯೋಗವೇ ಬದಲಾಗಿದ್ದು, ಇದೀಗ ಜೀವನಕ್ಕಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.

ತಮ್ಮ ಮನೆಯ ಮುಂಭಾಗ ಇದ್ದ ಜಾಗದಲ್ಲಿ ಅಂಗಡಿ ನಿರ್ಮಿಸಲು ಸಾಲಕ್ಕಾಗಿ ಬ್ಯಾಂಕ್‍ಗಳಿಗೆ ಅಲೆದಾಡಿದರೂ ಕೊರೊನಾ ಕಾರಣ ನೀಡಿ ಯಾವ ಬ್ಯಾಂಕ್‍ನವರೂ ಸಾಲ ನೀಡಿಲ್ಲ. ಇದರಿಂದಾಗಿ ಅವರಿವರೊಂದಿಗೆ ಕೈ ಸಾಲ ಮಾಡಿ, ಅಂಗಡಿ ನಿರ್ಮಿಸಿದ್ದು, ಇದೀಗ ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ.

ಕೊರೊನಾದಿಂದಾಗಿ ಸಭೆ ಸಮಾರಂಭಗಳೂ ಇಲ್ಲದಿರುವದರಿಂದ ಧ್ವನಿವರ್ಧಕಕ್ಕೂ ಬೇಡಿಕೆ ಇಲ್ಲ. ಬೇಸಿಗೆಯಲ್ಲಿ ಕೊರೊನಾ ವ್ಯಾಪಕವಾಗಿದ್ದರಿಂದ ಐಸ್ ಕ್ಯಾಂಡಿಯನ್ನೂ ಮಾರಾಟ ಮಾಡಲಾಗಲಿಲ್ಲ. ಇದರಿಂದಾಗಿ ಜೀವನದ ಅನಿವಾರ್ಯತೆಗೆ ತರಕಾರಿ ಅಂಗಡಿ ಇಟ್ಟುಕೊಂಡಿದ್ದಾರೆ.

ಇವರ ಪತ್ನಿಯೂ ವಿಶೇಷಚೇತನರಾಗಿದ್ದು, ಮಗಳು ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಸರ್ಕಾರದಿಂದ ವಿಶೇಷಚೇತನ ವೇತನವಾಗಿ ಈರ್ವರಿಗೂ ತಲಾ 1400 ಲಭಿಸುತ್ತಿದ್ದು, ಕಳೆದೆರಡು ತಿಂಗಳ ಹಣ ಬಾರದೇ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತರಕಾರಿ ಮಾರಾಟ ಮಾಡಿ ಸಂಗಮೇಶ್ ಅವರು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.

ತರಕಾರಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಇಬ್ಬರೂ ವಿಶೇಷಚೇತನರಾಗಿರುವದರಿಂದ ಬೇರೆ ಉದ್ಯೋಗ ಮಾಡಲು ಅಸಾಧ್ಯವಾಗಿದೆ. ಉಳಿಕೆಯಾಗುವ ತರಕಾರಿ ಕೊಳೆತರೆ ಇನ್ನಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಕೊರೊನಾದಿಂದಾಗಿ ಜೀವನದ ನೆಮ್ಮದಿಯೇ ಹಾಳಾಗಿದ್ದು, ಅನಿವಾರ್ಯವಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ಸಂಗಮೇಶ್ ಅನುಭವ ಹಂಚಿಕೊಂಡಿದ್ದಾರೆ.

