ಶ್ರೀಮಂಗಲ, ಸೆ. 24 : ಹೈದರಾಬಾದ್ನಲ್ಲಿ ಸಿ.ಆರ್.ಪಿ.ಎಫ್. ಸುಬೇದಾರ್ ಆಗಿ ಸೇವೆಯಲ್ಲಿದ್ದ ದಕ್ಷಿಣ ಕೊಡಗಿನ ಕುರ್ಚಿ ಗ್ರಾಮದ ಅಜ್ಜಮಾಡ ಕಾರ್ಯಪ್ಪ ಅವರ ಪುತ್ರ ಅಜಿತ್ ಬೋಪಯ್ಯ (51) ಅವರು ಬುಧವಾರ ಹೈದರಬಾದ್ನಲ್ಲಿ ಅನಾರೋಗ್ಯದಿಂದ ನಿಧನರಾದರು.ಸೇವೆಯಲ್ಲಿದ್ದ ಸಂದರ್ಭ ದಿಢೀರಾಗಿ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗದೇ ಅಜಿತ್ ಬೋಪಯ್ಯ ಕೊನೆಯುಸಿರೆಳೆದಿದ್ದಾರೆ.ಸ್ವಗ್ರಾಮಕ್ಕೆ ತಾ.25ರಂದು (ಇಂದು) ರಾತ್ರಿ ಮೃತ ದೇಹ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದ್ದು, ಮೃತ ಅಜಿತ್ ಬೋಪಯ್ಯ ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ.