*ಕೊಡ್ಲಿಪೇಟೆ,ಸೆ.25: ಇಲ್ಲಿನ ಹೇಮಾವತಿ ರೋಟರಿ ಸಂಸ್ಥೆ ವತಿಯಿಂದ ಸ್ಥಳೀಯ ಮಹಿಳಾ ಸಮಾಜದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಡಾ. ಉದಯ್ ಕುಮಾರ್ ಅವರು, ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುತ್ತಿರುವ ರೋಟರಿ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಪಿ.ಯು.ಸಿ ಮತ್ತು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಾದ ಎಸ್.ಎಸ್.ಪಿ.ಯು ಕಿರಿಕೊಡ್ಲಿ ಶಾಲೆಯ ವಿ.ಆರ್. ಬೃಂದ, ಹತ್ತನೇ ತರಗತಿಯ ವಿ.ಆರ್. ಸುಕನ್ಯ, ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯ ಪಿಯುಸಿ ವಿದ್ಯಾರ್ಥಿ ನಿಶಾಂತ್ ಮಂಜು, ಹತ್ತನೇ ತರಗತಿಯ ನೂರೂಲ್ ಇಫ್ರಾ ಅವರುಗಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭ ಎಸ್.ಕೆ.ಎಸ್. ಕಲ್ಲುಮಠ ಶಾಲೆಯ ಚಂದ್ರಕಲಾ ಅವರಿಗೆ ಉತ್ತಮ ಶಿಕ್ಷಕಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ವೇದಿಕೆಯಲ್ಲಿ ನಿರ್ಗಮಿತ ರೊಟರಿ ಅಧ್ಯಕ್ಷ, ಪ್ರವೀಣ್, ನಿಕಟಪೂರ್ವ ಅಧ್ಯಕ್ಷ ದಿನೇಶ್ ಉಪಸ್ಥಿತರಿದ್ದರು. ಹೇಮಾವತಿ ರೋಟರಿ ಕೊಡ್ಲಿಪೇಟೆ ಅಧ್ಯಕ್ಷ ಹೆಚ್.ಎಂ. ದಿವಾಕರ್, ಪ್ರಧಾನ ಕಾರ್ಯದರ್ಶಿ ಅಮೃತ್‍ಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳ ಪೆÇೀಷಕರ್ಲು ಉಪಸ್ಥಿತರಿದ್ದರು.