ಸ್ಥಳದಲ್ಲಿ ತರಕಾರಿ ಅಂಗಡಿ ನಡೆಸುತ್ತಿದ್ದಾರೆ. ಆದರೂ ಇದೀಗ ಕೊಂಚ ನೆಮ್ಮದಿಯಿಂದ ಜೀವನ ಸಾಗಿಸುತ್ತಿರುವ ಇಸ್ರಾಲ್ ತರಕಾರಿ ಅಂಗಡಿಯನ್ನೆ ಮುಂದುವರಿಸಿಕೊಂಡು ಹೋಗುವ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಆಟೋದಲ್ಲಿ ತರಕಾರಿ

ಕಣಿವೆ: ಕೂಡುಮಂಗಳೂರು ಗ್ರಾಮದ ಜೋಸೆಫ್ ಎಂಬವರು ಈ ಮೊದಲು ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ಪತ್ನಿ ಗಂಗೆ ಸೊಪ್ಪು ವ್ಯಾಪಾರ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಈ ದಂಪತಿಗಳ ಆ ಎರಡೂ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಅಂದರೆ ಸೊಪ್ಪು ವ್ಯಾಪಾರ ಕುಗ್ಗಿತು. ಪ್ಯಾಬ್ರಿಕೇಷನ್ ಕೆಲಸವೂ ತಗ್ಗಿತು. ಬಳಿಕ ಜೀವನ ನಿರ್ವಹಣೆಗೆ ಬಾಡಿಗೆ ಆಟೋ ಪಡೆದು ದಿನವಿಡೀ ತಾಜಾ ತರಕಾರಿ ವ್ಯಾಪಾರ ಮಾಡುತ್ತಾ ಅದರಲ್ಲಿ ಬದುಕು ನಡೆಸುತ್ತಿರುವ ಈ ದಂಪತಿಗಳು ಪಿರಿಯಾಪಟ್ಟಣಕ್ಕೆ ಪ್ರತಿ ದಿನ ಮುಂಜಾನೆ ಆಟೋದಲ್ಲೇ ತೆರಳಿ ತಾಜಾ ತರಕಾರಿ, ಕಾಯಿಗಳನ್ನು ತಂದು ಕೂಡಿಗೆ, ಕಣಿವೆ, ಗುಮ್ಮನಕೊಲ್ಲಿ, ಮುಳ್ಳುಸೋಗೆ ಮೊದಲಾದ ಕಡೆಗಳಿಗೆ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ವ್ಯಾಪಾರ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಜೋಸೆಫ್ ತಮ್ಮ ಅನುಭವ ಹಂಚಿಕೊಂಡದ್ದು ಹೀಗೆ ಕಳೆದ ಆರು ತಿಂಗಳಿಂದ ಕೊರೊನಾ ಎಂಬ ಮಹಾಮಾರಿ ಜನಸಾಮಾನ್ಯರು ಅನೇಕರು ನಡೆಸುವ ಮೂಲ ವೃತ್ತಿಗಳ ಬುಡಕ್ಕೆ ಬೆಂಕಿ ಇಟ್ಟಿತು. ಅದರಲ್ಲೂ ನನಗಂತು ಜೀವನವೇ ಜಿಗುಪ್ಸೆಯಾಗಿತ್ತು. ಲಾಕ್‍ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದು ಸಾಕಾಯಿತು. ಮನೆಯಿಂದ ಹೊರಹೋಗಲಾರದೇ, ದುಡಿಯಲೂ ಕೂಲಿಯೂ ಇಲ್ಲದೇ, ಖರ್ಚು ಮಾಡಲು ಹಣವೂ ಇಲ್ಲದೇ ಜೀವನವೇ ಸಾಕು ಸಾಕಾಗಿ ಹೋಗಿತ್ತು. ಅಷ್ಟರಲ್ಲಿ ನನ್ನ ಸಂಬಂಧಿಯೊಬ್ಬರ ಬಳಿ ಆಟೋ ಒಂದಿತ್ತು. ಅವರಿಗೆ ದಿನವೊಂದಕ್ಕೆ ತಲಾ 200 ರೂ. ಗಳ ಬಾಡಿಗೆ ಮಾತನಾಡಿಕೊಂಡೆ.

