ವೀರಾಜಪೇಟೆ, ಸೆ. 24: ನಿನ್ನೆ ದಿನ ಸಂಜೆ 6.30ರ ಸಮಯದಲ್ಲಿ ಬಿಟ್ಟಂಗಾಲದ ಜಂಕ್ಷನ್‍ನ ಬಳಿಯಲ್ಲಿ ಮೋಟಾರ್ ಸೈಕಲ್‍ನಲ್ಲಿ ವೀರಾಜಪೇಟೆ ಕಡೆಗೆ ತೆರಳುತ್ತಿದ್ದ ಸವಾರರನ್ನು ತಪಾಸಣೆಗೊಳಪಡಿಸಿದಾಗ ಅಕ್ರಮ ಗಾಂಜಾ ಪತ್ತೆಯಾಗಿದ್ದು, ಗ್ರಾಮಾಂತರ ಪೊಲೀಸರು ಬೈಕ್, 45 ಗ್ರಾಂ ತೂಕದ ಗಾಂಜಾ ಸಮೇತ ಕಿರುಗೂರು ಗ್ರಾಮದ ಪಿ.ಯು. ಸೋಮಣ್ಣ, ಬಾಳುಗೋಡು ಗ್ರಾಮದ ಸಿ. ಬೋಪಣ್ಣ ಎಂಬಿಬ್ಬರನ್ನು ಬಂಧಿಸಿದ್ದಾರೆ.ಗೋಣಿಕೊಪ್ಪ ಕಡೆಯಿಂದ ಬಂದ ಮೋಟಾರ್ ಸೈಕಲ್‍ನ್ನು (ಕೆ.ಎ. 05 ಕೆಬಿ 6003) ಖಚಿತ ಸುಳಿವಿನ ಮೇರೆ ಡಿ.ವೈ.ಎಸ್.ಪಿ. ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ, ಸಬ್‍ಇನ್ಸ್‍ಪೆಕ್ಟರ್ ವೀಣಾ ನಾಯಕ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ತಪಾಸಣೆ ಮಾಡಿದಾಗ ಗಾಂಜಾ ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿದೆ. ಪೊಲೀಸರು ಈ ಸಂಬಂಧ ಆರೋಪಿಗಳ ಮೊೈಲ್‍ನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.