ನನ್ನ ಸಹೋದರಿಯಿಂದ 3000 ಸಾವಿರ ಹಣವನ್ನು ಸಾಲಕ್ಕೆ ಪಡೆದುಕೊಂಡೆ. ಆಟೋಕ್ಕೆ ಪ್ರತಿ ದಿನ 300 ರೂ ಡೀಸೆಲ್ ಹಾಕಿಕೊಂಡು, 2000 ರೂ.ಗಳಿಂದ 3000 ರೂಗಳಿಗೆ ತರಕಾರಿ ಖರೀದಿಸಿ ತರುತ್ತೇನೆ. ಒಂದೊಂದು ದಿನ ಒಂದೊಂದು ವ್ಯಾಪಾರ. ಕೆಲವು ದಿನ ವಾರದ ಲಾಭ ಒಂದೇ ದಿನವೂ ಆದದ್ದಿದೆ. ಕೆಲವು ದಿನ ಮನಸಿಗೆ ಹಿತವಾಗುವಷ್ಟು ಲಾಭ ಆಗುತ್ತೆ. ಏನು ಮಾಡೋದು. ಸದ್ಯ ವ್ಯಾಪಾರ ಸಮಾಧಾನ ತಂದಿದೆ ಎನ್ನುತ್ತಾರೆ. ‘ಒಂದು ಸರಿ ಈ ರೋಗ ನಮ್ ದೇಶ ಬಿಟ್ಟು ಹೋಗಬೇಕು ಸರ್. ಕೆಲವರು ನಮ್ಮ ಬಳಿ ತರಕಾರಿ ತಗೊಳ್ಳೋಕು ಹಿಂದು ಮುಂದೆ ನೋಡ್ತಾರೆ. ಏನು ಮಾಡೋದು. ಆದರೂ ಗ್ರಾಹಕರೇ ದೇವರಲ್ಲವೆ. ನಮ್ ವೃತ್ತಿಯನ್ನು ನಾವು ಶ್ರದ್ಧೆಯಿಂದ ಮಾಡ್ತಾ ಇದ್ದೇವೆ ಸರ್’ ಎನ್ನುತ್ತಾರೆ ಜೋಸೆಫ್ ಪತ್ನಿ ಗಂಗೆ.

ಮಾರುಕಟ್ಟೆಯಿಂದ ರಸ್ತೆ ಬದಿಗೆ

ವೀರಾಜಪೇಟೆ : ವೀರಾಜಪೇಟೆ ಖಾಸಗಿ ಬಸ್ಸು ನಿಲ್ದಾಣದ ಬಳಿಯ ಸಂತೆ ಮಾರುಕಟ್ಟೆಯಲ್ಲಿ ಸಗಟು ತರಕಾರಿ, ಆಲೂಗೆಡ್ಡೆ, ಈರುಳ್ಳಿ ವ್ಯವಹಾರ ಮಾಡುತ್ತಿದ್ದ ಸಫೂಲ್ ಎಂಬುವರು ಕೊರೊನಾ ವೈರಸ್ ಹಿನ್ನಲೆಯಲ್ಲಿ ಈಗ ಒಂದು ತಿಂಗಳ ಹಿಂದೆ ಇಲ್ಲಿನ ಮಾಂಸ ಮಾರುಕಟ್ಟೆಯ ಬಳಿಯಲ್ಲಿ ಹೊಸದಾಗಿ ಚಿಲ್ಲರೆ ತರಕಾರಿ ಅಂಗಡಿಯನ್ನು ಆರಂಭಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದ ಜನರು ಪಟ್ಟಣಕ್ಕೆ ಬಾರದಿರುವುದರಿಂದ ತರಕಾರಿ ವ್ಯಾಪಾರ ಕುಂಠಿತಗೊಂಡಿದೆ. ವ್ಯಾಪಾರ ಕಡಿಮೆಯಾದ ಕಾರಣ ಹೆಚ್ಚಿನ ಲಾಭವನ್ನು ನಿರೀಕ್ಷಿಸುವಂತಿಲ್ಲ. ಆದರೆ ತಾಜಾ ತರಕಾರಿಯನ್ನು ಗ್ರಾಹಕರಿಗೆ ವಿತರಿಸುತ್ತಿರುವುದರಿಂದ ನಮಗೆ ಈ ವ್ಯವಹಾರ ತೃಪ್ತಿ ತಂದಿದೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಗಟು ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ. ಈ ವ್ಯವಹಾರ ಚೇತರಿಸಿಕೊಳ್ಳಬೇಕಾದರೆ ಅನೇಕ ತಿಂಗಳುಗಳು ಬೇಕಾಗಬಹುದು. ಕೊರೊನಾ ಎಂಬ ಮಹಾಮಾರಿ ಹಿಂದಿನ ಜೀವನದ ಮಾದರಿಯನ್ನೇ ಬದಲಾಯಿಸಲು ಹೊರಟಿದೆ ಎಂಬುದು ತರಕಾರಿ ವ್ಯಾಪಾರಿ ಸಫೂಲ್ ಅಭಿಪ್ರಾಯವಾಗಿದೆ.

ಹೊಸದಾಗಿ ವ್ಯಾಪಾರ

ವೀರಾಜಪೇಟೆ : ಕೊರೊನಾ ಸಾಂಕ್ರಾಮಿಕ ವೈರಸ್‍ನ ನಿರ್ಬಂಧದಿಂದ ಸಗಟು ತೆಂಗಿನಕಾಯಿ ವ್ಯಾಪಾರ ಸ್ಥಗಿತಗೊಂಡು ಜೀವನ ಸುಧಾರಣೆಗೆ ಕಷ್ಟ ಸಾಧ್ಯವಾಗಿತ್ತು. ಇದರಿಂದಾಗಿ ತೆಂಗಿನ ವ್ಯಾಪಾರ ಕೈ ಬಿಟ್ಟು ತರಕಾರಿ ವ್ಯಾಪಾರ ಪ್ರಾರಂಭಿಸಿರುವುದಾಗಿ ತರಕಾರಿ ವ್ಯಾಪಾರಿ ಮುಕ್ತಾರ್ ಬಾಷ ತಿಳಿಸುತ್ತಾರೆ.

ಕೊರೊನಾ ನಿರ್ಬಂಧ ಸಡಿಲಗೊಂಡರೂ ಕೇರಳ, ಕೆ.ಆರ್.ನಗರ, ಚನ್ನರಾಯಪಟ್ಟಣ ಸೇರಿದಂತೆ ತೆಂಗಿನಕಾಯಿ ಸರಬರಾಜಿಗೆ ಹಿನ್ನಡೆ ಉಂಟಾಯಿತು. ಇದರಿಂದ ಬೇಸತ್ತು ತರಕಾರಿ ವ್ಯಾಪಾರ ಆರಂಭಿಸಬೇಕಾಯಿತ್ತೆಂದೂ ಇಲ್ಲಿನ ಖಾಸಗಿ ಬಸ್ಸು ನಿಲ್ದಾಣದ ಏಕಮುಖ ಸಂಚಾರದ ರಸ್ತೆಯಲ್ಲಿರುವ ತರಕಾರಿ ವ್ಯಾಪಾರಿ ಮುಕ್ತಾರ್ ಬಾಷಾ ಅವರು ಜೀವನ ನಿರ್ವಹಣೆಗೆ ಬೇರೆ ವಿಧಿ ಇಲ್ಲದೆ ತರಕಾರಿ ವ್ಯಾಪಾರಕ್ಕೆ ಇಳಿಯಬೇಕಾಯಿತು ಎನ್ನುತ್ತಾರೆ.

ಕಳೆದ ಐದು ತಿಂಗಳುಗಳಿಂದ ಯಾವುದೇ ವ್ಯವಹಾರವಿಲ್ಲದೆ ತೊಂದರೆ ಅನುಭವಿಸಬೇಕಾಯಿತು. ಈಗ ತರಕಾರಿ ವ್ಯಾಪಾರ ಗ್ರಾಹಕರಿಲ್ಲದೆ ಕುಂಠಿತಗೊಂಡು ಸಾಗುತ್ತಿದ್ದರೂ ಮುಂದೆ ಉತ್ತಮ ವ್ಯಾಪಾರ ಲಭಿಸಲಿದೆ ಎಂಬ ನಿರೀಕ್ಷೆ ಇದೆ. ತರಕಾರಿ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಸರಬರಾಜಾಗುತ್ತಿದೆ. ತಾಜಾ ತರಕಾರಿ ಇದ್ದರೂ ವೀರಾಜಪೇಟೆ ಪಟ್ಟಣಕ್ಕೆ ಗ್ರಾಮಾಂತರದಿಂದಲೂ ಜನರು ಬರಬೇಕಿದೆ. ಗ್ರಾಮಾಂತರ ಜನರು ಮುಕ್ತವಾಗಿ ಪಟ್ಟಣಕ್ಕೆ ಬರಲು ಇನ್ನೂ ಸಮಯಾವಕಾಶ ಬೇಕಾಗಿದೆ ಎಂದು ಬಾಷಾ ತಿಳಿಸಿದರು.

ಬಾರ್ ಕೆಲಸ ಬಿಟ್ಟು ತರಕಾರಿ

ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಬೆರಳೆಣಿಕೆಯಷ್ಟಿದ್ದ ತರಕಾರಿ ಅಂಗಡಿಗಳು ಲಾಕ್‍ಡೌನ್ ತೆರವು ಬಳಿಕ ಮೂರು ಪಟ್ಟು ಹೆಚ್ಚಳಗೊಂಡಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ.

ಏಪ್ರಿಲ್-ಮೇ ತಿಂಗಳಲ್ಲಿ ರಾಜ್ಯದಲ್ಲಿ ಲಾಕ್‍ಡೌನ್ ಘೋಷಿಸಿದ ಬೆನ್ನಲ್ಲೇ ಬಹುತೇಕ ಮಂದಿ ಜೀವನೋಪಾಯಕ್ಕೆ ಹಲವು ರೀತಿಯ ವ್ಯಾಪಾರ ವಹಿವಾಟಿಗೆ ಚಿಂತಿಸುವುದರೊಂದಿಗೆ ಅಂತಿಮವಾಗಿ ತರಕಾರಿ ವ್ಯಾಪಾರ ಕೂಡ ಆರಂಭಿಸಿದ್ದರು. ಆಟೋ, ಟ್ಯಾಕ್ಸಿ ಚಾಲಕರು, ಕ್ಯಾಂಟಿನ್ ಇನ್ನಿತರ ಸಣ್ಣ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಮಂದಿ ಲಾಕ್‍ಡೌನ್ ಸಂದರ್ಭ ತರಕಾರಿ ಮಾರಾಟದಿಂದ ಜೀವನ ಸಾಗಿಸಿದ್ದರು. ಇದೀಗ ಲಾಕ್‍ಡೌನ್ ತೆರವಾದ ಬಳಿಕ ಬಹುತೇಕರು ತಮ್ಮ ತಮ್ಮ ಮೂಲ ಕಸುಬುಗಳಿಗೆ ಹಿಂತಿರುಗಿದರಾದರೂ ಮತ್ತೆ ಕೆಲವರು ಮಾತ್ರ ತರಕಾರಿ-ಹಣ್ಣು ವ್ಯಾಪಾರಕ್ಕೆ ಕೈಹಾಕಿದ್ದಾರೆ.

ಪ್ರಸಕ್ತ ಯಾವುದೇ ಉದ್ಯಮಗಳು ಕೈಹಿಡಿಯದಿರುವ ಸ್ಥಿತಿಯಲ್ಲಿ ಸಣ್ಣ ಬಂಡವಾಳ ಹೂಡಿ ಹಾಸನ, ಮೈಸೂರು ಭಾಗಗಳಿಂದ ತರಕಾರಿ ಖರೀದಿಸಿ ಮಾರಾಟ ನಡೆಸುತ್ತಿದ್ದಾರೆ. ಸಂತೆ ವ್ಯಾಪಾರ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ಹಲವು ಮಂದಿ ವಾಣಿಜ್ಯ ಮಳಿಗೆಗಳನ್ನು ಬಾಡಿಗೆ ಪಡೆದು ತರಕಾರಿ ವ್ಯಾಪಾರ ಶುರುವಿಟ್ಟುಕೊಂಡರು. ಹಾದಿ, ಬೀದಿ ಗಲ್ಲಿ ಗಲ್ಲಿಗಳಲ್ಲಿ ಕೂಡ 25 ಕ್ಕೂ ಅಧಿಕ ಕಡೆಗಳಲ್ಲಿ ತರಕಾರಿ ವ್ಯಾಪಾರ ಕಂಡುಬರುತ್ತಿದೆ. ಬಳಿಕ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದರಾದರೂ ಪಟ್ಟಣದಲ್ಲಿ ಬೆರಳೆಣಿಯಷ್ಟಿದ್ದ ತರಕಾರಿ ಅಂಗಡಿಗಳು ಸಂಖ್ಯೆ 20 ಕ್ಕೂ ಮೀರಿರುವುದು ಕಾಣಬಹುದು. ನೆರೆಯ ಕೊಪ್ಪ ವ್ಯಾಪ್ತಿಯಲ್ಲಿ ಕೂಡ ನೂತನ ತರಕಾರಿ ಅಂಗಡಿ ಮಳಿಗೆಗಳು ಆರಂಭಗೊಳ್ಳುವುದರೊಂದಿಗೆ ಬೀದಿ ಬದಿ ತರಕಾರಿ ವ್ಯಾಪಾರ ದೃಶ್ಯ ಕಂಡುಬರುತ್ತಿದೆ.

ಕಳೆದ ಹಲವು ವರ್ಷಗಳಿಂದ ಸ್ಥಳೀಯ ಮಡಿಕೇರಿ ರಸ್ತೆಯ ಬಾರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ ಇದೀಗ ಇದೇ ಹಾದಿ ಹಿಡಿದಿರುವುದು ಕಂಡುಬಂದಿದೆ. ಸ್ಥಳೀಯ ಬೈಪಾಸ್ ರಸ್ತೆಯ ಕಟ್ಟಡವೊಂದರಲ್ಲಿ ಅಂಗಡಿ ಬಾಡಿಗೆ ಪಡೆದು ತರಕಾರಿ ವ್ಯಾಪಾರದಲ್ಲಿ ತೊಡಗಿಕೊಂಡಿರುವ ದೃಶ್ಯ ಕಾಣಬಹುದು. ನಿರೀಕ್ಷಿಸಿದಂತೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಈ ಕಾರಣದಿಂದ ಸಣ್ಣ ಬಂಡವಾಳ ಹೂಡಿಕೆ ಮಾಡಿ ಹಣ್ಣು ತರಕಾರಿ ವ್ಯಾಪಾರ ಆರಂಭಿಸಿರುವುದಾಗಿ ಕಳೆದ 8 ವರ್ಷಗಳಿಂದ ಬಾರ್‍ನಲ್ಲಿ ಕರ್ತವ್ಯ ನಿರ್ವಹಿಸಿದ ಮಂಜುನಾಥ್ ‘ಶಕ್ತಿ’ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಗೊಂದಿಬಸವನಹಳ್ಳಿಯ ನಿವಾಸಿ ಮಂಜುನಾಥ್ ಈ ಮೂಲಕ ತನ್ನ ಪತ್ನಿ ಓರ್ವ ಪುತ್ರಿಯನ್ನು ಸಲಹುವ ನಿಟ್ಟಿನಲ್ಲಿ ಹೊಸ ವ್ಯಾಪಾರದಲ್ಲಿ ಹೊಸ ಕನಸೊಂದನ್ನು ಹೊತ್ತಿದ್ದಾರೆ.

ಪೈಂಟಿಂಗ್ ಕೆಲಸ ಬಿಟ್ಟರು

ಸಿದ್ದಾಪುರ: ನೆಲ್ಯಹುದಿಕೇರಿ ಗ್ರಾಮದ ಶಾಲೆಯ ರಸ್ತೆಯಲ್ಲಿ ವಾಸವಿರುವ ಮಣಿ ನಾರಾಯಣ ಎಂಬವರು ಕಳೆದ ಸುಮಾರು ವರ್ಷಗಳಿಂದ ಮನೆಗಳಿಗೆ ಬಣ್ಣ ಹಚ್ಚುವ ಹಾಗೂ ಪಾಲಿಶ್ ಕೆಲಸ ಮಾಡುವ ಪೈಂಟರ್ ವೃತ್ತಿಯನ್ನು ಮಾಡಿಕೊಂಡಿದ್ದರು. ಆದರೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬಸ್ಸು ಸೌಕರ್ಯಗಳು ಹಾಗೂ ವಾಹನ ಸಂಚಾರಗಳು ಇಲ್ಲದೇ ದೂರದ ಊರುಗಳಿಗೆ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ ಕೊರೊನಾ ವೈರಸ್ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಲಾಕ್‍ಡೌನ್ ಮುಂದುವರೆಯುತ್ತಿದ್ದಂತೆ ಸರ್ಕಾರವು ಕೆಲವು ನಿಬಂಧನೆಗಳನ್ನು ತಂದ ಸಂದರ್ಭದಲ್ಲಿ ಪೈಂಟಿಂಗ್ ಮಾಡುವ ಸಾಮಗ್ರಿಗಳು ಮಾರಾಟ ಅಂಗಡಿಗಳನ್ನು ಮುಚ್ಚಲಾಗುತ್ತಿತ್ತು. ಸಾಮಗ್ರಿಗಳು ಕೂಡ ಸಮರ್ಪಕವಾಗಿ ದೊರಕುತ್ತಿರಲಿಲ್ಲ.

ದಿನದಿಂದ ದಿನಕ್ಕೆ ಕೆಲಸಗಳು ಕೂಡ ಕಡಿಮೆಯಾಗುತ್ತಾ ಬಂದಿತು. ಇದರಿಂದ ವಿಚಲಿತರಾಗದ ಮಣಿಯವರು ಜೀವನ ಸಾಗಿಸಲು ಏನಾದರೂ ಕೆಲಸ ಮಾಡಬೇಕೆಂದು ಆಲೋಚಿಸಿದಾಗ ತರಕಾರಿ ವ್ಯಾಪಾರ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಮಣಿ ತಿಳಿಸಿದರು. ತರಕಾರಿ ಅಂಗಡಿ ಪ್ರಾರಂಭಿಸಲು ಹಣದ ಸಮಸ್ಯೆ ಎದುರಾಯಿತು. ನಂತರ ಬ್ಯಾಂಕಿನ ಮುಖಾಂತರ ಸಾಲ ಪಡೆದು ನೆಲ್ಯಹುದಿಕೇರಿಯ ಪಟ್ಟಣದ ಮುಖ್ಯ ರಸ್ತೆಯ ಶ್ರೀ ಮುತ್ತಪ್ಪ ದೇವಾಲಯದ ಬಳಿ ಮಳಿಗೆಯೊಂದನ್ನು ನಿರ್ಮಿಸಿ ತರಕಾರಿ ಹಾಗೂ ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಣಿ ನಾರಾಯಣ ತಾನು ಈ ಹಿಂದೆ ಪೈಂಟಿಂಗ್ ಕೆಲಸವನ್ನು ಮಾಡುತ್ತಿದ್ದೆ ಲಾಕ್‍ಡೌನ್‍ನಿಂದಾಗಿ ಕೆಲಸಗಳು ಕಡಿಮೆಯಾಗಿದೆ. ದೂರದ ಊರಿಗೆ ತೆರಳಲು ಬಸ್ಸುಗಳ ಸಂಚಾರ ಇಲ್ಲದೇ ತೊಂದರೆಗೆ ಸಿಲುಕಿಕೊಂಡಿದ್ದೆ. ಇದರಿಂದಾಗಿ ಜೀವನ ಸಾಗಿಸಲು ಸ್ವಯಂ ಉದ್ಯೋಗವಾಗಿ ತರಕಾರಿ ವ್ಯಾಪಾರ ಮಾಡಲು ನಿರ್ಧಾರ ಕೈಗೊಂಡೆ.

ಪ್ರಾರಂಭದಲ್ಲಿ ವ್ಯಾಪಾರ ಕಡಿಮೆಯಾಗಿದ್ದರೂ ಇದೀಗ ಉತ್ತಮವಾಗಿದ್ದು, ತಾನು ಹುಣಸೂರಿನಿಂದ ಬಾಡಿಗೆ ವಾಹನದಲ್ಲಿ ತರಕಾರಿಗಳನ್ನು ತಂದು ವ್ಯಾಪಾರ ಮಾಡುತ್ತಿದ್ದೇನೆ. ಇದೀಗ ನನ್ನ ಹಾಗೂ ಕುಟುಂಬ ನಿರ್ವಹಣೆಗೆ ತರಕಾರಿ ವ್ಯಾಪಾರದಿಂದ ಜೀವನ ಸಾಗಿಸಲು ಅನುಕೂಲವಾಗಿದ್ದು, ಲಾಭದಾಯಕದಿಂದ ಕೂಡಿದೆ. ಆದರೆ ಮದುವೆ ಸಮಾರಂಭಗಳು ಸರಳವಾಗಿ ನಡೆಯುತ್ತಿರುವುದರಿಂದ ಸಮಾರಂಭಗಳಿಗೆ ಹೆಚ್ಚಿನ ತರಕಾರಿಗಳನ್ನು ಸಾರ್ವಜನಿಕರು ಖರೀದಿಸುತ್ತಿಲ್ಲ ಎಂದರು. ತನ್ನ ವ್ಯಾಪಾರಕ್ಕೆ ನನ್ನ ಸಹೋದರ ಅಪ್ಪಿ ಸಹಕಾರ ನೀಡುತ್ತಿದ್ದಾರೆ ಎಂದ ಅವರು, ಕೊರೊನಾ ವೈರಸ್‍ನ ಭೀತಿಯಿಂದ ಯಾರೂ ಧೃತಿಗೆಡಬಾರದು, ಮೂಲ ವೃತ್ತಿಯಲ್ಲಿ ಕೆಲಸಗಳು ಇಲ್ಲದಿದ್ದಲ್ಲಿ ಬದಲಿ ವೃತ್ತಿಯನ್ನು ಮಾಡಿಕೊಂಡು ಜೀವನ ಸಾಗಿಸುವುದು ಉತ್ತಮ ಎಂದು ಮಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೌಂಡ್ ಸಿಸ್ಟಮ್ ಮಾಲೀಕ

ಸೋಮವಾರಪೇm É: ಕೊರೊನಾ ವೈರಾಣು ಇಡೀ ಜಗತ್ತನ್ನೇ ಆವರಿಸಿ, ಜನಜೀವನದ ಮೇಲೆ ಬಹಳಷ್ಟು ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ. ಹಲವರ ಉದ್ಯೋಗ, ವ್ಯಾಪಾರ, �